ಕ್ರೀಡಾಪಟುಗಳು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳೋದೇ ತಪ್ಪಾ?
Team Udayavani, Nov 11, 2017, 3:00 AM IST
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕ್ರೀಸ್‌ನಲ್ಲಿ ಎದುರಾಳಿ ಬೌಲರ್‌ಗಳನ್ನು ಚೆಂಡಾಡುತ್ತಾರೆ. ಹೀಗಾಗಿ ಇವರು ಮಹಿಳಾ ತಂಡದ ಸಚಿನ್ ತೆಂಡುಲ್ಕರ್ ಎಂದೇ ಖ್ಯಾತಿ ಪಡೆದಿದ್ದಾರೆ. ದಶಕಗಳಿಂದ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕಿರೀಟ ಇವರಿಗಿದೆ.
ಆದರೆ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಂತರ ಮಿಥಾಲಿ ಅಂಗಳದ ಆಚೆಗೂ ಸದ್ದು ಮಾಡ್ತಿದ್ದಾರೆ. ಅದು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ. ಇದು ಟೀಕಾಕಾರರಿಗೆ ಆಹಾರವಾಗಿದೆ. ಸಿನಿಮಾದವರು ಬಿಕಿನಿ ತೊಟ್ಟರೆ ಸೂಪರ್ ಅನ್ನುವ ಜನ ಕ್ರೀಡಾಪಟುಗಳು ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಂಡರೂ ಸಂಪ್ರದಾಯ, ಸಂಸ್ಕೃತಿ ಹೆಸರಲ್ಲಿ ಕೆಂಡಕಾರುತ್ತಾರೆ ಅನ್ನುವುದು ಮತ್ತೂಮ್ಮೆ ಸಾಬೀತಾಗಿದೆ.
ಇದೆಲ್ಲ ಆರಂಭವಾಗಿದ್ದು, ಮಿಥಾಲಿ ರಾಜ್ ಟ್ವೀಟರ್‌ನಲ್ಲಿ ಸ್ನೇಹಿತೆಯರ ಜತೆಗಿರುವ ಫೋಟೋವನ್ನು ಅಪ್‌ಲೋಡ್ ಮಾಡಿದಾಗ. ಆ ಫೋಟೋದಲ್ಲಿ ಮಿಥಾಲಿ ಅಲ್ಪ ಸ್ವಲ್ಪ ಎದೆಯ ಭಾಗ ಕಾಣಿಸುವಂತಹ ಬಟ್ಟೆಯನ್ನು ತೊಟ್ಟಿದ್ದರು. ಇದನ್ನು ನೋಡಿದ ಅಭಿಮಾನಿಗಳು ಮಿಥಾಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೇನು ಈ ಘಟನೆ ಮರೆಯುತ್ತಾ ಬಂತು ಅನ್ನುವ ಸಮಯದಲ್ಲೇ ಮಿಥಾಲಿ ಬೋಲ್ಡ್ ಆಗಿ ಕಾಣಿಸುವಂತಹ ಫೋಟೋ ಶೂಟ್ ಮಾಡಿಸಿಕೊಂಡು ಮತ್ತೂಮ್ಮೆ ಟೀಕಾಕಾರರ ಬಾಯಿಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದು ಸೌಂಡ್ ಮಾಡುತ್ತಿದೆ.
ಗ್ಲಾಮರ್ ಲೂಕ್‌ಗೂ ಸೈ
ಟೆನಿಸ್ ಆಟಗಾರ್ತಿಯರು ಹೆಚ್ಚು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮರಿಯಾ ಶರಪೋವಾ ತನ್ನ ಆಟದ ಜತೆಗೆ ಸೌಂದರ್ಯದಿಂದಲೂ ಪ್ರಸಿದ್ಧಿಯಾದವರು. ಆಕೆಯ ಪಂದ್ಯವಿದ್ದಾಗ ಅಭಿಮಾನಿಗಳು ಆಕೆಯನ್ನು ನೋಡುವ ಉದ್ದೇಶದಿಂದಲೇ ಕ್ರೀಡಾಂಗಣಕ್ಕೆ ನುಗ್ಗುತ್ತಾರೆ. ಅದೇ ರೀತಿ ಭಾರತೀಯ ಕ್ರೀಡಾಪಟುಗಳ ವಿಷ್ಯಕ್ಕೆ ಬಂದರೆ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್, ಬ್ಯಾಟಿ¾ಂಟನ್ ಪ್ರತಿಭೆ ಜ್ವಾಲಾ ಗುಟ್ಟಾ…ಹೆಚ್ಚು ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಹೆಚ್ಚು ಹೆಚ್ಚು ಜಾಹೀರಾತುಗಳಲ್ಲಿ ಅವಕಾಶ ಸಿಕ್ಕಿದೆ ಅಂದ್ರೆ ಅದು ಕೇವಲ ಇವರ ಆಟದಿಂದ ಮಾತ್ರ ಅಲ್ಲ. ಅವರಲ್ಲಿರುವ ಗ್ಲಾಮರ್ ಲುಕ್ ಕೂಡ ಕಾರಣ ಅನ್ನುವುದನ್ನು ಅಲ್ಲಗೆಳೆಯಲಾಗದು.
ಬೋಲ್ಡ್ ಫೋಟೋ ಶೂಟ್ ತಪ್ಪಾ?
ಬಾಲಿವುಡ್, ಹಾಲಿವುಡ್ ಅಷ್ಟೇಕೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಟಿಯರು ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಅಲಿಯಾ ಭಟ್, ಶ್ರದ್ಧಾ ಕಪೂರ್ ಬಿಕಿನಿ ತೊಟ್ಟು ಮಾದಕವಾಗಿ ಫೋಟೋ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ಅವರನ್ನು ಸೌಂದರ್ಯದ ದೇವತೆಗಳು ಎಂದೇ ಕರೆದವರಿದ್ದಾರೆ. ಆದರೆ ಕ್ರೀಡಾಪಟುಗಳಾದ ಸಾನಿಯಾ ಮಿರ್ಜಾ, ಜ್ವಾಲಾ ಗುಟ್ಟಾ…ಸ್ವಲ್ಪ ಹಾಟ್ ಆಗಿ ಕಾಣಿಸಿಕೊಂಡಾಗ ಟೀಕಿಸಿದ್ದಾರೆ. ಇದೀಗ ಮಿಥಾಲಿ ರಾಜ್ ಸರದಿ ಅಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.