‘ಮೋದಿಗೆ ನೈತಿಕ ಬೆಂಬಲಕ್ಕಾಗಿ ವಿಜಯೋತ್ಸವ’
Team Udayavani, Nov 9, 2017, 10:31 AM IST
ಪುತ್ತೂರು: ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರಿನಲ್ಲಿ ವಿವಿಧ ಸಂಘಟನೆಗಳ ವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು. ನಗರದ ಬಸ್ ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಣದ ಹೊಳೆಯಲ್ಲಿ ಗೆದ್ದು ದೇಶವನ್ನು ಹಾಳು ಮಾಡುವವರ ನಡುವೆ ಪ್ರೀತಿ, ವಿಶ್ವಾಸ, ದೇಶಪ್ರೇಮದ ಭಾರತವನ್ನು ಕಟ್ಟುವ ಚಿಂತನೆಯ ಮೋದಿಯವರನ್ನು ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ. ಮುಂದಿನ 25 ವರ್ಷಗಳ ಕಾಲ ಮೋದಿಯವರು ಪ್ರಧಾನಿಯಾಗಿರಬೇಕು. ಅವರಿಗೆ ನೈತಿಕ ಬೆಂಬಲ ನೀಡಲು ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರು.
ಸಿಮಿ, ಆಲ್‌ಕೈದಾದಂತಹ ಭಯೋತ್ಪಾದನೆಯ ಸಂಘಟನೆಗಳ ಜತೆ ಸೇರಿಕೊಂಡು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡುವವರು, ಮುಸ್ಲಿಮರ ತುಷ್ಟೀಕರಣದೊಂದಿಗೆ ಮತಾಂಧತೆಗೆ ಬೆಂಬಲಿಸುವವರು ನೋಟ್ ಬ್ಯಾನ್ ನಿಷೇಧದ ವಾರ್ಷಿಕವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಭಯೋತ್ಪಾದನೆಗೆ ಪ್ರೇರಣೆ ಕೊಡುವವರನ್ನು ಮಟ್ಟಹಾಕುವ ಪ್ರಧಾನಿಯವರ ಪ್ರಯತ್ನಕ್ಕೆ ಸಮಾಜವೇ ಅಭಿನಂದಿಸುತ್ತದೆ ಎಂದರು.
ವಿರೋಧಿಗಳಿಗೆ ಕರಾಳ ದಿನ
ಬಜರಂಗದಳ ರಾಜ್ಯ ಗೋ ರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ದೇಶದಲ್ಲಿ 70 ವರ್ಷ ಕೆಟ್ಟ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬೆಂಬಲಿತ ಸಂಘಟನೆಗಳು ಕರಾಳ ದಿನವನ್ನು ಆಚರಿಸಿವೆ. ಅವರಿಗೆ ಕರಾಳ ದಿನ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಪಕ್ಷ ಹಾಗೂ ಸಂಘಟನೆಯ ಪ್ರಮುಖರಾದ ಚಿನ್ಮಯ್ ರೈ, ಅಜಿತ್ ರೈ ಹೊಸಮನೆ, ಲಕ್ಷ್ಮಣ ಗೌಡ, ಸುಜೀಂದ್ರ ಪ್ರಭು, ವಿಶ್ವನಾಥ ಗೌಡ, ರಾಮದಾಸ್ ಹಾರಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಭಾಸ್ಕರ್ ನಾೖಕ್, ಅಶೋಕ್ ಕುಂಬ್ಲೆ ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಕೋಲ್ಪೆ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕರಿಗೆ ಸವಾಲು
ವೈದ್ಯ ಡಾ| ಎಂ.ಕೆ. ಪ್ರಸಾದ್ ಮಾತನಾಡಿ, ಇಡೀ ದೇಶಕ್ಕೆ ನ. 8ರ ದಿನ ಸುದಿನ. ಇಂದು ಕರಾಳ ದಿನ ಆಚರಿಸುವವರು ನಿಜಕ್ಕೂ ದೇಶಪ್ರೇಮಿಗಳಲ್ಲ ಎಂದರು. ಅನ್ನಭಾಗ್ಯದ ಅಕ್ಕಿಗೆ ಕೇಂದ್ರ ಸರಕಾರ ಹಣ ನೀಡುತ್ತಿದೆ ಎನ್ನುವ ತಮ್ಮ ಬ್ಯಾನರ್‌ಗೆ ವ್ಯಂಗ್ಯವಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರಿಗೆ ತಿರುಗೇಟು ನೀಡಿದ ಅವರು, ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ಇದ್ದರೆ ಶಾಸಕರು ಕೇಸು ಹಾಕಲಿ ಎಂದು ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.