ಸಹಕಾರ ಸಿಬಂದಿಗೆ ತರಬೇತಿ
Team Udayavani, Nov 9, 2017, 4:55 PM IST
ನಗರ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತ ಸಂಘ ಇದರ ಆಶ್ರಯದಲ್ಲಿ ನಗರದ ರೋಟರಿ ಬ್ಲಡ್ ಬ್ಯಾಂಕ್ ಸಭಾಭವನದಲ್ಲಿ ಪರಿಣಾಮಕಾರಿ ವ್ಯಕ್ತಿತ್ವ ನಿರ್ಮಾಣ ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ತರಬೇತಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ ವೆಲ್ತ್ ವಿಷನ್ ಮತ್ತು ಸತ್ವಂ ಸಂಸ್ಥೆಯ ಮಾಲಕ ಮುರಳೀಧರ ಶುಭ ಹಾರೈಸಿದರು.
ಸದುಪಯೋಗಪಡಿಸಿ
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರದ ಉಪಪ್ರಧಾನ ವ್ಯವಸ್ಥಾಪಕ ಭವಾನಿ ಪ್ರಭು ಮಾತನಾಡಿ, ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಲಿ ಎಂದು ಶುಭ ಹಾರೈಸಿದರು.
ನಾವು ಬದಲಾಗಬೇಕು
ಸಂಪನ್ಮೂಲ ವ್ಯಕ್ತಿಯಾಗಿ ನಬಾರ್ಡ್‌ನ ನಿವೃತ್ತ ಅಧಿಕಾರಿ, ವೈ.ವಿ. ಗುಂಡೂರಾವ್ ಅವರು ತಮ್ಮ ತರಬೇತಿ ಕಾರ್ಯಕ್ರಮದಲ್ಲಿ ಸ್ವತಃ ನಾವು ಬದಲಾಗುವುದರೊಂದಿಗೆ ಸಮಾಜವನ್ನು ಬದಲಾವಣೆಯೆಡೆಗೆ ಕೊಂಡೊಯ್ಯುವಂತವರಾಗಬೇಕು, ಇತರರನ್ನು ಟೀಕಿಸುವ, ಅರ್ಥೈಸಿಕೊಳ್ಳುವ ಭರದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೆ ಗೊಂದಲಗಳಿಗೆ, ಕಷ್ಟಗಳಿಗೆ ಸಿಲುಕಿಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ. ಜನರು ಸಾತ್ವಿಕ ರಾಜಸಿಕ ತಾಮಸಿಕ ಗುಣಗಳ ಮಿಶ್ರಣವಾಗಿದ್ದು, ಇದಕ್ಕೆ ಸಾರ್ವತ್ರಿಕ ಮೌಲ್ಯಗಳ ದ್ಯೋತಕವಾಗಿರುವ ಆಧ್ಯಾತ್ಮಿಕತೆಯನ್ನು ಬೆರೆಸಿದರೆ ವ್ಯಕ್ತಿಯು ಶಕ್ತಿಯಾಗಿ ನಿರ್ಮಾಣಗೊಳ್ಳುತ್ತಾನೆ ಎಂದರು.
ಸಮಾರೋಪದ ಮುಖ್ಯ ಅತಿಥಿ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ಶ್ರೀಶಕುಮಾರ್ ಮಾತನಾಡಿ, ವೃತ್ತಿಯಲ್ಲಿ ಪ್ರೌಢಿಮೆಯನ್ನು ಸಾಧಿಸುವ ಜತೆಗೆ ನಮ್ಮ ಸಮಾಜದ ಅಭ್ಯುದಯಕ್ಕೆ ಕೊಡುಗೆ ನೀಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಸಮಾಜಕ್ಕೆ ಕೊಡುಗೆ ನೀಡಿ
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ವಿನಯ ಕುಮಾರ್ ಕಂದಡ ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿನ ವಿಷಯಗಳನ್ನು ದಿನನಿತ್ಯದ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಸಫಲತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಕಾರ ಸಿಬಂದಿ ರಶ್ಮಿ ಸಾಕಳ್ಕರ್ ಪ್ರಾರ್ಥಿಸಿ, ಸಹಕಾರದ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿ ಪ್ರೇಮಚಂದ್ರ ನಾಯಕ್ ಸ್ವಾಗತಿಸಿದರು. ಸುಕನ್ಯಾ ಎಸ್.ಆರ್. ವಂದಿಸಿದರು. ಸುಧೀರ್ ಬಿ. ನಿರ್ವಹಿಸಿದರು. ಮಂಜುನಾಥ್ ಭಂಡಾರ್ಕರ್ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.