ನ.13ರಿಂದ 17ರ ತನಕ ದಿಲ್ಲಿಯಲ್ಲಿ 3ನೇ ಬಾರಿ ಬೆಸ-ಸಮ
Team Udayavani, Nov 9, 2017, 3:16 PM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಜೀವಕ್ಕೇ ಅಪಾಯಕಾರಿ ಎನ್ನುವ ಮಟ್ಟಕ್ಕೆ ಏರಿರುವ ಕಾರಣ ಇದೇ ನ.13ರಿಂದ 17ರ ತನಕ ಮತ್ತೆ ಬೆಸ-ಸಮ ವಾಹನ ಸಂಚಾರ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ದಿಲ್ಲಿಯ ಸಾರಿಗೆ ಸಚಿವ ಕೈಲಾಶ್ ಗೆಹಲೋತ್ ಅವರು ತಮ್ಮ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ದಿಲ್ಲಿಯಲ್ಲಿ ವಾಹನಗಳಿಂದಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಸ – ಸಮ ವಾಹನ ಸಂಚಾರ ನಿಯಮ ಜಾರಿಗೆ ಬರುತ್ತಿರುವುದು ಇದೀಗ ಮೂರನೇ ಬಾರಿ. ಮೊದಲನೇ ಬಾರಿ ಇದು ಜಾರಿಗೆ ಬಂದದ್ದು 2106ರ ಜ.1ರಿಂದ 15 ದಿನಗಳ ಮಟ್ಟಿಗೆ. ಎರಡನೇ ಬಾರಿ ಅದೇ ವರ್ಷ ಎಪ್ರಿಲ್ 15ರಿಂದ ಮತ್ತೆ ಈ ನಿಯಮವನ್ನು ಜಾರಿಗೆ ತರಲಾಯಿತು.
ಈ ಎರಡೂ ಹಂತಗಳಲ್ಲಿ ದ್ವಿಚಕ್ರ ವಾಹನಗಳಿಗೆ, ಸಿಎನ್‌ಜಿ ಚಾಲಿತ ಕಾರುಗಳಿಗೆ ಮತ್ತು ಮಹಿಳಾ ಡ್ರೈವರ್‌ಗಳಿಗೆ (ಒಂಟಿಯಾಗಿ ಇಲ್ಲವೇ ಮಕ್ಕಳೊಂದಿಗೆ) ರಿಯಾಯಿತಿ ನೀಡಲಾಯಿತು.
ಇದೀಗ ಮೂರನೇ ಬಾರಿ ಜಾರಿಗೆ ತರಲಾಗುವ ಬೆಸ – ಸಮ ನಿಯಮದಲ್ಲಿ ಹಿಂದಿನ ರೀತಿಯ ರಿಯಾಯಿತಿಗಳು ಇರುವುದೋ ಇಲ್ಲವೋ ಎಂಬುದು ಈಗಿನ್ನೂ ಸ್ಪಷ್ಟವಾಗಿಲ್ಲ.
ಬೆಸ – ಸಮ ವಾಹನ ನಿಯಮವನ್ನು 3ನೇ ಬಾರಿ ಜಾರಿಗೆ ತರಲಾಗುವ ಬಗ್ಗೆ ಇಂದು ಸಂಜೆ ಸಾರಿಗೆ ಸಚಿವ ಅಶೋಕ್ ಗೆಹಲೋತ್ ಅವರು ಪತ್ರಿಕಾ ಗೋಷ್ಠಿ ಕರೆಯಲಿದ್ದು ಆಗ ಶರತು ಮತ್ತು ನಿಬಂಧನೆ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.