ಡಿಜಿಟಲ್ ಬ್ಯಾಂಕ್ ನಿಂದ ಆರ್ಥಿಕ ಭದ್ರತೆ
Team Udayavani, Nov 7, 2017, 12:20 PM IST
ಆಳಂದ: ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಕರಣ ದಿಂದಾಗಿ ಅಭಿವೃದ್ಧಿ ಕಾಣುತ್ತಿದ್ದೇವೆ. ಅದರಲ್ಲೂ ಬ್ಯಾಂಕ್ ಡಿಜಿಟಲೀಕರಣ ದಿಂದ ಆರ್ಥಿಕ ಭದ್ರತೆ ಸಾಧ್ಯವಾಗಿದೆ ಎಂದು ಖಜೂರಿ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಮನೋರಮಾ ಕಲ್ಯಾಣ ಮಂಟಪದಲ್ಲಿ ಇಲ್ಲಿಯ ಎಸ್‌ಬಿಎಚ್ ಶಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿಜಿಟಲ್
ಬ್ಯಾಂಕ್ ವ್ಯವಹಾರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ನಮ್ಮ ಯಾವುದೇ ವ್ಯವಹಾರಗಳು ಹೆಚ್ಚಾಗಿ ಬ್ಯಾಂಕ್ ಅವಲಂಭಿಸಿವೆ. ಹೀಗಾಗಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಜಾರಿಗೊಳಿಸಿದೆ. ಹೊಸ ತಂತ್ರಜ್ಞಾನದಿಂದ ನಮ್ಮಲ್ಲಿನ ದೈನಂದಿನ ಆರ್ಥಿಕ ಚಟುವಟಿಕೆಗಳು ವ್ಯವಹರಿಸಲು
ಮುಂದಾಗಬೇಕು. ಇದರಿಂದ ಸಮಯದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಎಚ್ ಶಾಖಾ ವ್ಯವಸ್ಥಾಪಕ ರಂಗನಾಥ ನೂಲಿಕರ ಮಾತನಾಡಿ, ಡಿಜಿಟಲ್ ವ್ಯವಸ್ಥೆಯಲ್ಲಿ ಪೋಸ್ಟ್ ಮತ್ತು ಎಟಿಎಂ ಮತ್ತಿತರ ಸೇವೆಗಳಿವೆ. ಪ್ರತಿಯೊಬ್ಬರು ಮೊಬೈಲ್ ಬಳಕೆಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು. ಎಸ್‌ಬಿಐ ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೆಂಗೇರಿ ಮಾತನಾಡಿ, ಜೀವನದಲ್ಲಿ
ಬದಲಾವಣೆ ಮುಖ್ಯ. ಅದರೊಂದಿಗೆ ಆಧುನಿಕ ವ್ಯವಹಾರದಲ್ಲಿಯೂ ಡಿಜಿಟಲ್ ಪಾತ್ರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಉದ್ಯಮಿ ಜೊದಾರಾಮ ಅಡ್ವಾನಿ, ಮುಖಂಡರಾದ ಜಿ.ಎನ್. ಮುತ್ತುರಾಜ, ರೇವಣಪ್ಪ ನಾಗೂರೆ, ಅಪ್ಪಾಸಾಬ ತೀಥೆì,
ಸತೀಶ ಕಟಂಬಲೆ, ನರಸಪ್ಪ ಬಿರಾದಾರ, ತುಕಾರಾಮ ಹೆಬಳಿ, ನಿರಂಜನ ಶಹಾ, ಬ್ಯಾಂಕ್ ಡೆಪ್ಯೂಟಿ ವ್ಯವಸ್ಥಾಪಕ ಚೇತನಕುಮಾರ ಕೊಳಿ, ಸಹಾಯಕ ವ್ಯವಸ್ಥಾಪಕ ಅನಸೂಲ ಚವ್ಹಾಣ, ಮಹಾದೇವಮ್ಮ ಹಾಗೂ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.
ನ್ಯಾಯವಾದಿ ಪಿ.ಎನ್. ಶಹಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧನಂಜಯ ಡೊಲೆ ನಿರೂಪಿಸಿದರು. ನಂತರ ಡಿಜಿಟಲ್ ವ್ಯವಹಾರ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಪರದೆ ಮೂಲಕ ಗ್ರಾಹಕರಲ್ಲಿ ಅರಿವು ಮೂಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.