ನಟಿಯರ ಬಟ್ಟೆ ಹರಾಜಿಗೆ!
Team Udayavani, Nov 10, 2017, 6:42 PM IST
ನಟಿಯರು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಮತ್ತೆ ಧರಿಸಲು ಹಿಂದೆ ಮುಂದೆ ನೋಡುವುದು ಎಲ್ಲರಿಗೂ ಗೊತ್ತಿದೆ. ಅವರು ತೊಡುವ ಉಡುಗೆಗಳು ರಿಪೀಟ್ ಆಗಬಾರದು ಎಂಬ ಕಾರಣಕ್ಕೆ, ಅವರು ಹೊಸ ಹೊಸ ಉಡುಗೆ-ತೊಡುಗೆಗಳನ್ನು ಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ಅವರ ವಾರ್ಡ್‌ರೋಬ್ ಅಗತ್ಯಕ್ಕಿಂತ ಹೆಚ್ಚು ಬಟ್ಟೆಗಳಿಂದ ತುಂಬಿ ತುಳುಕುತ್ತಿರುತ್ತದೆ.
ಹೀಗೇ ಒಮ್ಮೆ ನಟಿ ಶೃತಿ ಹರಿಹರನ್ ತಮ್ಮ ವಾರ್ಡ್‌ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಅವರಿಗೊಂದು ಯೋಚನೆ ಹೊಳೆಯಿತು. ಇಷ್ಟೊಂದು ಡ್ರೆಸ್‌ಗಳನ್ನಿಟ್ಟುಕೊಂಡು ಏನು ಮಾಡುವುದು? ಹೆಚ್ಚು ಬಾರಿ ಧರಿಸದೇ ಇರುವ ಬಟ್ಟೆ ಹಾಗೂ ಫ್ಯಾನ್ಸಿ ವಸ್ತುಗಳನ್ನು ಸೇಲ್ ಮಾಡಬಹುದಲ್ಲ ಅನ್ನಿಸಿತು. ಆ ಯೋಚನೆಯನ್ನು ಇತರೆ ನಟಿಯರೊಂದಿಗೆ ಹಂಚಿಕೊಂಡರು.
ನಂತರ ಆ ಯೋಚನೆ “ದಿ ವ್ಯಾನಿಟಿ ಟ್ರಂಕ್ ಸೇಲ್’ನ ರೂಪ ಪಡೆಯಿತು. ಈ ಸೇಲ್‌ನಲ್ಲಿ ಶ್ರದ್ಧಾ ಶ್ರೀನಾಥ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್‍ನಾಡು, ಸೋನು ಗೌಡ, ಮಾನ್ವಿತಾ ಹರೀಶ್, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಭಾಗವಹಿಸುತ್ತಿದ್ದಾರೆ.
ಎಲ್ಲರೂ ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಸಿದ್ದು, ಅದರಿಂದ ಬರುವ ಹಣ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಎಂಬ ಎನ್.ಜಿ.ಓ.ಗಳಿಗೆ ಸಂದಾಯವಾಗುತ್ತದೆ. ಆ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸುವ ಸಣ್ಣ ಪ್ರಯತ್ನ ಈ ನಟಿಯರದ್ದು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುತ್ತಿರುವ ಸೇಲ್.
ಆಸಕ್ತರು ಮುಂಚಿತವಾಗಿ https://insider.in/the-vanity-trunk-sale-nov12-2017/event ನಲ್ಲಿ ತಮ್ಮ ಹೆಸರನ್ನು ನಮೂದಿಸಬೇಕು. ನವೆಂಬರ್ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‌ನಲ್ಲಿರುವ ಬಿ ಹೈವ್ ವರ್ಕ್‌ಶಾಪ್‌ನಲ್ಲಿ ಈ ಸೇಲ್ ನಡೆಯುತ್ತದೆ. ಅಲ್ಲಿರುವ ಫುಡ್‌ಸ್ಟಾಲ್‌ಗಳು ಕೂಡ ಮಹಿಳಾ ಉದ್ಯಮಿಗಳದ್ದೇ ಅಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.