ಮೋದಿ- ಕರುಣಾ ಭೇಟಿ: ರಾಜಕೀಯ ಬಣ್ಣ ನೀಡಬೇಡಿ ಎಂದ ಡಿಎಂಕೆ
Team Udayavani, Nov 7, 2017, 7:25 AM IST
ಚೆನ್ನೈ: ಬಲು ಅಚ್ಚರಿಯ ಬೆಳವಣಿಗೆಯಲ್ಲಿ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿಯಾಗಿದ್ದಾರೆ. ಚೆನ್ನೈನಲ್ಲಿ ಹಲವಾರು ಕಾರ್ಯ ಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ಮೋದಿ, 20 ನಿಮಿಷಗಳ ಕಾಲ ಮಾಜಿ ಸಿಎಂ ಜತೆಗೆ ಇದ್ದರು. 93ರ ಹಿರಿಯ ನಾಯಕನ ಜತೆಗಿನ ಭೇಟಿ ಕೊನೇ ಕ್ಷಣದಲ್ಲಿ ನಿರ್ಧಾರ ವಾಗಿದ್ದು, ಇಲ್ಲಿ ರಾಜಕೀಯ ವಿಚಾರ ಚರ್ಚೆಯಾಗಿ ಯೇ ಇಲ್ಲ ಎಂದು ಡಿಎಂಕೆ ಹೇಳಿದೆೆ. ಇದು ಮೋದಿ ಪ್ರಧಾನಿಯಾದ ಬಳಿಕ ಕರುಣಾ ಜತೆಗಿನ ಮೊದಲ ಭೇಟಿ ಆಗಿದೆ.
ವಣಕ್ಕಂ ಸರ್: ಚೆನ್ನೈನ ಗೋಪಾಲಪುರಂನಲ್ಲಿರುವ ಡಿಎಂಕೆ ವರಿಷ್ಠ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ “ವಣಕ್ಕಂ ಸರ್’ ಎಂದು ಗೌರವ ಸೂಚಿಸಿದರು. ಗಾಲಿ ಕುರ್ಚಿಯಲ್ಲಿದ್ದ ಕರುಣಾನಿಧಿ ಸಮೀಪವೇ ಕುಳಿತ ಪ್ರಧಾನಿ ಮೋದಿ ಆಪ್ತ ಭಾವದಿಂದ ಹೆಗಲು ಮುಟ್ಟಿ ಆರೋಗ್ಯ ವಿಚಾರಿಸಿದರು. ಬಳಿಕ ಪ್ರಧಾನಿ ಮೋದಿ, ಆರೋಗ್ಯ ಸುಧಾರಿಸಿದ ಬಳಿಕ ಹೊಸದಿಲ್ಲಿಗೆ ಬನ್ನಿ ಎಂದು ಕರುಣಾರಿಗೆ ಆಹ್ವಾನ ನೀಡಿದರು. ಅದಕ್ಕೆ ಅವರು ಮುಗುಳ್ನಕ್ಕರು. ಪ್ರಧಾನಿ ಮೋದಿ ಡಿಎಂಕೆ ವರಿಷ್ಠ ನಾಯ ಕನ ಇಬ್ಬರು ಪತ್ನಿಯರಾದ ದಯಾಳು ಅಮ್ಮಾಳ್ ಮತ್ತು ರಜತಿ ಅಮ್ಮಾಳ್ ರನ್ನು ಭೇಟಿಯಾಗಿ ಕುಶಲ ವಿಚಾರಿಸಿದರು.
ಧಾವಿಸಿ ಬಂದ ಸ್ಟಾಲಿನ್: ಕೊನೆಯ ಕ್ಷಣದಲ್ಲಿ ಪ್ರಧಾನಿ-ಕರುಣಾ ಭೇಟಿ ನಿಗದಿಯಾಗಿದ ಹಿನ್ನೆಲೆಯಲ್ಲಿ ಶಾರ್ಜಾಕ್ಕೆ ತೆರಳ ಬೇಕಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ತಮ್ಮ ಕಾರ್ಯಕ್ರಮ ರದ್ದು ಮಾಡಿದರು. ಗೋಪಾಲಪುರಂನ ನಿವಾ ಸದ ಮುಂಭಾಗದಲ್ಲಿ ಖುದ್ದಾಗಿ ತಾವೇ ಪಿಎಂ ಮೋದಿ ಅವರನ್ನು ಶಾಲು ಹೊದಿಸಿ ಸ್ವಾಗತಿಸಿ, ಕರೆದೊಯ್ದರು. ಪ್ರಧಾನಿ ಜತೆಗಿನ ಭೇಟಿ ಬಳಿಕ ಕರುಣಾನಿಧಿ ಗಾಲಿ ಕುರ್ಚಿಯಲ್ಲಿ ಕೆಲ ಕ್ಷಣಗಳ ಕಾಲ ಕಾಣಿಸಿ ಕೊಂಡು ಬೆಂಬಲಿಗರತ್ತ ಕೈ ಬೀಸಿದರು. ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್, ಸಚಿವ ಪೊನ್ ರಾಧಾಕೃಷ್ಣನ್, ಡಿಎಂಕೆ ನಾಯಕಿ ಕನಿಮೋಳಿ ಇದ್ದರು.
2016ರಲ್ಲಿ ಔಷಧ ಸಂಬಂಧಿಯಿಂದ ಉಂಟಾದ ಅಲರ್ಜಿಯಿಂದಾಗಿ ಚಿಕಿತ್ಸೆ ಪಡೆಯಲಾರಂಭಿಸಿದ ಬಳಿಕ ಮಾಜಿ ಸಿಎಂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 2016ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಉಪಾ ಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಯಾಗಿ ದ್ದರು.
ತಪ್ಪು ಮಾಡುವ ಸ್ವಾತಂತ್ರ್ಯವಿಲ್ಲ
ಮಾಧ್ಯಮಗಳು ಸರಿಯಾದ ಅಂಶಗಳನ್ನೇ ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮಿಳು ದಿನಪತ್ರಿಕೆ “ದಿನತಂತಿ’ಯ ವಜ್ರಮಹೋತ್ಸವದಲ್ಲಿ ಮಾತನಾಡಿದ ಅವರು “ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಂಪಾದಕೀಯ ಸ್ವಾತಂತ್ರ್ಯ ವನ್ನು ಬಳಸಿಕೊಳ್ಳಬೇಕು. ಬರೆಯಲು ಸ್ವಾತಂತ್ರ್ಯ ಇದೆ ಎಂದರೆ ತಪ್ಪು ಮಾಹಿತಿ ನೀಡಲು ಸ್ವಾತಂತ್ರ್ಯ ಇದೆ ಎಂಬ ಅರ್ಥ ವಲ್ಲ’ ಎಂದರು. ಖಾಸಗಿ ಸಂಸ್ಥೆಗಳೇ ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ಹೊಂದಿದ್ದರೂ, ಅವುಗಳು ಸಾರ್ವಜನಿಕ ಹಿತಾಸಕ್ತಿಯನ್ನೇ ಹೊಂದಿವೆ ಎಂದರು ಪ್ರಧಾನಿ. ಶಾಂತಿಯುತವಾಗಿ ಸುಧಾರಣೆ ತರಲು ಅದೊಂದು ಮಾಧ್ಯಮ. ಚುನಾ ಯಿತ ಪ್ರತಿನಿಧಿಗಳು ಅಥವಾ ನ್ಯಾಯಾಂ ಗದಷ್ಟೇ ಹೊಣೆಗಾರಿಕೆಯನ್ನು ಹೊಂದಿದೆ ಎಂದರು ಪ್ರಧಾನಿ. ಈ ಕಾರ್ಯಕ್ರಮ ದಲ್ಲಿ ನಟ ರಜನಿಕಾಂತ್ ಅವರೂ ಭಾಗ ವಹಿಸಿದ್ದು, ಮೋದಿ ಅವರು ರಜನಿ ಕುಶಲೋಪರಿ ವಿಚಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.