ಸೈನಾ ನೆಹ್ವಾಲ್ ಜಯಭೇರಿ
Team Udayavani, Nov 9, 2017, 6:35 AM IST
ನಾಗ್ಪುರ: ಖ್ಯಾತ ಶಟ್ಲರ್ಗಳಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರ ನಡುವೆ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟದ ವನಿತಾ ಸಿಂಗಲ್ಸ್ನ ಫೈನಲ್ ಹೋರಾಟದಲ್ಲಿ ಕೊನೆಗೂ ಸೈನಾ ಗೆಲುವಿನ ನಗೆ ಚೆಲ್ಲಿದ್ದಾರೆ.
ತನ್ನ ಅಪಾರ ಅನುಭವದ ಲಾಭ ಪಡೆದ 27ರ ಹರೆಯದ ಸೈನಾ ಅವರು ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ವಿಜೇತೆ ಸಿಂಧು ಅವರನ್ನು 21-17, 27-25 ಗೇಮ್ಗಳ ಕಠಿನ ಹೋರಾಟದಲ್ಲಿ ಉರುಳಿಸಿ ಪ್ರಶಸ್ತಿ ಗೆದ್ದರು. ಈ ಹೋರಾಟ 54 ನಿಮಿಷಗಳವರೆಗೆ ಸಾಗಿತ್ತು.
ನಾನಿಂದು ಆಡಿದ ರೀತಿಯಿಂದ ಆಶ್ಚರ್ಯವಾಗಿದೆ. ನಾನು ಚೆನ್ನಾಗಿ ಓಡುತ್ತಿದ್ದೆ ಮತ್ತು ಸಿಂಧು ಅವರ ಕಠಿನ ಹೊಡೆತಗಳಿಗೆ ಉತ್ತರಿಸಲು ಯಶಸ್ವಿಯಾಗಿದ್ದೆ ಎಂದು ಗೆಲುವಿನ ಬಳಿಕ ಸೈನಾ ನುಡಿದರು.
ಅಶ್ವಿನಿಗೆ ಅವಳಿ ಪ್ರಶಸ್ತಿ
ಅಶ್ವಿನಿ ಪೊನ್ನಪ್ಪ ಅವರು ಅವಳಿ ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಅವರು ಎನ್. ಸಿಕ್ಕಿ ರೆಡ್ಡಿ ಜತೆ ವನಿತಾ ಡಬಲ್ಸ್ ಮತ್ತು ಸಾತ್ವಿಕ್ಸಾಯಿರಾಜ್ ರ್ಯಾಂಕಿರೆಡ್ಡಿ ಜತೆ ಮಿಕ್ಸೆಡ್ ಡಬಲ್ಸ್ನ ಪ್ರಶಸ್ತಿ ಜಯಿಸಿದ್ದಾರೆ. ಆರು ತಿಂಗಳ ಮೊದಲು ಜತೆಯಾಗಿ ಆಡಲು ನಿರ್ಧರಿಸಿದ್ದ ಅಶ್ವಿನಿ ಮತ್ತು ಸಾತ್ವಿಕ್ ಅವರು ಪ್ರಣವ್ ಜೆರ್ರಿ ಚೋಪಾx ಮತ್ತು ಸಿಕ್ಕಿ ರೆಡ್ಡಿ ಅವರನ್ನು 21-9, 20-22, 21-17 ಗೇಮ್ಗಳಿಂದ ಕೆಡಹಿ ಪ್ರಶಸ್ತಿ ಪಡೆದರು. ಆಬಳಿಕ ಅಶ್ವಿನಿ ಅವರು ಸಿಕ್ಕಿ ಜತೆಗೂಡಿ ಸಾನ್ಯೊಗಿತಾ ಘೋರ್ಪಡೆ ಮತ್ತು ಪ್ರಜಕ್ತ ಸಾವಂತ್ ಅವರನ್ನು 21-14, 21-14 ಗೇಮ್ಗಳಿಂದ ಸೋಲಿಸಿ ಡಬಲ್ಸ್ನ ಪ್ರಶಸ್ತಿ ಗೆದ್ದರು.
ದ್ವಿತೀಯ ಶ್ರೇಯಾಂಕದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಅವರು ಒಂದು ಗೇಮ್ ಹಿನ್ನಡೆಯಿಂದ ತಿರುಗಿ ಬಿದ್ದು ಅಗ್ರ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಅವರನ್ನು 15-21, 22-20, 25-23 ಗೇಮ್ಗಳಿಂದ ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.