ಬೆಳಗ್ಗಿನ ಉಪಾಹಾರ ಯೋಜನೆ: ಬೊಂಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ
Team Udayavani, Nov 9, 2017, 4:16 PM IST
ಬಂಟ್ವಾಳ: ಶಾಲೆಯಲ್ಲಿ ಬೆಳಗ್ಗಿನ ಉಪಾಹಾರ ನೀಡುವ ಪ್ರಥಮ ಯೋಜನೆಯೊಂದು ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ನ.7ರಂದು ಜಾರಿಗೆ ಬಂದಿದ್ದು, ತಾಲೂಕಿನಲ್ಲಿ ಯಶಸ್ವಿಯಾಗಿ 5ನೆಯ ಶಾಲೆಯಲ್ಲಿ ಅನುಷ್ಠಾನಗೊಂಡಿದ್ದು ಇನ್ನೂ ನಾಲ್ಕು ಶಾಲೆಗಳಿಗೆ ಇದೇ ತಿಂಗಳಲ್ಲಿ ಅನುಷ್ಠಾನಕ್ಕೆ ಬರುವ ಒಟ್ಟು 9 ಶಾಲೆಗಳ 2,016 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ.
ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಆಶ್ರಯದ ಈ ಯೋಜನೆಗೆ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ನಿವೃತ್ತ ಪ್ರಾಂಶುಪಾಲ ಸೋಮಶೇಖರ ಪ್ರಭು ಅವರು ಚಾಲನೆ ನೀಡಿದರು.
ದ.ಕ. ಜಿಲ್ಲೆ ಬಂಟ್ವಾಳ ತಾಲೂಕಿನ 9 ಶಾಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, 280 ಮಕ್ಕಳಿಗೆ ಸಜ್ಜಿಗೆ ಅವಲಕ್ಕಿಯನ್ನು ಟ್ರಸ್ಟ್‌ನಿಂದ ಮತ್ತು ಶಾಲೆಯ ವತಿಯಿಂದ ಹಾಲನ್ನು ಒದಗಿಸಲಾಯಿತು.
ಉದ್ಘಾಟನ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ
ವಹಿಸಿದ್ದರು. ತಾ. ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾ.ಪಂ. ಸದಸ್ಯರಾದ ಗೀತಾ, ವಿಶಾಲಾಕ್ಷಿ, ಜಯರಾಜ್, ಶಿಕ್ಷಣ ಸಂಯೋಜಕಿ ಪುಷ್ಪಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ಪದ್ಮನಾಭ ಮಯ್ಯ, ಪತ್ರಕರ್ತರಾದ ಹರೀಶ ಮಾಂಬಾಡಿ, ಮೌನೇಶ ವಿಶ್ವಕರ್ಮ, ಗಿರೀಶ್ ಪೂಜಾರಿ ಬಸ್ರ, ಶಿಕ್ಷಕರು, ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಮಲಾಕ್ಷ ಸ್ವಾಗತಿಸಿದರು. ಶಿಕ್ಷಕರಾದ ಹರಿಪ್ರಸಾದ್ ವಂದಿಸಿದರು. ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಯೋಜನೆ ಸಂಪೂರ್ಣ ಯಶಸ್ವಿ
ಕನ್ನಡ ಶಾಲೆಗೆ ಸಮಯಕ್ಕೆ ಸರಿಯಾಗಿ ನೂರಕ್ಕೆ ನೂರು ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಯೋಜನೆ ಯಶಸ್ವಿಯಾಗಿದೆ. ವಿಟ್ಲ ಹಿ.ಪ್ರಾ. ಶಾಲೆಯಲ್ಲಿ ಈ ಯೋಜನೆ ಅ. 12ರಂದು, ಅದೇ ದಿನ ಚಂದಳಿಕೆ ಶಾಲೆಯಲ್ಲಿ ಬಿಸ್ಕೆಟ್ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ನ. 2ರಂದು ಕನ್ಯಾನ ಶಾಲೆಯಲ್ಲಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದ್ದರು. ಅದೇ ದಿನ ಕೋಡಪದವು, ಕೊಳಕೆ ಶಾಲೆಗಳಲ್ಲಿ ಬೆಳಗ್ಗೆ ಮಕ್ಕಳಿಗೆ ಬಿಸ್ಕೆಟ್, ಹಾಲು ಒದಗಿಸುವ ಕಾರ್ಯ ಆರಂಭಗೊಂಡಿತ್ತು.
– ಶಿವಪ್ರಕಾಶ್ ಎನ್.,
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
ಉತ್ತಮ ಆರೋಗ್ಯ ಕಾಪಾಡುವುದು ಟ್ರಸ್ಟ್ ಆಶ್ರಯ
ಬೆಳಗ್ಗಿನ ಉಪಾಹಾರ ನೀಡುವುದರ ಮೂಲಕ ಮಕ್ಕಳು ಕಲಿಕೆ ವಿಷಯಕ್ಕೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿ,ಅವರನ್ನು ಈ ದೇಶದ ಉತ್ತಮ ಆರೋಗ್ಯವಂತ ಪ್ರಜೆಗಳಾಗಿ ರೂಪಿಸುವುದು ಟ್ರಸ್ಟ್ ಆಶಯವಾಗಿದೆ.
– ಸೋಮಶೇಖರ ಪ್ರಭು,
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ
ನಿವೃತ್ತ ಪ್ರಾಂಶುಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.