ಟೋಪಿವಾಲಾಗಳ ಉತ್ಸವ

Team Udayavani, Nov 9, 2017, 12:26 PM IST

09-22.jpg

ಟೋಪಿ ತೊಟ್ಟ ವ್ಯಕ್ತಿಯೊಬ್ಬ ಬಂದ. ಅವನ ತಲೆ ಮೇಲೆ ಯಾರೋ ಮೊಟ್ಟೆ ಒಡೆದಿದ್ದಾರೆ. ಮತ್ತೂಬ್ಬ ವ್ಯಕ್ತಿಯ ತಲೆ ಮೇಲೆ ಪೊದೆ ಬೆಳೆದುಬಿಟ್ಟಿದೆ. ಮತ್ತೂಬ್ಬನ ತಲೆ ಮೇಲೆ ಯಾವುದೋ ದೈತ್ಯ ಹಕ್ಕಿ ಪಿಕ್ಕೆ ಬಾಕಿಬಿಟ್ಟಿದೆ. ಮಕ್ಕಳೆಲ್ಲಾ ಅವನನ್ನು ನೋಡಿ ನಕ್ಕಿದ್ದೇ ನಕ್ಕಿದ್ದು. ತಲೆ ಮೇಲೆ ಇವೆಲ್ಲಾ ಹೇಗೆ ಬಂದವು ಎಂದುಕೊಳ್ಳದಿರಿ. ಇವೆಲ್ಲಾ ತಮಾಷೆಗಾಗಿ. ಇದು ಟೋಪಿ ಉತ್ಸವ.

ಇಂಗ್ಲೆಂಡ್‌ನ‌ ಬ್ರಿಡ್‌ಪೋರ್ಟ್‌ನಲ್ಲೊಂದು ವಿಶೇಷ ಉತ್ಸವ ನಡೆಯುತ್ತೆ. ಅದರ ಹೆಸರು “ಟೋಪಿ ಉತ್ಸವ’. ಆ ದಿನದಂದು ಸ್ಥಳೀಯರು ತಮ್ಮ ಟೋಪಿಗಳನ್ನು ಅಲಂಕರಿಸಿ ಸಿದ್ಧಪಡಿಸಿಕೊಳ್ಳುವ ಪರಿ ನಿಜಕ್ಕೂ ಸೋಜಿಗ ಹುಟ್ಟಿಸುವಂಥದ್ದು. ಇಂಗ್ಲೆಂಡ್‌ನ‌ ಬ್ರಿಡ್‌ಪೋರ್ಟ್‌ ಪಟ್ಟಣದಲ್ಲಿ ಪ್ರತೀ ವರ್ಷ ನಡೆಯುವ ಈ ಟೋಪಿ ಉತ್ಸವ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ಇದು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರುವ ಉತ್ಸವವಾಗಿದೆ. 1986ರಿಂದಲೂ ಟೋಪಿ ಮಾರಾಟ ಹಾಗೂ ಗಂಡಸರ ಮೇಲುಡುಗೆಗಳನ್ನು ಮಾರುವ ಕಾರ್ಯದಲ್ಲಿ ನಿರತರಾಗಿರುವ ರೋಜರ್‌ ಸ್ನೂಕ್‌ರಿಂದ 2009ರಲ್ಲಿ ಮೊದಲಿಗೆ ಪ್ರಾರಂಭವಾದ ಈ ಉತ್ಸವವು ವರ್ಷದಿಂದ ವರ್ಷಕ್ಕೆ ಸಾಕಷ್ಟು ಜನಸಂದಣಿಯಿಂದ ಆಚರಿಸಲ್ಪಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ. 

ಆಚರಣೆಯ ವಿಧಾನ
ಪ್ರತೀ ವರ್ಷದ ಸೆಪ್ಟೆಂಬರ್‌ ತಿಂಗಳ ಮೊದಲನೇ ಶನಿವಾರದಂದು ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಆ ದಿನದಂದು ಸ್ಥಳಿಯರಷ್ಟೇ ಅಲ್ಲದೇ ಜಗತ್ತಿನೆಲ್ಲೆಡೆಯಿಂದ ಜನರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆ ದಿನದಂದು ನಗರದಾದ್ಯಂತ ಟೋಪಿಗಳ ಪ್ರದರ್ಶನ, ರಿಯಾಯಿತಿ ದರದಲ್ಲಿ ಮಾರಾಟ ಅಲ್ಲದೇ ಟೋಪಿಗಳ ಹರಾಜು ಕ್ರಿಯೆಯೂ ಜರುಗುವವು. ನಗರದ ಪ್ರಸಿದ್ಧ “ಬುಕ್ಕೀ ಡೂ’ ಚೌಕದಲ್ಲಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಸೇರುವ ಜನರು ತಮ್ಮ ತಲೆಯ ಮೇಲೆ ವಿವಿಧ ಬಣ್ಣದ ಹಾಗೂ ಲಕ್ಷಣ ಮಾದರಿಯ ಟೋಪಿಗಳನ್ನು ಧರಿಸಿ ಮಿಂಚುತ್ತಾರೆ. 

ವಯಸ್ಸಿನ ಮಿತಿಯಿಲ್ಲದೆ ಒಂದೆಡೆ ಸೇರುವ ನಗರದ ಜನತೆ ಚಿತ್ರ ವಿಚಿತ್ರ ಟೋಪಿಗಳನ್ನು ಹಾಕಿಕೊಂಡು ´ೋಟೋ ತೆಗೆಸಿಕೊಳ್ಳುವುದಲ್ಲದೇ ತಮ್ಮ ಟೋಪಿಗಳನ್ನು ಪರಸ್ಪರ ಬದಲಿಸಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಸಾಕುನಾಯಿಗಳಿಗೂ ಟೋಪಿ ಹಾಕಿಸಿಕೊಂಡು ಕರೆತರುವ ಜನರು ಅವುಗಳನ್ನೂ ನಗರದ ಚೌಕದಲ್ಲಿ ಪ್ರದರ್ಶನ ಮಾಡುತ್ತಾರೆ. ಉತ್ತಮವಾಗಿ ಸಿಂಗರಿಸಲಾದ ಟೋಪಿಯನ್ನು ಧರಿಸಿದವರಿಗೆ ಬಹುಮಾನವೂ ಇದೆ. ಸಾಕುನಾಯಿಗಳಿಗೂ ಇಲ್ಲಿ ಬಹುಮಾನಗಳುಂಟು.

ತಮಾಷೆಗಷ್ಟೇ ಅಲ್ಲ
ಈ ಉತ್ಸವ ಬರೀ ತಮಾಷೆಗಷ್ಟೇ ಅಲ್ಲ. ಪರ್ಯಾಯ ಇಂಧನ, ಪರಿಸರ ಮಾಲಿನ್ಯ, ಭಯೋತ್ಪಾದನೆ  ಮುಂತಾದ ಜಾಗತಿಕ ಸಮಸ್ಯೆಗಳ ಬಗೆಗಿನ ಸಂದೇಶ ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ. 

ಪ.ನಾ.ಹಳ್ಳಿ.ಹರೀಶ್‌ ಕುಮಾರ್‌, ತುಮಕೂರು

ಟಾಪ್ ನ್ಯೂಸ್

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.