ಪ್ರಧಾನಿ ಮೋದಿ ಸಂಸತ್‌ ಎದುರಿಸುವ ಸಾಹಸ ಮಾಡ್ತಿಲ


Team Udayavani, Nov 8, 2017, 7:08 PM IST

08-36.jpg

ಚಿಕ್ಕಮಗಳೂರು: ಗುಜರಾತ್‌ ಚುನಾವಣೆ  ರ್ಣಗೊಳ್ಳುವವರೆಗೆ ಸಂಸತ್ತಿನ ಚಳಿಗಾಲದ ಅ ಧಿವೇಶನ ಕರೆಯದಿರಲು ಬಿಜೆಪಿ ಆಲೋಚಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಂಸತ್ತನ್ನು ಎದುರಿಸುವ ಸಾಹಸಕ್ಕೆ ಪ್ರಧಾನಿ ಈಗ ಮುಂದಾಗುವುದಿಲ್ಲ. ಸಂಸತ್‌ ಅ ಧಿವೇಶನವನ್ನು ನ.15ಕ್ಕೆ ಕರೆಯಲು ನಿಗದಿಪಡಿಸಿದ್ದು, ನಂತರ 21ಕ್ಕೆ ಮುಂದೂಡಲಾಗಿದೆ. ಬಿಜೆಪಿಗೆ ನೋಟು ಅಮಾನ್ಯಿàಕರಣ, ಜಿಎಸ್‌ಟಿ ಸೃಷ್ಟಿಸಿರುವ ದೇಶವ್ಯಾಪಿ ಗೊಂದಲಗಳಿಂದ ಪಾರಾಗಲು ಗುಜರಾತ್‌ ಚುನಾವಣೆ ಪೂರ್ಣಗೊಳ್ಳುವವರೆಗೆ ಕರೆಯದೆ ಇರುವ
ಸಂಭವವಿದೆ ಎಂದರು.

ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಪ್ಪು ಹಣ ಹೊರ ತರುವುದಾಗಿ ಹೇಳುತ್ತಿದ್ದ ಪ್ರಧಾನಿ ಈಗ ಅವರ ಪಕ್ಷದವರೇ ತೆರಿಗೆ ರಹಿತ ದೇಶಗಳಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅದಕ್ಕೆ ಉತ್ತರಿಸಲಾಗದೆ ಲೋಕಸಭಾ ಕಲಾಪ ಕರೆಯುವುದನ್ನು ಮುಂದೂಡುತ್ತಿದ್ದಾರೆ. ಬಿಜೆಪಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ಕೇವಲ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಯಾವ ಅಭಿವೃದ್ಧಿ ಕೆಲಸಗಳಾಗಲಿ, ಸಮಾಜಕ್ಕೆ ಪೂರಕವಾಗುವ ಯೋಜನೆಗಳನ್ನಾಗಲಿ ತರಲು ಸಾಧ್ಯವಾಗುತ್ತಿಲ್ಲ. ದೇಶದ ಜನಕ್ಕೆ ಈಗ ಬಿಜೆಪಿಯ ಸಹಜ ಬಣ್ಣದ ಅರಿವಾಗುತ್ತಿದೆ ಎಂದರು. ನೋಟು ಅಮಾನ್ಯಿಕರಣ ಹಾಗೂ ಜಿಎಸ್‌ಟಿಯಿಂದ ಯಾವ ಸಾಧನೆಯೂ ಆಗಲಿಲ್ಲ ಎಂದರು.

ಸಚಿವ ಜಾರ್ಜ್‌ ಅವರ ಮೇಲೆ ಎಫ್‌ಐಆರ್‌ ದಾಖಲೆಯಾದ ನಂತರ ರಾಜೀನಾಮೆ ಪಡೆದು ಕಾಂಗ್ರೆಸ್‌ ಇತರ ಪಕ್ಷಗಳಿಗೆ ಮಾದರಿಯಾಗಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಮಾದರಿ ಆಗಬೇಕಾದುದು ನಿಜ. ಆದರೆ ಜಾರ್ಜ್‌ ಪ್ರಕರಣದಲ್ಲಿ ಈ ಹಿಂದೆಯೇ ತನಿಖೆಯಾಗಿ ಅವರು ತಪ್ಪಿತಸ್ಥರಲ್ಲ ಎಂಬುದು ಖಚಿತವಾಗಿದೆ. ಈಗ ಅವರ ಮೇಲೆ ಬಿಜೆಪಿ ಎಫ್‌ಐಆರ್‌ ದಾಖಲಿಸುವಂತೆ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳಾದ ಸಿಬಿಐ ಸೇರಿದಂತೆ ಆದಾಯ ತೆರಿಗೆ, ಎನ್‌ಐಎ ಎಲ್ಲವನ್ನೂ ರಾಜಕೀಯ ಕಾರಣಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಾಗಿ ಜಾರ್ಜ್‌ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ತನಿಖೆಯಾಗಿ ಸೂಕ್ತ ಸಾಕ್ಷ್ಯಧಾರಗಳು ಹೊರ ಬಂದರೆ ಆಗ ರಾಜೀನಾಮೆ ನೀಡಲು ಪಕ್ಷವೇ ಸೂಚಿಸುತ್ತದೆ ಎಂದರು. ನಾನು ಎಂದೂ ಟಿಪ್ಪುವನ್ನು ಕ್ರೂರಿ ಎಂದು ಹೇಳುವುದಿಲ್ಲ. ಅವನೊಬ್ಬ ದೇಶಭಕ್ತ. ಅದನ್ನು ಈ ದೇಶದ ರಾಷ್ಟ್ರಪತಿಗಳು ಸಹ ಮೊನ್ನೆ ರಾಜ್ಯಕ್ಕೆ ಬಂದಾಗ ಉಚ್ಚರಿಸಿದ್ದಾರೆ. ನಾನು ರಾಷ್ಟ್ರಪತಿಗಳ ಮಾತನ್ನು ಅನುಮೋದಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಜನರು ತೋರಿಸುತ್ತಿರುವ ಸ್ಪಂದನೆ ನೋಡಿದರೆ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡುವುದು ಖಚಿತವೆನಿಸುತ್ತಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ವಿವರಿಸಲು ಆರಂಭಿಸಿದರೆ ಅದನ್ನು ಜನರೇ ಪೂರ್ಣಗೊಳಿಸುತ್ತಿದ್ದಾರೆ ಎಂದರು. ತಮ್ಮ ಒಂದು ತಿಂಗಳ ರಾಜ್ಯದ ವಿವಿಧ ಭಾಗಗಳ ಪ್ರವಾಸದಲ್ಲಿ ಕಾರ್ಯಕರ್ತರು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ ಎಂದರು. ಅಭಿವೃದ್ಧಿ ಮತ್ತು ಸಾಮಾಜಿಕ ಸಮತೋಲನ ತರುವಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ನೀಡಿದ ಭರವಸೆ ಏನಾಗಿದೆ? ಕೇಂದ್ರದ ಸಂಪುಟದಲ್ಲಿ ಸಚಿವರ, ಸಂಸದರ ಹೆಸರೇ ಪ್ಯಾರಡೈಸ್‌ ಪೇಪರ್ನಲ್ಲಿ ಬಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ನಾವು ಉತ್ತರ ಕೇಳುತ್ತಿದ್ದೇವೆ ಎಂದರು.

ಟಾಪ್ ನ್ಯೂಸ್

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.