ಗುಜರಾತ್ನಲ್ಲಿ ಬಿಜೆಪಿಗೇ ಜಯ
Team Udayavani, Nov 10, 2017, 6:40 AM IST
ಅಹ್ಮದಾಬಾದ್: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಗುಜರಾತ್ನಲ್ಲಿ ಎಬಿಪಿ ನ್ಯೂಸ್-ಸಿಎಸ್ಡಿಎಸ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಬಿಜೆಪಿಯೇ ಅಧಿಕಾರ ಉಳಿಸಿಕೊಳ್ಳಲಿದೆ ಎಂದಿದೆ. ಸಮೀಕ್ಷೆ ಪ್ರಕಾರ, ಬಿಜೆಪಿಗೆ 113-121, ಕಾಂಗ್ರೆಸ್ಗೆ 58-64 ಸ್ಥಾನಗಳು ಲಭಿಸಲಿವೆ. ಬಿಜೆಪಿಗೆ ಶೇ.47, ಕಾಂಗ್ರೆಸ್ಗೆ ಶೇ.41 ಮತ ದೊರೆಯಲಿವೆ.
ಪಿತ್ರೋಡಾ ಹೆಗಲಿಗೆ ಪŠಣಾಳಿಕೆ ಹೊಣೆ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದ, ಕಾಂಗ್ರೆಸ್ ಹಿತೈಷಿಯೆಂದೂ ಬಿಂಬಿತವಾಗಿರುವ ತಂತ್ರಜ್ಞಾನ ಉದ್ಯಮಿ ಸ್ಯಾಮ್ ಪಿತ್ರೋಡಾ ಅವರನ್ನು ಕಾಂಗ್ರೆಸ್ ಗುಜರಾತ್ ಚುನಾವಣಾ ಕಣಕ್ಕೆ ಎಳೆದು ತಂದಿದೆ. ಜನಪರ ಪ್ರಣಾಳಿಕೆ ಬಿಡುಗಡೆಗೆ ಉದ್ದೇಶಿರುವ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಇದರ ಹೊಣೆಯನ್ನು ಪಿತ್ರೋಡಾರಿಗೆ ವಹಿಸಿದ್ದಾರೆ.
ರಾಹುಲ್ ಅನಿಸಿಕೆಯಂತೆ, ಜನರ ಬಳಿಗೇ ಹೋಗಿ ಅವರ ಬೇಕು-ಬೇಡಗಳನ್ನು ಸಂಗ್ರಹಿ ಸಲಿರುವ ಪಿತ್ರೋಡಾ, ಅದರ ಆಧಾರದ ಮೇಲೆ ಪ್ರಣಾಳಿಕೆ ಸಿದ್ಧಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, 5 ದಿನ ಅಹ್ಮದಾಬಾದ್, ಸೂರತ್, ವಡೋದರಾ, ಜಾಮ್ನಗರ್ಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.