ಪರೀಕ್ಷೆ ಮುಂದೂಡಿಕೆಗಾಗಿ ವಿದ್ಯಾರ್ಥಿ ರೆಯಾನ್ ಕೊಲೆ! ಕೇಸ್ ಗೆ ತಿರುವು
Team Udayavani, Nov 8, 2017, 11:26 AM IST
ಹೊಸದಿಲ್ಲಿ : ರಯಾನ್ ಇಂಟರ್‌ನ್ಯಾಶನಲ್ ಮರ್ಡರ್ ಕೇಸಿಗೆ ಹೊಸ ತಿರುವು ದೊರಕಿದೆ. ಇದೇ ಶಾಲೆಯ ಹನ್ನೊಂದನೇ ತರಗತಿಯ ವಿದ್ಯಾರ್ಥಿಯನ್ನು, ಏಳು ವರ್ಷಪ್ರಾಯದ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್‌ನ ಕೊಲೆಗೆ ಸಂಬಂಧಪಟ್ಟು ಸಿಬಿಐ ಬಂಧಿಸಿದೆ.
ಬಂಧಿತ 11ನೇ ತರಗತಿ ವಿದ್ಯಾರ್ಥಿಯು “ಶಾಲೆಗ ರಜೆ ಘೋಷಿಸಲ್ಪಟ್ಟರೆ ಶಾಲಾ ಪರೀಕ್ಷೆಗಳು ಮುಂದೆ ಹೋಗುವುದೆಂಬ ಲೆಕ್ಕಾಚಾರದಲ್ಲಿ ಬಾಲಕನನ್ನು ಕತ್ತು ಸೀಳಿ ಕೊಂದಿರಬಹುದು’ ಎಂಬ ಶಂಕೆ ಸಿಬಿಐಗೆ ಇರುವಂತಿದೆ ಎಂದು ವರದಿಗಳು ಹೇಳಿವೆ.
“ಸಿಬಿಐ ನವರು ನನ್ನ ಮಗನನ್ನು ನಿನ್ನೆ ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಆತ ಯಾವುದೇ ಅಪರಾಧ ಮಾಡಿಲ್ಲ. ಆತ ಪ್ರದ್ಯುಮ್ನ ಸತ್ತ ವಿಷಯವನ್ನು ಗಾರ್ಡನರ್ ಮತ್ತು ಶಿಕ್ಷಕರಿಗೆ ತಿಳಿಸಿದ್ದ ಅಷ್ಟೇ’ ಎಂದು ಸಿಬಿಐ ಬಂಧಿಸಿರುವ 11ನೇ ತರಗತಿ ವಿದ್ಯಾರ್ಥಿಯ ತಂದೆ ಮಾಧ್ಯಮದ ಮುಂದೆ ಗೋಗರೆದಿದ್ದಾರೆ.
ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ರಯಾನ್ ಇಂಟರ್‌ನ್ಯಾಶನಲ್ ಸಮೂಹದ ಸಿಇಓ ರಯಾನ್‌ಪಿಂಟೋ, ಆತನ ಹೆತ್ತವರು, ಸ್ಥಾಪಕ ಅಧ್ಯಕ್ಷ ಆಗಸ್ಟಿನ್ ಪಿಂಟೋ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಗ್ರೇಸ್ ಪಿಂಟೋ ಅವರಿಗೆ ಮಧ್ಯಾವಧಿ ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿತ್ತು.
ವರದಿಗಳ ಪ್ರಕಾರ ಸಿಬಿಐ ನಿನ್ನೆ ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ರಯಾನ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಯನ್ನು ಸೋಹನಾ ರಸ್ತೆಯಲ್ಲಿರುವ ಆತನ ಮನೆಯಿಂದ ವಶಕ್ಕೆ ತೆಗೆದುಕೊಂಡು ದಿನಪೂರ್ತಿ ಆತನನ್ನು ಪ್ರಶ್ನಿಸಿತ್ತು. ಆತ ಈಗಲೂ ಸಿಬಿಐ ವಶದಲ್ಲಿದ್ದಾನೆಯೇ ಅಥವಾ ಆತನನ್ನು ಹೋಗ ಬಿಟ್ಟಿದ್ದಾರೆಯೇ ಎಂಬುದು ಖಾತರಿಯಾಗಿಲ್ಲ.
ಕಳೆದ ಸೆ.8ರಂದು ರಯಾನ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಪೊಲೀಸರು ಶಾಲಾ ಬಸ್ ನಿರ್ವಾಹಕ ಅಶೋಕ್ ಕುಮಾರ್ ಎಂಬಾತನನ್ನು ಈ ಕೊಲೆ ಕೇಸಿಗೆ ಸಂಬಂಧಿಸಿ ಬಂಧಿಸಿತ್ತು.
ಪೊಲೀಸ್ ಕಸ್ಟಡಿಯಲ್ಲಿ ಕುಮಾರ್ ತನ್ನ “ಅಪರಾಧ”ವನ್ನು ಒಪ್ಪಿಕೊಂಡಿದ್ದ. ಆದರೆ ಆತನ ಕುಟುಂಬದವರು ಮತ್ತು ಸ್ನೇಹಿತರು, ಅಮಾಯಕ ಕುಮಾರ್‌ನನ್ನು ಈ ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದರು.
ರಯಾನ್ ಶಾಲಾ ವಿದ್ಯಾರ್ಥಿಯ ಈ ಅಮಾನುಷ ಕೊಲೆ ಪ್ರಕರಣವು ದೇಶಾದ್ಯಂತ ಆಕ್ರೋಶ ಹುಟ್ಟಿಸಿತ್ತು. ಪರಿಣಾಮವಾಗಿ ಸಿಬಿಎಸ್‌ಸಿ ಗೆ ಹೊಸ “ಶಾಲಾ ಸುರಕ್ಷಾ ಮಾರ್ಗದರ್ಶಿ ಸೂತ್ರಗಳನ್ನು’ ಪರಿಚಯಿಸುವುದು ಅನಿವಾರ್ಯವಾಯಿತು. ಸಿಬಿಎಸ್‌ಸಿ ಮಂಡಳಿಯು ಆಗ “ಶಾಲಾ ಕ್ಯಾಂಪಸ್ ಒಳಗೆ ಮಕ್ಕಳ ಸುರಕ್ಷೆ ಹಾಗೂ ಭದ್ರತೆಯು ಸಂಪೂರ್ಣವಾಗಿ ಶಾಲಾಡಳಿತದ ಹೊಣೆಗಾರಿಕೆಯಾಗಿರುತ್ತದೆ’ ಎಂದು ಕಟ್ಟಪ್ಪಣೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.