ಟಿಪ್ಪು ಜಯಂತಿಗೆ ಆಕ್ರೋಶ
Team Udayavani, Nov 9, 2017, 10:51 AM IST
ಬೆಂಗಳೂರು: ರಾಜ್ಯದ ಹಲವೆಡೆ ಟಿಪ್ಪು ಜಯಂತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಲವೆಡೆ ಪ್ರತಿಭಟನೆಗಳು ಮುಂದುವರೆದಿದೆ. ಕೊಡಗಿನಲ್ಲಿ ಟಿಪ್ಪುಜಯಂತಿ ಆಚರಣಾ ವಿರೋಧಿ ಸಮಿತಿ ನ.10ರಂದು ಕೊಡಗು ಬಂದ್‌ಗೆ ಕರೆ ನೀಡಿದೆ.
ಸರಕಾರದ ಆದೇಶದಂತೆ ಜಿಲ್ಲಾಡಳಿತದ ವತಿಯಿಂದ ಉಡುಪಿ ಜಿಲ್ಲೆ ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ನ.10ರಂದು ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಮುತ್ತಿಗೆ ಹಾಕುವ ನಿರ್ಧಾರ ಮಾಡಿದೆ. ಬೆಳಗ್ಗೆ 10 ಗಂಟೆಗೆ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೆಲ್ಲ ಸೇರಿ ಮಣಿಪಾಲಕ್ಕೆ ತೆರಳಲಿದ್ದೇವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ನಾಳೆ ಕೊಡಗು ಬಂದ್‌ಗೆ ಕರೆ: ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ನ.10ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಕೊಡಗು ಬಂದ್‌ಗೆ ಕರೆ ನೀಡಿದೆ. ಸಮಿತಿ ಅಧ್ಯಕ್ಷ ಅಭಿಮನ್ಯು ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಎಷ್ಟೇ ಬಿಗಿ ಬಂದೋ ಬಸ್ತ್ ಕೈಗೊಂಡರೂ ಟಿಪ್ಪು ಜಯಂತಿ
ಆಚರಣೆಗೆ ತೀವ್ರ ಪ್ರತಿರೋಧ ಒಡ್ಡುವುದಾಗಿ ಎಚ್ಚರಿಕೆ ನೀಡಿದರು. ಭಯದ ವಾತಾವರಣದಲ್ಲಿ ಬಲವಂತವಾಗಿ ಟಿಪ್ಪುಜಯಂತಿ ಆಚರಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದ್ದು, ಇದು ಮುಖ್ಯಮಂತ್ರಿಗಳ ವಿನಾಶದ ಆಚರಣೆ ಎಂದು ಟೀಕಿಸಿದರು. ಎಲ್ಲ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಬಂದ್‌ಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ಮಕ್ಕಳ
ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳನ್ನೂ ಬಂದ್ ಮಾಡುವುದು ಸೂಕ್ತ ಎಂದರು. ಸರಕಾರದ ಉದ್ಧಟತನದಿಂದಾಗಿ ಮುಂದೆ ಆಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.
ಆಮಂತ್ರಣ ಮರುಮುದ್ರಣ
ಬೆಳಗಾವಿ: ನಗರದಲ್ಲಿ ನ.10ರಂದು ಸರಕಾರದ ವತಿಯಿಂದ ನಡೆಯುವ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಇಬ್ಬರು ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಕೈಬಿಡಲಾಗಿದೆ. ಟಿಪ್ಪು ಸುಲ್ತಾನ
ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸ ಬಾರದು ಎಂದು ಕೇಂದ್ರ ಸಚಿವ ಆನಂತಕುಮಾರ ಹೆಗಡೆ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಆದರೆ ಜಿಲ್ಲಾಡಳಿತ ಶಿಷ್ಟಾಚಾರದ ಪ್ರಕಾರ ಇಬ್ಬರ ಹೆಸರನ್ನೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿತ್ತು. ಆದರೆ, ಈಗ ಸರಕಾರದ ನಿರ್ದೇಶನ
ದಂತೆ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಣ ಮಾಡಿ ಇಬ್ಬರು ಸಂಸದರ ಹೆಸರನ್ನು ಅವರ ಮನವಿಯ ಮೇರೆಗೆ ಕೈಬಿಟ್ಟಿದೆ.
ಚರ್ಚೆಗೆ ಗ್ರಾಸವಾದ ಟಿಪ್ಪು ಕುರಿತ”ಮಂಗಳೂರು ದರ್ಶನ’ದ ಲೇಖನ
ಮಂಗಳೂರು: ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರಕಾರ ಮುಂದಾಗುತ್ತಿದ್ದಂತೆ, ಇತ್ತ ಟಿಪ್ಪು ಸುಲ್ತಾನ್‌ನಿಂದ ಕ್ರೈಸ್ತ ಸಮಾಜ ಅನ್ಯಾಯ ಎದುರಿಸಿದೆ ಎಂದು ಉಲ್ಲೇಖೀಸಿರುವ ಸರಕಾರದ ಪ್ರಾಯೋಜಿತ “ಮಂಗಳೂರು ದರ್ಶನ’ ಎಂಬ ಪ್ರತಿಷ್ಠಿತ ಪುಸ್ತಕದ ಲೇಖನವೊಂದು ಈಗ ಚರ್ಚೆಗೆ ವೇದಿಕೆ ಒದಗಿಸಿದೆ. ಮಂಗಳೂರು ನಗರದ ಕಲೆ, ಸಂಸ್ಕೃತಿ, ಸಾಹಿತ್ಯ, ಚರಿತ್ರೆಗಳ ಮಾಹಿತಿಯುಳ್ಳ ನಗರಕೋಶ ಕುರಿತಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿದ್ಧಪಡಿಸಲಾಗಿರುವ “ಮಂಗಳೂರು ದರ್ಶನ’ದ 3 ಸಂಪುಟಗಳು ಕಳೆದ ವರ್ಷ ಮಂಗಳೂರಿನಲ್ಲಿ ಬಿಡುಗಡೆ ಗೊಂಡಿದ್ದವು. ಸಾಹಿತ್ಯ ಕ್ಷೇತ್ರದ ದಿಗ್ಗಜರು ಸಿದ್ಧಪಡಿಸಿದ ಈ ಸಂಪುಟ ಮಂಗಳೂರಿನ ಸಮಗ್ರ ಇತಿಹಾಸವನ್ನು ದಾಖಲಿಸಿತ್ತು. ಈ ಪುಸ್ತಕದಲ್ಲಿನ ಟಿಪ್ಪು ಹಾಗೂ ಮಂಗಳೂರು ಕ್ರಿಶ್ಚಿಯನ್ನರು ಎಂಬ ಲೇಖನದಲ್ಲಿ ಟಿಪ್ಪುವಿನ ಕುರಿತಾದ ಮಂಗಳೂರು ಸಂಬಂಧಿತ ವಿವರಗಳನ್ನು ಉಲ್ಲೇಖೀಸಿ ರುವ ಅಂಶ ವೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಇತಿಹಾಸದಲ್ಲಿರುವ ದಾಖಲೆಗಳನ್ನು ಪರಾಮರ್ಶಿಸಿ ಈ ಲೇಖನ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಲೇಖನದಲ್ಲಿ ತಿಳಿಸಿದಂತೆ, ಮಂಗಳೂರಿನ ಕ್ರೈಸ್ತರಲ್ಲಿ, ಕೊಡಗಿನ ಕೊಡವರಲ್ಲಿ ಅಥವಾ ಮಲಬಾರಿನ ನಾಯರುಗಳಲ್ಲಿ ಟಿಪ್ಪುವಿನ ಬಗ್ಗೆ ಇರುವ ನೆನಪುಗಳಲ್ಲಿ ಆತನ ಕ್ರೌರ್ಯ ಅಸಹನೆಗಳಿಗೆ ಇದ್ದ ಸ್ಥಾನ ಆತನ ಉದಾರತೆಗೆ ಇಲ್ಲ. ಬ್ರಿಟಿಷ್ ಇತಿಹಾಸಕಾರರಲ್ಲಿ ಅನೇಕರು ಟಿಪ್ಪುವಿನ ಬಗ್ಗೆ ಒಳ್ಳೆಯ ಮಾತನ್ನು ಹೇಳಲಿಲ್ಲ ಎಂಬ ವಾಕ್ಯಗಳು ಚರ್ಚೆಗೆ ಈಗ ವೇದಿಕೆ ಒದಗಿಸಿವೆ.
ಗೋಸುಂಬೆ ರಾಜಕೀಯ: ತಿಮ್ಮಾಪುರ
ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಬ್ಬ ಊಸರವಳ್ಳಿ ರಾಜಕೀಯ ವ್ಯಕ್ತಿ. ತಾವು ಕೆಜೆಪಿ ಕಟ್ಟಿದಾಗ ಟಿಪ್ಪು ವೇಷ ಹಾಕಿ, ಕೈಯಲ್ಲಿ ಖಡ್ಗ ಹಿಡಿದು ಫೋಸ್ ಕೊಟ್ಟವರು. ಈಗ ಬಿಜೆಪಿ ಸೇರಿ ಟಿಪ್ಪು ವಿರೋಧಿಸುತ್ತಿದ್ದಾರೆ. ಇಂತಹ ಊಸರವಳ್ಳಿ ರಾಜಕಾರಣಿಗಳನ್ನು ಜನ ನಂಬಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಟೀಕಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗೋಸುಂಬೆ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.