ಶೆಲ್ಟರ್ ಸಮೀಪವೇ ಶೌಚಾಲಯ!
Team Udayavani, Nov 7, 2017, 1:27 PM IST
ಬೆಂಗಳೂರು: ಬಿಎಂಟಿಸಿ ಬಸ್‌ಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ 2,212 ಕಡೆಗಳಲ್ಲಿ ಬಸ್ ಶೆಲ್ಟರ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿ, ಹೀಗೆ ನಿರ್ಮಿಸುವ 300 ಶೆಲ್ಟರ್‌ಗಳ ಪಕ್ಕದಲ್ಲೇ ಶೌಚಗೃಹಗಳನ್ನು ನಿರ್ಮಿಸಲು ತೀರ್ಮಾನಿಸಿದೆ.
ನಗರದ ಬಹುತೇಕ ಬಸ್ ನಿಲುಗಡೆ ಸ್ಥಳಗಳಲ್ಲಿ ಸೂಕ್ತ ಸೂರಿಲ್ಲದೆ ಪ್ರಯಾಣಿಕರು ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆನೆದು ತೊಂದರೆ ಅನುಭವಿಸುತ್ತಾರೆ. ಪ್ರಯಾಣಿಕರ ಈ ಪರದಾಟ ತಪ್ಪಿಸಲು ಪಾಲಿಕೆಯ ಅಧಿಕಾರಿಗಳು ನಗರದಾದ್ಯಂತ 2,212 ಕಡೆಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಟೆಂಡರ್ ಆಹ್ವಾನಿಸಿದ್ದು, ಶೆಲ್ಟರ್‌ಗಳೊಂದಿಗೆ ಸೂಕ್ತ ಸ್ಥಳಾವಕಾಶವಿರುವ 300 ಕಡೆಗಳಲ್ಲಿ ಶೌಚಗೃಹ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.
ನಗರದ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಲಭ್ಯವಿಲ್ಲದ ಕಾರಣ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸರ್ಜನೆಗೆ ಮುಂದಾಗುತ್ತಿದ್ದು, ಪರಿಣಾಮ ನಗರದ ಸೌಂದರ್ಯ ಹಾಗೂ ಸ್ವತ್ಛತೆ ಹಾಳಾಗುವಂತಾಗಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಿರ್ಮಿಸುವ ಬಸ್‌ಶೆಲ್ಟರ್ ಹಾಗೂ ಶೌಚಗೃಹ ನಿರ್ಮಿಸಲು ಟೆಂಡರ್ ಆಹ್ವಾನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರಿಗೆ ಸೇವೆಯನ್ನು ಬಿಎಂಟಿಸಿ ನೀಡಿದರೆ, ಬಸ್‌ಗಳ ಸಂಚಾರಕ್ಕೆ ರಸ್ತೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಶೆಲ್ಟರ್ ನಿರ್ಮಿಸುವುದು ಪಾಲಿಕೆಯ ಜವಾಬ್ದಾರಿ. ಅದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರ ಬಸ್ ನಿಲುಗಡೆಗಳಿದ್ದು, ಕೇವಲ 1 ಸಾವಿರ ಕಡೆಗಳಲ್ಲಿ ಮಾತ್ರ ಶೆಲ್ಟರ್‌ಗಳಿವೆ. ಆ ಹಿನ್ನೆಲೆಯಲ್ಲಿ ನಾಲ್ಕು ಹಂತಗಳಲ್ಲಿ ನಗರದ 2,212 ನಿಲುಗಡೆಗಳಲ್ಲಿ ಬಸ್‌ಶೆಲ್ಟರ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ 550 ಶೆಲ್ಟರ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ 587 ಶೌಚಗೃಹಗಳು
ಬೆಂಗಳೂರು ಮಹಾನಗರ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ. ರಾಜಧಾನಿಗೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿ ನಿತ್ಯ 15 ಲಕ್ಷಕ್ಕೂ ಅಧಿಕ ಜನ ಬಂದು ಹೋಗುತ್ತಾರೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ಸ್ಥಳಗಳು ಸೇರಿ ಕೇವಲ 587 ಕಡೆಗಳಲ್ಲಿ ಮಾತ್ರ ಶೌಚಗೃಹಗಳಿದ್ದು, ಸಾರ್ವಜನಿಕರು ಜಲಭಾದೆ ತಡೆಯಲಾಗದೆ ಖಾಲಿ ಜಾಗ,
ಪಾಂಪೌಂಡ್, ಗೋಡೆ, ವಿದ್ಯುತ್ ಟ್ರಾನ್ಸ್‌ಫಾರರ್ ಸೇರಿದಂತೆ ನಗರದ ಪ್ರಮುಖ ಜಾಗವೆಂದೂ ಲೆಕ್ಕಿಸದೆ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆಯಿಂದ 250 ಕಡೆಗಳಲ್ಲಿ ಶೌಚಗೃಹ ಹಾಗೂ 100 ಕಡೆಗಳಲ್ಲಿ ಇ-ಶೌಚಾಲಯ ನಿರ್ಮಿಸಲು ಮುಂದಾಗಿದೆ.
ಬಾರದ ಎಸ್ಸಿ, ಎಸ್ಟಿ ಗುತ್ತಿಗೆದಾರರು
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲು ಪಾಲಿಕೆ ಟೆಂಡರ್ ಆಹ್ವಾನಿಸಿದ್ದು, ಮೊದಲ ಹಂತದ 550 ಶೆಲ್ಟರ್‌ಗಳನ್ನು ನಿರ್ಮಾಣ ಗುತ್ತಿಗೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೇ ನೀಡಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಮೂರು ಬಾರಿಯೂ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿ ಟೆಂಡರ್ ಆಹ್ವಾನಿಸಲಾಗಿದ್ದು, ಗುತ್ತಿಗೆ ಪಡೆಯುವವರು ಬಸ್ ಶೆಲ್ಟರ್, ಶೌಚಾಲಯ ಹಾಗೂ ಬಿಎಂಟಿಸಿ ಬಸ್‌ಗಳ ಮಾಹಿತಿ ನೀಡಿರುವ ಡಿಜಿಟಲ್ ಫಲಕ ಅಳವಡಿಸಬೇಕಾಗುತ್ತದೆ.
ಕೋಟ್ಯಂತರ ವರಮಾನ
ಪಿಪಿಪಿ ಮಾದರಿಯಲ್ಲಿ ಬಸ್‌ಶೆಲ್ಟರ್, ಶೌಚಗೃಹ ನಿರ್ಮಿಸಲು ಬಿಬಿಎಂಪಿ ಟೆಂಡರ್ ಆಹ್ವಾನಿಸಿದ್ದು, ಪಾಲಿಕೆಯಿಂದ ಯಾವುದೇ ಹಣ ನೀಡಲಾಗುವುದಿಲ್ಲ. ಗುತ್ತಿಗೆ ಪಡೆದ ಸಂಸ್ಥೆ 20 ವರ್ಷಗಳವರೆಗೆ ಬಸ್‌ಶೆಲ್ಟರ್ ಹಾಗೂ ಶೌಚಗೃಹಗಳ ನಿರ್ವಹಣೆ, ಸ್ವತ್ಛತೆ ಕಾಪಾಡಬೇಕಾಗುತ್ತದೆ. ಇದರೊಂದಿಗೆ ಪಾಲಿಕೆಗೆ ವಾಷಿರ್ಕ ನೆಲಬಾಡಿಗೆ ಹಾಗೂ ಜಾಹೀರಾತು ಶುಲ್ಕ ಪಾವತಿಸಬೇಕಾಗಿದ್ದು, ಇದರಿಂದಾಗಿ ಪಾಲಿಕೆಗೆ ವಾರ್ಷಿಕ 2 ಕೋಟಿಗೂ ಅಧಿಕ ವರಮಾನ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ 2,212 ಕಡೆಗಳಲ್ಲಿ ಬಸ್‌ಶೆಲ್ಟರ್‌ಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ 550 ಕಡೆಗಳಲ್ಲಿ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಶೆಲ್ಟರ್ ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸಲು ನಿರ್ಧರಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಿಸುತ್ತಿರುವುದರಿಂದ ಪಾಲಿಕೆಯಿಂದ ನೆಲಬಾಡಿಗೆ ಹಾಗೂ ಜಾಹೀರಾತು ಶುಲ್ಕ ರೂಪದಲ್ಲಿ ವರಮಾನ ಬರಲಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ನಗರದಲ್ಲಿರೋದು 587 ಶೌಚಗೃಹ ಅಷ್ಟೇ
ಬೃಹತ್ ಬೆಂಗಳೂರು ಮಹಾನಗರ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ. ರಾಜಧಾನಿಗೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿ ನಿತ್ಯ 15 ಲಕ್ಷಕ್ಕೂ ಅಧಿಕ ಜನ ಬಂದು ಹೋಗುತ್ತಾರೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ಸ್ಥಳಗಳು ಸೇರಿ ಕೇವಲ 587 ಕಡೆಗಳಲ್ಲಿ ಮಾತ್ರ ಶೌಚಗೃಹಗಳಿದ್ದು, ಸಾರ್ವಜನಿಕರು ಜಲಭಾದೆ ತಡೆಯಲಾಗದೆ ಖಾಲಿ ಜಾಗ, ಪಾಂಪೌಂಡ್, ಗೋಡೆ, ವಿದ್ಯುತ್ ಟ್ರಾನ್ಸ್‌ಫಾರರ್ ಸೇರಿದಂತೆ ನಗರದ ಪ್ರಮುಖ ಜಾಗವೆಂದೂ ಲೆಕ್ಕಿಸದೆ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆಯಿಂದ 250 ಕಡೆಗಳಲ್ಲಿ ಶೌಚಗೃಹ ಹಾಗೂ 100 ಕಡೆಗಳಲ್ಲಿ ಇ-ಶೌಚಾಲಯ ನಿರ್ಮಿಸಲು ಮುಂದಾಗಿದೆ.
ಬಾರದ ಎಸ್ಸಿ, ಎಸ್ಟಿ ಗುತ್ತಿಗೆದಾರರು
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲು ಪಾಲಿಕೆ ಟೆಂಡರ್ ಆಹ್ವಾನಿಸಿದ್ದು, ಮೊದಲ ಹಂತದ 550 ಶೆಲ್ಟರ್‌ಗಳನ್ನು ನಿರ್ಮಾಣ ಗುತ್ತಿಗೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೇ ನೀಡಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಮೂರು ಬಾರಿಯೂ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿ ಟೆಂಡರ್ ಆಹ್ವಾನಿಸಲಾಗಿದ್ದು, ಗುತ್ತಿಗೆ ಪಡೆಯುವವರು ಬಸ್ ಶೆಲ್ಟರ್, ಶೌಚಾಲಯ ಹಾಗೂ ಬಿಎಂಟಿಸಿ ಬಸ್‌ಗಳ ಮಾಹಿತಿ ನೀಡಿರುವ ಡಿಜಿಟಲ್ ಫಲಕ ಅಳವಡಿಸಬೇಕಾಗುತ್ತದೆ.
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.