ಜಿಎಸ್‌ಟಿ ತೆರಿಗೆಯಲ್ಲಿ ಬದಲಾವಣೆ ಅಗತ್ಯ
Team Udayavani, Nov 7, 2017, 12:33 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳ ಹಣಕಾಸು ಸಚಿವರು ಒತ್ತಾಯಿಸಿದ್ದಾರೆ.
ಕರ್ನಾಟಕದ ಕೃಷಿ ಖಾತೆ ಸಚಿವ ಕೃಷ್ಣ ಭೈರೇಗೌಡ ಉತ್ತಮ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ದೇಶ ಸೋತಿದೆ ಎಂದು ಆರೋಪಿಸಿದ್ದಾರೆ. ಏಕಾಏಕಿ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದರಿಂದ ಹಲವಾರು ಉದ್ದಿಮೆಗಳು ಬಾಗಿಲು ಮುಚ್ಚುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯ ವಿನ್ಯಾಸ, ತೆರಿಗೆ ವಿಧಿಸುವ ವಿಧಾನ, ರಿಯಾಯಿತಿ, ತಾಂತ್ರಿಕ ವಿಧಾನಗಳು ಸೇರಿ ಹಲವು ವಿಭಾಗಗಳಲ್ಲಿ ದೇಶ ಸಿದ್ಧಗೊಂಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹಲವು ವಸ್ತುಗಳ ಮೇಲೆ ವಿಧಿಸಲಾಗಿರುವ ತೆರಿಗೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಕೃಷ್ಣ ಭೈರೇಗೌಡರು ಒತ್ತಾಯಿಸಿದರು.
ಜಿಎಸ್‌ಟಿ ಜಾರಿಯಾದ ಮೊದಲ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿದು ಹೋಗಿದೆ. ಜಿಎಸ್‌ಟಿ ಫೈಲಿಂಗ್ ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ಮೊದಲ ಮೂರು ತಿಂಗಳಲ್ಲಿ 56 ಲಕ್ಷದಿಂದ 52 ಲಕ್ಷಕ್ಕೆ ಇಳಿಕೆಯಾಯಿತು. ಎರಡನೇ ತ್ತೈಮಾಸಿಕದಲ್ಲಿ ಅದರ ಪ್ರಮಾಣ 48 ಲಕ್ಷ ರಿಟರ್ನ್ಸ್ಗೆ ಇಳಿಕೆಯಾಗಿದೆ ಎಂದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಜಾರಿಯಾಗಿರುವ ತೆರಿಗೆ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಎಂದು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಸಚಿವರು ಆರೋಪಿಸಿದ್ದಾರೆ. ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್, ಪುದುಚೇರಿ ಹಣಕಾಸು ಸಚಿವ ಕಮಲಾ ಕಣ್ಣನ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.