ಕೈಗಾರಿಕೆಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆ


Team Udayavani, Nov 10, 2017, 4:54 PM IST

Sai-Ram-GBhat-3.jpg

ತುಮಕೂರು: ಕೈಗಾರಿಕೆಗಳು ಪ್ರಗತಿ ಸಾಧಿಸುವುದರೊಂದಿಗೆ ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕುವಂತಾಗಬೇಕೆಂದು ಸಂಸದ ಎಸ್‌.ಪಿ ಮುದ್ದಹನುಮೇಗೌಡ ತಿಳಿಸಿದರು.

ನಗರದ ಎಸ್‌ಐಟಿ ಬಿರ್ಲಾ ಆಡಿಟೋರಿಯಂನಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಫೆಡರೇಷನ್‌ ಆಫ್ಇಂಡಿಯನ್‌ ಇಂಡಸ್ಟ್ರೀಸ್‌ (ಸಿಐಐ) ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ-2017 ಪ್ರಯುಕ್ತ ಆಯೋಜಿಸಿದ್ದ ರೋಡ್‌ ಶೋ ಉದ್ಘಾಟಿಸಿ ಮಾತನಾಡಿದರು.

ಕೈಗಾರಿಕೆಗಳಿಗೆ ಸೌಲಭ್ಯ: ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯದಲ್ಲಿ ಎಲ್ಲಿಯೂ ಲಭ್ಯವಿಲ್ಲದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರುವ ಪ್ರದೇಶವಾಗಿದ್ದು, ಕೈಗಾರಿಕಾ ಪ್ರದೇಶದಿಂದ ಭೂಮಿಯನ್ನು ಕಳೆದುಕೊಂಡ ರೈತಾಪಿ ಮಕ್ಕಳಿಗೆ ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸೂಕ್ತ ಉದ್ಯೋಗಾವಕಾಶವನ್ನು ಕಲ್ಪಿಸುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಬೇಕಾಗಿದೆ ಎಂದರು.

ತುಮಕೂರು ನಗರ ದಕ್ಷಿಣ ಭಾರತದ ಕೈಗಾರಿಕೋದ್ಯಮಿಗಳಿಗೆ ಮತ್ತು ಬಂಡವಾಳ ಹೊಡಿಕೆದಾರರಿಗೆ ಅತ್ಯಂತ ಪ್ರಶಸ್ತವಾದ ಪ್ರದೇಶವಾಗಿದೆ. ಇಲ್ಲಿ ಹೊಡಿಕೆದಾರರು ನಿರ್ಭಿತಿಯಾಗಿ ನೆಮ್ಮದಿಯಿಂದ ತಮ್ಮ ಕೈಗಾರಿಕೆಗಳನ್ನು ಆರಂಭಿಸಬಹುದೆಂದು ತಿಳಿಸಿದರು.

ಜಿಲ್ಲೆಗೆ ಹೊಸ ಕೈಗಾರಿಕೆಗಳು: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಹಲವಾರ ಭಾಗಗಳಿಂದ ಉದ್ಯಮಿಗಳು ಬರುತ್ತಿದಾರೆ ಈಗಾಗಲೇ ಎಚ್‌.ಎ.ಎಲ್‌, ಇಸ್ರೋ ಜಿಲ್ಲೆಗೆ ಬರುತ್ತಿವೆ ಎಲ್ಲವೂ ತುಮಕೂರಿನ ಚಿತ್ರಣವನ್ನೇ ಬದಲಿಸಲಿವೆ ಎಂದು ಹೇಳಿದರು.

ಕುರಿ ಮಾಂಸ ರಫ್ತು ಕೈಗಾರಿಕೆ ಸ್ಥಾಪಿಸಿ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಅತಿಹೆಚ್ಚು 12 ಲಕ್ಷ ಕುರಿ, ಆಡು ಸಾಕಾಣಿಕೆ ಪ್ರದೇಶವಾಗಿದ್ದು, ಪ್ರತಿ ವರ್ಷ ಇಲ್ಲಿ 6 ಲಕ್ಷಕ್ಕೂ ಹೆಚ್ಚು ಕುರಿಗಳು ವಧಾಗೃಹಗಳನ್ನು ತಲುಪುತ್ತವೆ. ಆದ್ದರಿಂದ ತುಮಕೂರಿನಲ್ಲಿ ಕುರಿ ಆಡು ಮಾಂಸ ರಫ್ತು ಮಾಡುವ ಕೈಗಾರಿಕೆ ಸ್ಥಾಪಿಸಿದಲ್ಲಿ ಅತ್ಯಂತ ಅನುಕೂಲವಾಗಲಿದೆ ಜೊತೆಗೆ ಇದರಿಂದ ಬರುವ ಚರ್ಮ ಕೂಡ ಚರ್ಮ ಕೈಗಾರಿಕೆ ಮಾಡಲು ಸಹಕಾರಿಯಾಗಲಿವೆ ಎಂದರು.

ಸಣ್ಣ ಉದ್ದಿಮೆಗಳು ಕೈಗಾರಿಕೆಗಳ ಉಳಿವಿಗಾಗಿ ಸರ್ಕಾರ ನೆರವಿಗೆ ಹಸ್ತ ಚಾಚಬೇಕು. ರೈತರ ಉತ್ಪನ್ನಗಳ ಸಂಸ್ಕರಣೆ ಕಾರ್ಯ ಆಗಬೇಕು. ತನ್ಮೂಲಕ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಸೂಕ್ತ ಬೆಲೆ ದೊರಕುವಂತಾಗಿ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂದರು.

28,274 ಕೈಗಾರಿಕೆಗಳು: ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ನ ಸುರೇಂದ್ರ ಷಾ ಮಾತನಾಡಿ, ಪ್ರಸ್ತುತ ತುಮಕೂರಿನಲ್ಲಿ 28,274 ಅತಿಸಣ್ಣ, ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು 2062.87 ಕೋಟಿ ರೂ. ಬಂಡವಾಳ ಹೊಡಿಕೆಯೊಂದಿಗೆ ಕಾರ್ಯಾಚರಣೆ ಮಾಡುತ್ತಿವೆ. ಇದರಿಂದ 1,61,961 ಜನರಿಗೆ ನೇರ ಉದ್ಯೋಗ ದೊರಕಿದೆ ಎಂದರು.

ಜಿಲ್ಲೆಯಲ್ಲಿ 110 ಅಕ್ಕಿ ಗಿರಣಿಗಳು. 100 ಡೆಸಿಕೇಟೆಡ್‌ ಕೋಕೋನಟ್‌ ಕೈಗಾರಿಕೆಗಳು ಇವೆ. ಇದಲ್ಲದೆ 35 ಬಾರಿ ಮತ್ತು ಮದ್ಯಮ ಮಟ್ಟದ ಕೈಗಾರಿಕೆಗಳು ಇದ್ದು, ಅವುಗಳ ಒಟ್ಟಾರೆ ಬಂಡವಾಳ ರೂ 1101.53 ಕೋಟಿ ಹೊಡಲಾಗಿದ್ದು, ಇವುಗಳಲ್ಲಿ 7 ಬಹು ರಾಷ್ಟ್ರೀಯ ಕಂಪನಿಗಳು ಇವೆ. ತುಮಕೂರು ಜಿಲ್ಲೆ ಭವಿಷ್ಯದಲ್ಲಿ ಕೈಗಾರಿಕೋದ್ಯಮಿಗಳ ರಾಜದಾನಿಯಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ವಸಂತನರಸಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವಶಂಕರ್‌ ಮಾತನಾಡಿ, ಇಡೀ ದೇಶದಲ್ಲೇ ವಸಂತನರಸಾಪುರ ಕೈಗಾರಿಕಾ ಪ್ರದೇಶ ಸಕಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ವಿಶಿಷ್ಟ ಕೈಗಾರಿಕಾ ಪ್ರದೇಶವಾಗಿದೆ. ಈಗಾಗಲೇ 350-400 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಕೃಷಿ ಉತ್ಪನ್ನ ಸಂಸ್ಕರಣಾ ಘಟಕ ಆರಂಭಿಸಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ಹನುಂತೇಗೌಡ ಮಾತನಾಡಿ, ಸರ್ಕಾರಗಳು ಕೃಷಿಗೆ ಮಾನ್ಯತೆ ನೀಡಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮುಂದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ, ಕಾಸಿಯಾ ಖಜಾಂಚಿ ನರಸಿಂಹಮೂರ್ತಿ, ಉಪಮೇಯರ್‌ ಪರ್‌ಜಾನ ಖಾನಂ, ಕೈಗಾರಿಕೋದ್ಯಮಿ ಬೋರೆಗೌಡ, ಜಯಕುಮಾರ್‌, ಸಣ್ಣ ಕೈಗಾರಿಕಾ ಸಂಘದ ನರಸಿಂಹಮೂರ್ತಿ, ಆನಂದ್‌ ಹೀರೆಮಠ್, ಶ್ರೀಧರ್‌, ಸುಜ್ಞಾನ್‌ ಹಿರೇಮಠ್, ವಿಜಯ ಕುಮಾರ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪ ಜ್ಯೋತಿ ಗಣೇಶ್‌, ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಎಲ್‌. ನಾಗರಾಜ್‌, ಸಹಾಯಕ ನಿರ್ದೇಶಕ ಶಿವಶಂಕರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.