ದ.ಕ.: ಒಂದೇ ದಿನ 8 ಜನ ದುರ್ಮರಣ
Team Udayavani, Nov 8, 2017, 6:25 AM IST
ಉಳ್ಳಾಲ/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಆದರೆ ಎರಡೂ ಪ್ರಕರಣಗಳು ಮಂಗಳವಾರವಷ್ಟೇ ಬೆಳಕಿಗೆ ಬಂದಿವೆ.
ಬಂಟ್ವಾಳ ತಾಲೂಕಿನ ಮೂಲರಪಟ್ನ ಫಲ್ಗುಣಿ ನದಿಯಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟರೆ, ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಕೆ.ಸಿ.ರೋಡ್ ಶಾಖೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಮೂವರು ಭದ್ರತಾ ಸಿಬಂದಿ ಜನರೇಟರ್ನ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.
ಮೂಲರಪಟ್ನದಲ್ಲಿ ನೀರುಪಾಲಾದವರು ಅಸ್ಲಾಂ (16), ಮುದಾಸಿರ್ (17), ಸವಾದ್ (17), ರಮೀಜ್ (17) ಹಾಗೂ ಅಜ್ಮಲ್ (17). ಎಲ್ಲರೂ ಸ್ಥಳೀಯ ನಿವಾಸಿಗಳು. ಇವರ ಪೈಕಿ ಸವಾದ್ ಹೊರತುಪಡಿಸಿ ಉಳಿದೆಲ್ಲರೂ ಪಿಯುಸಿ ವಿದ್ಯಾರ್ಥಿಗಳು. ಸವಾದ್ ಬೇಕರಿಯೊಂದರ ಸಿಬಂದಿ. ಬಾಲಕರು ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಕೋಟೆಕಾರಿನಲ್ಲಿ ಸಂಭವಿಸಿದ ಇನ್ನೊಂದು ಅವಘಡ ದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಕೆ.ಸಿ.ರೋಡ್ ಶಾಖೆಯಲ್ಲಿ ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದ ಮಂಜನಾಡಿ ನಿವಾಸಿ ಸಂತೋಷ್ (38), ಕೊಲ್ಯ ಕಾಸಿಂಬೆಟ್ಟು ನಿವಾಸಿ ಸೋಮನಾಥ (58), ಕೆ.ಸಿ.ರೋಡ್ ಕಾಲನಿ ನಿವಾಸಿ ಉಮೇಶ್ (60) ಮೃತಪಟ್ಟವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.