ನೋಟು ಅಮಾನ್ಯ ಪರ-ವಿರೋಧ ರಹಿತ ನಿಲುವು: ಟಿಆರ್‌ಎಸ್
Team Udayavani, Nov 7, 2017, 7:05 PM IST
ಹೈದರಾಬಾದ್ : ಕೇಂದ್ರದ ನೋಟು ಅಮಾನ್ಯ ಕ್ರಮ ಒಂದು ವರ್ಷ ಪೂರೈಸುವ ಸಂದರ್ಭದಲ್ಲಿ ನಾಳೆ ಬುಧವಾರ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ‘ಕರಾಳ ದಿನ’ವನ್ನು ಆಚರಿಸಲಿವೆ; ವ್ಯತಿರಿಕ್ತವಾಗಿ ಬಿಜೆಪಿ “ಕಾಳಧನ ವಿರೋಧಿ ದಿನ’ವನ್ನು ಆಚರಿಸಲಿದೆ. ಆದರೆ ಒಂದು ಪಕ್ಷ ಮಾತ್ರ ತಟಸ್ಥವಾಗಿ ಉಳಿಯಲು ನಿರ್ಧರಿಸಿದೆ; ಅದೆಂದರೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್).
“ನಾವು ತಟಸ್ಥರು; ಮತ್ತು ನಾವು ಯಾವತ್ತೂ ತಟಸ್ಥರಾಗಿರುವವರು; ಏಕೆಂದರೆ ನಾವು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಮಾನ ದೂರವನ್ನು ಉಳಿಸಿಕೊಳ್ಳಲು ಬಯಸುತ್ತೇವೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಲೋಕಸಭಾ ಸದಸ್ಯೆ ಕೆ. ಕವಿತಾ ಹೇಳಿದ್ದಾರೆ.
“ವಾಸ್ತವದಲ್ಲಿ ನೋಟು ಅಮಾನ್ಯ ಪ್ರಕೋಪದ ಸಂಕಷ್ಟಕ್ಕೆ ಜನಸಾಮಾನ್ಯರು, ಹಲವರು ದೂರುವಂತೆ, ಅಷ್ಟಾಗಿ ಗುರಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಈ ಹಿಂದೆಯೇ ಹೇಳಿದ್ದರು’ ಎಂದು ಕವಿತಾ ನೆನಪಿಸಿಕೊಟ್ಟರು.
‘ನಾವು, ಅಂದರೆ ಟಿಆರ್‌ಎಸ್ ಸರಕಾರ, ನೋಟು ಅಮಾನ್ಯ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ಹುಟ್ಟಿಸುವ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ; ಜವಾಬ್ದಾರಿಯುತ ಸರಕಾರವಾಗಿ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ನಾವು ಮಾಡಿದ್ದೇವೆ; ನಾವು ನಮ್ಮ ಜನರನ್ನು ಎಚ್ಚರಿಕೆಯಿಂದ ಅವಲೋಕಿಸುತ್ತಿದ್ದೇವೆ ಎಂದು ಕವಿತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ
Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ
Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ
CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ
Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.