ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ
Team Udayavani, Nov 10, 2017, 2:20 PM IST
ಸುರತ್ಕಲ್: ಕರಾವಳಿಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆಗಾಗಿ ಕರಾಟೆ ಕಲಿಸುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೆಣ್ಮಕ್ಕಳಿಗಾಗಿ ಇದನ್ನು ಆರಂಭಿಸಿದ್ದು, ಒಟ್ಟು 18 ಗಂಟೆಗಳ ತರಬೇತಿಯನ್ನು 8, 9 ಹಾಗೂ 10ನೇ ತರಗತಿಯವರಿಗೆ ನೀಡಲಾಗುವುದು. ಇದರಲ್ಲಿ ಸ್ವರಕ್ಷಣೆಗೆ ಅಗತ್ಯವಿರುವ ಮುಖ್ಯ ಅಂಶಗಳನ್ನು ಕಲಿಸಲಾಗುತ್ತಿದೆ.
ಪಠ್ಯೇತರ ಚಟುವಟಿಕೆಗಳ ಪೈಕಿ ಕರಾಟೆ ಕಲಿಕೆಯನ್ನು ಸೇರಿಸಿರುವುದು ಶಾಲಾ ಬಾಲಕಿಯರಲ್ಲಿ ಹೊಸ ಹುಮ್ಮಸ್ಸುಮೂಡಿಸಿದೆ. ಸ್ವರಕ್ಷಣೆ, ಏಕಾಗ್ರತೆ ಹೆಚ್ಚಲು ಹಾಗೂ ನಾಯಕತ್ವ ಗುಣವನ್ನು ಬೆಳೆಸಲು ಕೂಡ ಕರಾಟೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಕರಾಟೆ ಕಲಿಕೆಗೆ ಪೂರ್ವ ತಯಾರಿ ಬೇಕಿಲ್ಲ. 14 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿ ಕರಾಟೆ ಕಲಿಸಲಾಗುತ್ತಿದೆ. ಶಾಲಾ ಅವಧಿಯ ಅನುಕೂಲಕರವಾದ ಯಾವುದೇ ಸಮಯದಲ್ಲಿ ತರಗತಿ ನಡೆಸಬಹುದಾಗಿದ್ದು, ಒಂದೆರಡು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಸರಿಯಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಕನಿಷ್ಠ ವಾರದ ಎರಡು ತರಗತಿಗೆ ವಿದ್ಯಾರ್ಥಿನಿಯರು ಹಾಜರಾಗಬೇಕಿದೆ.
ಪ್ರತಿ ವಿದ್ಯಾರ್ಥಿನಿಗೆ 200 ಖರ್ಚು
ಸ್ವ ರಕ್ಷಣಾತ್ಮಕ ಶಿಕ್ಷಣಕ್ಕಾಗಿ ಪ್ರತಿ ವಿದ್ಯಾರ್ಥಿನಿಗೆ ಸರಕಾರ 200 ರೂ. ವ್ಯಯಿಸುತ್ತಿದೆ. ಸರಕಾರೇತರ ಸಂಸ್ಥೆಗಳ ಮೂಲಕ ಕರಾಟೆ ಶಿಕ್ಷರನ್ನು ನೇಮಿಸಲಾಗುತ್ತದೆ. ಕೃಷ್ಣಾಪುರ ಹೈಸ್ಕೂ ಲೊಂದರಲ್ಲೇ 50ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಕಲಿಕೆಗೆ ಪೂರಕ
ಕರಾಟೆ ತರಬೇತಿ ವಿದ್ಯಾರ್ಜನೆಗೆ ಪೂರಕ. ಸ್ವ ರಕ್ಷಣೆಯ ಜತೆಗೆ ಏಕಾಗ್ರತೆ, ಹುಮ್ಮಸ್ಸು ಅವಶ್ಯವಾಗಿದ್ದು, ಇದನ್ನು ಕರಾಟೆಯಿಂದ ಪಡೆಯಬಹುದು. ಸರಕಾರ 18 ಗಂಟೆಯ ಅವಧಿಯ ಬೇಸಿಕ್ ಶಿಕ್ಷಣ ಮಾತ್ರ ನೀಡುತ್ತಿದ್ದು, ವಿದ್ಯಾರ್ಥಿನಿಯರು ಇಚ್ಛಿಸಿದಲ್ಲಿ ಉಚಿತವಾಗಿ ಹೆಚ್ಚುವರಿ ತರಬೇತಿ ನೀಡಲು ಸಿದ್ದ.
– ಭರತ್ ರಾಜ್‌ಧನ್,
ಕರಾಟೆ ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.