ಅಮರ್ ಜವಾನ್ ‘ಜ್ಯೋತಿ’: ಶಾಶ್ವತ ಬೆಳಕಿಗೆ ಸಾರ್ವಜನಿಕರ ನೆರವು
Team Udayavani, Nov 8, 2017, 4:24 PM IST
ಪುತ್ತೂರು: ಸೈನಿಕರ ದೇಶ ಸೇವೆಯ ಸ್ಮರಣೆಯಲ್ಲಿ ಪುತ್ತೂರಿನ ಹೃದಯಭಾಗದ ಮಿನಿ ವಿಧಾನಸೌಧದ ಎದುರು ನಿರ್ಮಿಸಲಾದ ಅಮರ್ ಜವಾನ್ ‘ಜ್ಯೋತಿ’ ಯನ್ನು ನಿರಂತರ ಬೆಳಗಿಸಲು ದೇಶಭಕ್ತ ಸಾರ್ವಜನಿಕರು ಕೈಜೋಡಿಸಿದ್ದಾರೆ.
ವರ್ಷದ 365 ದಿನಗಳ ಕಾಲ ನಿರಂತರವಾಗಿ ಅಮರ್ ಜವಾನ್ ಜ್ಯೋತಿ ಪ್ರಜ್ವಲನಗೊಳಿಸಲು ಪ್ರತಿ ತಿಂಗಳಿಗೆ 2 ಸಿಲಿಂಡರ್‌ನಂತೆ ಗ್ಯಾಸ್ ಸಂಪರ್ಕದ ಆವಶ್ಯಕತೆಯಿದ್ದು, ವಾರ್ಷಿಕವಾಗಿ 24 ಸಿಲಿಂಡರ್ ಬೇಕಾದಲ್ಲಿಗೆ ಈಗಾಗಲೇ 35ಕ್ಕೂ ಹೆಚ್ಚು ಮಂದಿ ದಾನಿಗಳು ಹಣವನ್ನು ನೀಡಿದ್ದಾರೆ.
ವಾರ್ಷಿಕ ನವೀಕರಣ
ವರ್ಷಕ್ಕೆ ಒಂದು ಅನಿಲ ಸಿಲಿಂಡರಿನ ಹಣದ ಬಾಬ್ತು 1,000 ರೂ. ಹಾಗೂ ಒಂದು ಸಾವಿರಕ್ಕಿಂತ ಕಡಿಮೆ ಕೊಟ್ಟವರ ಹಣವನ್ನು ಅದರ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ವಾರ್ಷಿಕವಾಗಿ ನವೀಕರಣ, ಬಣ್ಣ ಬಳಿಯುವುದು ಸಹಿತ ನಿರ್ವಹಣೆಯನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು 6 ಮಂದಿಯ ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ ತಿಳಿಸಿದೆ.
ಜ್ಯೋತಿ ಪ್ರಜ್ವಲನ ಹಾಗೂ ನಿರ್ವಹಣೆಗಾಗಿ ಹಣದ ನೆರವು ನೀಡಲಿಚ್ಛಿಸುವವರು ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು, ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ, ಅಂಬಿಕಾ ಪ.ಪೂ. ವಿದ್ಯಾಲಯ, ನೆಲ್ಲಿಕಟ್ಟೆ, ಪುತ್ತೂರು ಇವರನ್ನು (9448835488) ಸಂಪರ್ಕಿಸಬಹುದು.
ಸಾರ್ವಜನಿಕ ಸಹಭಾಗಿತ್ವ ಅಗತ್ಯ
ಅಮರ್ ಜವಾನ್ ಜ್ಯೋತಿ ನಿರಂತರ ಬೆಳಗುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ನೀಡುತ್ತಿದ್ದಾರೆ. ಈ ಸಹಭಾಗಿತ್ವಕ್ಕೆ ಯಾರೂ ಕೈಜೋಡಿಸಬಹುದು. ದೇಶ ರಕ್ಷಣೆಯ ಸಂದರ್ಭದಲ್ಲಿ ಜಿಲ್ಲೆಯ ಯೋಧರು ವೀರ ಮರಣವನ್ನಪ್ಪಿದರೆ ಸರಕಾರಿ ಕಚೇರಿಗಳ ಎದುರು ಅವರಿಗೆ ಗೌರವ ಸಮರ್ಪಿಸುವ ಬದಲು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗೌರವ ಸಮರ್ಪಿಸಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲು ಸಂರಕ್ಷಣೆ ಸಮಿತಿ ನಿರ್ಧಾರ ಮಾಡಿದೆ.
– ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು,
ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.