ಅಂಡರ್-19 ಏಶ್ಯ ಕಪ್ ಕ್ರಿಕೆಟ್: ಮಲೇಶ್ಯವನ್ನು ಮಣಿಸಿದ ಭಾರತ
Team Udayavani, Nov 11, 2017, 6:25 AM IST
ಕೌಲಾಲಂಪುರ: ಶುಕ್ರವಾರ ಮೊದಲ್ಗೊಂಡ ಅಂಡರ್-19 ಏಶ್ಯ ಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆತಿಥೇಯ ಮಲೇಶ್ಯವನ್ನು 202 ರನ್ನುಗಳಿಂದ ಭರ್ಜರಿಯಾಗಿ ಮಣಿಸಿದ ಭಾರತ ಶುಭಾರಂಭ ಮಾಡಿದೆ.
ಇಲ್ಲಿನ “ಕಿನ್ರಾರ ಅಕಾಡೆಮಿ ಓವಲ್’ನಲ್ಲಿ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 310 ರನ್ ಪೇರಿಸಿ ಸವಾಲೊಡ್ಡಿದರೆ, ಮಲೇಶ್ಯ 37.1 ಓವರ್ಗಳಲ್ಲಿ 108 ರನ್ನಿಗೆ ಆಲೌಟಾಯಿತು. ದಿನದ ಉಳಿದೆರಡು ಪಂದ್ಯಗಳಲ್ಲಿ ಅಫ್ಘಾನಿಸ್ಥಾನ ಪಾಕಿಸ್ಥಾನವನ್ನು 7 ವಿಕೆಟ್ಗಳಿಂದ, ಶ್ರೀಲಂಕಾ ಯುಎಇಯನ್ನು 7 ವಿಕೆಟ್ ಅಂತರದಿಂದ ಪರಾಭವಗೊಳಿಸಿತು. ಇವೆರಡೂ “ಬಿ’ ವಿಭಾಗದ ಪಂದ್ಯಗಳಾಗಿದ್ದವು.
ಹಿಮಾಂಶು ಆಕರ್ಷಕ ಶತಕ
ಆರಂಭಕಾರ, ನಾಯಕ ಹಿಮಾಂಶು ರಾಣ ಬಾರಿಸಿದ ಶತಕ ಭಾರತದ ಸರದಿಯ ಆಕರ್ಷಣೆಯಾಗಿತ್ತು. ರಾಣ 130 ಎಸೆತಗಳಿಗೆ ಜವಾಬಿತ್ತು 107 ರನ್ ಹೊಡೆದರು. ಇದರಲ್ಲಿ 12 ಬೌಂಡರಿ ಇತ್ತು. ಮತ್ತೂಬ್ಬ ಆರಂಭಕಾರ ಮನ್ಜೋತ್ ಕಾಲಾÅ 35 ರನ್ ಮಾಡಿದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 9 ಓವರ್ಗಳಿಂದ 62 ರನ್ ಒಟ್ಟುಗೂಡಿತು.
ವನ್ಡೌನ್ ಬ್ಯಾಟ್ಸ್ಮನ್ ರಿಯಾನ್ ಪರಾಗ್ 25 ರನ್ ಗಳಿಸಿದರೆ, 67 ರನ್ ಮಾಡಿದ ಮಧ್ಯಮ ಕ್ರಮಾಂಕದ ಸಲ್ಮಾನ್ ಖಾನ್ ದ್ವಿತೀಯ ಸರ್ವಾಧಿಕ ಸ್ಕೋರರ್ ಎನಿಸಿದರು (71 ಎಸೆತ, 6 ಬೌಂಡರಿ). ದರ್ಶನ್ ನಲ್ಕಂಡೆ 25 ರನ್ ಕೊಡುಗೆ ಸಲ್ಲಿಸಿದರು.
ದೊಡ್ಡ ಮೊತ್ತವನ್ನು ಕಂಡೇ ದಿಗಿಲುಗೊಂಡಂತೆ ಆಡಿದ ಮಲೇಶ್ಯ ಹಿಮಾಂಶು ರಾಣಾಗಿಂತ ಒಂದು ರನ್ ಜಾಸ್ತಿ ಮಾಡಿ ಸರ್ವಪತನ ಕಂಡಿತು. ಇದರಲ್ಲಿ ಆರಂಭಕಾರ, ನಾಯಕ ವೀರನ್ದೀಪ್ ಸಿಂಗ್ ಗಳಿಕೆಯೇ 52 ರನ್. ಇವರ ಜತೆಗಾರ ಸಯ್ಯದ್ ಅಜೀಜ್ 12 ರನ್ ಮಾಡಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಎರಡಂಕೆಯ ಮೊತ್ತ ದಾಖಲಿಸಲಿಲ್ಲ.
ಗಮನ ಸೆಳೆದ ಪಾಂಗಾಳ ಕ್ರಿಕೆಟಿಗ
ಭಾರತದ ಪರ ದರ್ಶನ್ ನಲ್ಕಂಡೆ 3 ವಿಕೆಟ್ ಉರುಳಿಸಿದರೆ, ವಿವೇಕಾನಂದ ತಿವಾರಿ ಮತ್ತು ಶಿವ ಸಿಂಗ್ ತಲಾ 2 ವಿಕೆಟ್ ಉರುಳಿಸಿದರು.
ಉಡುಪಿ ಜಿಲ್ಲೆಯ ಪಾಂಗಾಳ ಮೂಲದ, ಈಗ ಮುಂಬಯಿಯಲ್ಲಿ ನೆಲೆಸಿರುವ ಆಲ್ರೌಂಡರ್ ತನುಷ್ ಕೋಟ್ಯಾನ್ ಈ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿ ಗಮನ ಸೆಳೆಯುವ ಪ್ರದರ್ಶನ ನೀಡಿದರು. ತನುಷ್ಗೆ ಬ್ಯಾಟಿಂಗ್ ಅವಾಕಶ ಲಭಿಸಲಿಲ್ಲ, ಆದರೆ ಬೌಲಿಂಗ್ನಲ್ಲಿ 5.1 ಓವರ್ ಎಸೆದು, 2 ಮೇಡನ್ ಮಾಡಿ, ಕೇವಲ 4 ರನ್ ನೀಡಿ ಒಂದು ವಿಕೆಟ್ ಉರುಳಿಸಿದರು. ಮಲೇಶ್ಯದ ಅಂತಿಮ ಆಟಗಾರ ವಾನ್ ಅಮಿರುಲ್ ಜುಲ್ಕಮಿಯಾನ್ ಅವರ ವಿಕೆಟ್ ಹಾರಿಸುವ ಮೂಲಕ ತನುಷ್ ಭಾರತದ ಗೆಲುವನ್ನು ಸಾರಿದರು.
ಭಾರತ ತನ್ನ ಮುಂದಿನ ಪಂದ್ಯವನ್ನು ರವಿವಾರ ನೇಪಾಲ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-50 ಓವರ್ಗಳಲ್ಲಿ 7 ವಿಕೆಟಿಗೆ 310 (ರಾಣ 107, ಸಲ್ಮಾನ್ 67, ಮನ್ಜೋತ್ 35, ಪರಾಗ್ 25, ದರ್ಶನ್ 25, ಖೈರ್ 61ಕ್ಕೆ 3). ಮಲೇಶ್ಯ-37.1 ಓವರ್ಗಳಲ್ಲಿ 108 (ವೀರನ್ದೀಪ್ 52, ಅಜೀಜ್ 12, ನಲ್ಕಂಡೆ 43ಕ್ಕೆ 3, ತಿವಾರಿ 16ಕ್ಕೆ 2, ಶಿವ ಸಿಂಗ್ 16ಕ್ಕೆ 2, ತನುಷ್ 4ಕ್ಕೆ 1, ಅರ್ಶದೀಪ್ 22ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.