ಇಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
Team Udayavani, Nov 10, 2017, 11:31 AM IST
ಬೆಂಗಳೂರು: ನಗರದ ಮೈಸೂರು ರಸ್ತೆಯ ಕೆಂಗೇರಿ ಬಳಿಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಸಮೀಪ 2100 ಮಿ.ಮೀ. ವ್ಯಾಸದ ಎಂ.ಎಸ್.ಕೊಳವೆ ಮಾರ್ಗದ 300 ಮಿ.ಮೀ. ವ್ಯಾಸದ ಸ್ಕೌರ್ ವಾಲ್ ಬದಲಿಸುವ ಕಾಮಗಾರಿ ನಡೆಸುತ್ತಿರುವುದರಿಂದ ನಗರದ ಕೆಲವು ಭಾಗಗಳಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನ.10ರಂದು ಬೆಳಗ್ಗೆ 11 ಗಂಟೆಯಿಂದ ಆರ್.ಆರ್.ನಗರ, ವಿದ್ಯಾನಗರ, ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಬ್ಯಾಟರಾಯನಪುರ, ಯಲಹಂಕ, ಎಚ್‌ಬಿಆರ್ ಹಾಗೂ ನಾಗಾವರ ಮಹಾಲಕ್ಷ್ಮೀಬಡಾವಣೆ, ಬಸವೇಶ್ವರನಗರ, ಪಶ್ಚಿಮ ವಿಭಾಗದ ಕೆಲವು ಪ್ರದೇಶಗಳು, ಜಿಕೆವಿಕೆ, ಉತ್ತರ ವಿಭಾಗ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ಭಾಗಶಃ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮಂಡಳಿ ಕೋರಿದೆ.
ಸಂಸ್ಕರಣಾ ಘಟಕಗಳ ಉದ್ಘಾಟನೆ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸ್ಥಾಪಿಸಿರುವ 136 ಎಂ.ಎಲ್.ಡಿ ಸಾಮರ್ಥಯದ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಶುಕ್ರವಾರ(ನ.6) ಚಾಲನೆ ನೀಡಲಿದ್ದಾರೆ. ಬೆಳ್ಳಂದೂರು ಅಮಾನಿಕೆರೆಯ ಬಳಿ 90 ಎಂ.ಎಲ್.ಡಿ., ಹೊರಮಾವು ಅಗರ ಬಳಿ 20 ಎಂ.ಎಲ್.ಡಿ., ದೊಡ್ಡಬೆಲೆ ಬಳಿ 20 ಎಂ.ಎಲ್.ಡಿ., ಕಾಡುಗೋಡಿ ಬಳಿ 6 ಎಂ.ಎಲ್.ಡಿ., ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಾರ್ಯಾರಂಭ ಮಾಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.