ಮುತ್ತು ಉದುರಿಸೋ, ಮುದ್ದುಗುಮ್ಮ…


Team Udayavani, Nov 7, 2017, 11:38 AM IST

sumne-smile.jpg

ನಿನ್ನ ಕುರಿತು ನಾನು ದಿನಕ್ಕೊಂದು ಹೊಸ ಕನಸು ಕಾಣ್ತಾ ಇದೀನಿ. ಆದ್ರೆ ನಿನ್ನ ಕಡೆಯಿಂದ ಒಂದು ಸ್ಮೈಲ್‌ಕೂಡ ಇಲ್ಲ. ಹಿಂದಾಗೆª ಹೇಗೋ ಮಾರಾಯಾ? ಬಾಕಿ ಹುಡುಗೀರ ಜೊತೆ ತುಂಬಾ ಸ್ಟ್ರಿಕ್ಟ್ ಆಗಿಯೇ ಇರು. ಆದ್ರೆ ನನ್ನ ಜೊತೆ ಆದ್ರೂ ಜಾಲಿಯಾಗಿ ಮಾತಾಡದಿದ್ರೆ ಹೇಗೆ?

ಯಾವತ್ತಿನಿಂದ ಅಂತ ಸರಿಯಾಗಿ ನೆನಪಿಲ್ಲ. ಆದರೆ, ನನ್ನಲ್ಲೂ ನನಗೇ ಅರಿವಿಲ್ಲದೆ ಸ್ಪಲ್ಪ ಬದಲಾವಣೆಯಾಗಿದೆ. ಮುಗುಳುನಗೆಯಲ್ಲಿ ನಾಚಿಕೆ ತುಂಬಿದೆ. ಕಣ್ಣಲ್ಲಿ ಹೊಸ ಕನಸು ಮೂಡಿದೆ. ನಿನ್ನಲ್ಲಿ ಮಾತಾಡುವಾಗ ಮಾತ್ರ ಅದ್ಯಾಕೋ ಮಾತು ತೊದಲುತ್ತದೆ. ಕಣ್ಣು ನೆಲ ನೋಡುತ್ತದೆ. ಅಷ್ಟು ದೂರದಲ್ಲಿಯೇ ನಿಂತು ನೀನು ಅದೇನು ಮೋಡಿ ಮಾಡಿಬಿಟ್ಟೆಯೋ?

ಹುಡುಗಿಯರು ಅಂದ್ರೆ ಮಾರು ದೂರ ನಿಂತು ಮಾತಾಡುವವನು ನೀನು. ಬೇಕಾದಷ್ಟೇ ಮಾತು. ಅಗತ್ಯ ಇದ್ದರಷ್ಟೇ ನಗು. ಇದು ನನ್ನ ವ್ಯಕ್ತಿತ್ವ. ನಾನೋ ಬಾಯಿಬಡುಕಿ. ಸಿಲ್ಲಿ ಸಿಲ್ಲಿ ಜೋಕ್‌ಗೂ ಬಿದ್ದು ಬಿದ್ದು ನಗೋ ಮೆಂಟಲ್ಲು. ಆದರೆ, ಆ ನಿನ್ನ ಮೌನ ನನಗ್ಯಾಕೆ ಇಷ್ಟವಾಯ್ತು ಅನ್ನೋದು ಇನ್ನೂ ಸೋಜಿಗ. ಮುದ್ದುಗುಮ್ಮನಂತೆ ಬಾಯಿಬಿಡದೆ ಕುಳಿತಿರೋ ನೀನು ಅದ್ಯಾಕೋ ಇಷ್ಟವಾಗ್ತಿàಯ ಕಣೋ. ನೀನು ಸಿಟ್ಟು, ಸಿಡುಕಿಲ್ಲದ ಸುಂದರಾಂಗ. ಅದ್ಹೇಗೆ ನನ್ನ ಪರ್ಮಿಶನ್‌ ಇಲ್ಲದೆ ಮನಸ್ಸು ಕದ್ದುಬಿಟ್ಟೆ?

ನಾನು, ಅಪ್ಪ- ಅಮ್ಮ, ಕಾಡಿಸೋ ಗೆಳತಿಯರು ಅನ್ನೋ ಸುಂದರ ಲೋಕದಲ್ಲಿದ್ದವಳು ನಾನು. ಆದರೆ, ನೀ ಬಂದು ನಿನ್ನದೇ ಹೊಸ ಲೋಕವನ್ನೇ ನಿರ್ಮಿಸಿಬಿಟ್ಟೆ. ನನ್ನ ಕನಸುಗಳಲ್ಲೀಗ ನಿನ್ನದೇ ಸಿಂಹಪಾಲು. ಬೆಳಗ್ಗೆ ಮೊಬೈಲ್‌ ನೋಡೋ ಮುನ್ನ ಕಣ್ಮುಂದೆ ಬರೋನು ನೀನೇ. ಕಾಲೇಜಿಗೆ ಬರುವ ಧಾವಂತವೇನಿದ್ರೂ ಅದು ನಿನಗಾಗಿಯೇ. ನಾನು ಅಷ್ಟೆಲ್ಲಾ ಕಷ್ಟಪಟ್ಟು ಆಸ್ಥೆಯಿಂದ ರೆಡಿಯಾಗಿ ಬಂದರೆ ನಿನ್ನಿಂದ ಒಂದು ಮಾತಿಲ್ಲ.

ಅಟ್‌ಲೀಸ್ಟ್‌ ಒಂದು ಸ್ಮೈಲ್‌ ಕೂಡಾ ಇಲ್ಲ. ನಂಗೆ ಬೇಜಾರಿಲ್ಲ ಬಿಡೋ. ಹುಡುಗೀರನ್ನು ಕಂಡು ಸುಮ್ನೆ ಹಲ್ಲು ಕಿರಿಯೋನಲ್ಲ ನೀನು. ನಂಗದು ಗೊತ್ತು ಬಿಡು. ಆದರೂ, ಸುಮ್ನೆ ಒಂದ್‌ ಸ್ಮೈಲ್‌ ಕೊಟ್ರೆ ನಿನ್‌ ಗಂಟೇನು ಹೋಗುತ್ತೆ? ಪ್ರತಿಬಾರಿ ಎದುರಿಗೆ ಸಿಕ್ಕಾಗಲೂ ನಾನು ಸ್ಮೈಲ್‌ ಮಾಡಿ, ನೀನು ಸ್ಮೈಲ್‌ ಮಾಡದೆ ಹೋದಾಗ ಪೇಚಿಗೆ ಸಿಕ್ಕೋಳು ನಾನು. ಯಾಕೆ ಸುಮ್‌ ಸುಮ್ನೆ ನಗ್ತಿಯಾ? ಅಂತ ಗೆಳತಿಯರು ಅದೆಷ್ಟು ಸಾರಿ ರೇಗಿಸಿದ್ದಾರೆ ಗೊತ್ತಾ?

ಸುಮ್ನೆ ವಾಟ್ಸಾಪ್‌ನಲ್ಲಿ “ನೀನಂದ್ರೆ ಇಷ್ಟ ಕಣೋ’ ಅಂತ ಟೆಕ್ಸ್ಟ್ ಮಾಡಿಬಿಡೋಣ ಅನ್ಸುತ್ತೆ. ಟೈಪ್‌ ಮಾಡಿದ ಮೇಲೆ ಸೆಂಡ್‌ ಮಾಡಲು ಯಾಕೋ ಅಂಜಿಕೆ. ನೀ ರಿಪ್ಲೈ ಕೊಡದಿದ್ದರೆ? ಮರುದಿನ ಮತ್ತೆ ಕಾಲೇಜಲ್ಲಿ ಎದುರಿಗೆ ಸಿಕ್ಕರೆ ಏನ್‌ ಹೇಳಲಿ? ಬರೀ ಗೊಂದಲ. ಆದ್ರೆ ನಿನ್ನ ದೆಸೆಯಿಂದಾಗಿ ಹೆಚ್ಚು ಕಡಿಮೆ ನನಗೇನೋ ಆಗಿದೆ ಅನ್ನೋದಂತೂ ಪಕ್ಕಾ ಕನ್‌ಫರ್ಮ್.

ಈಗೀಗೆಲ್ಲಾ ರಾತ್ರಿ ಕನಸು ಬಿಟ್ಟು ಹಗಲು ಕನಸನ್ನೂ ಕಾಣೋಕೆ ಶುರು ಮಾಡಿದ್ದೀನಿ. ಮುಖ್ಯವಾದ ಮಾತೊಂದನ್ನ ಹೇಳಿಬಿಡ್ತೀನಿ ಕೇಳು. ಎಲ್ಲರಂತೆ ನನಗೆ ದೊಡ್ಡ ದೊಡ್ಡ ಕನಸುಗಳಿಲ್ಲ. ಐಷಾರಾಮಿ ಬಂಗಲೆ, ಕಾರು, ಒಡವೆಯ ಕನಸಿಲ್ಲ. ನೀನು, ನಿನ್ನ ಪ್ರೀತಿ, ಅಷ್ಟು ಸಾಕು ನಂಗೆ. ನಿನಗೆ ಬೇಡವಾದದ್ದು ನಂಗೂ ಬೇಡ. ನೀ ಬಂದ್‌ ಮೇಲೆ ನನ್‌ ಲೈಫೇ ಕಲರ್‌ಫುಲ್‌ ಆಗಿಹೋಗಿದೆ. ಹೀಗಿರುವಾಗ ಇನ್ನಾಕೆ ಬೇಕು ಬೇಡಗಳ ಗೊಡವೆ?

ನೋಡೂ, ನಾನು ಹೀಗೆ ಕೂತು ಕನಸು ಕಾಣೋದೇ ಬಂತು, ನಿನಗಂತೂ ನನ್ನ ಮನಸಿನ ತುಮುಲ ಅರ್ಥಾನೇ ಆಗಲ್ಲ. ಇನ್ನೇನು ನಾನೇ ಧೈರ್ಯ ಮಾಡಿ ಹೇಗಾದ್ರೂ ಹೇಳೆಬೇಕು. ನೀನಂದ್ರೆ ನಂಗೆ ನನ್ನ ಜೀವ ಟೆಡ್ಡಿಬೇರ್‌ಗಿಂತಲೂ ನೂರು ಪಟ್ಟು ಇಷ್ಟ ಅಂತ. ನನ್ನ ಪ್ರೀತೀನಾ ನೀನು ಒಪೊಳ್ತೀಯಾ ಅನ್ನೋ ಭರವಸೆಯಲ್ಲಿ..
ನಿನ್ನವಳೇ ಅಂತ ಅಂದ್ಕೊಂಡಿರೋ
ತನುವಿ

* ವಿನುತಾ, ಬೆಂಗಳೂರು

ಟಾಪ್ ನ್ಯೂಸ್

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

15-uv-fusion

Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.