ಟಿಪ್ಪು ಟೋಪಿ ಹಾಕಿಕೊಂಡವರಿಂದಲೇ ವಿರೋಧ: ಮಾಲೀಕಯ್ಯ
Team Udayavani, Nov 11, 2017, 10:37 AM IST
ಅಫಜಲಪುರ: ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಎಂದರೆ ಎಲ್ಲರಲ್ಲೂ ಅಭಿಮಾನ ಉಕ್ಕಿ ಬರುತ್ತದೆ. ಬಿಜೆಪಿಯ ಕೆಲ ನಾಯಕರು ಟಿಪ್ಪು ಟೋಪಿ ಹಾಕಿ ಜೈಕಾರ ಹಾಕಿದವರು ಇಂದು ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಹಸೀಲ್ ಕಛೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ 267 ಜಯಂತಿ
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ದೇಶ ಭಕ್ತ, ಪರಕೀಯರ ದಾಸ್ಯಕ್ಕೆ ಮಣಿಯದೆ
ವೀರಾವೇಶದಿಂದ ಹೋರಾಟ ಮಾಡಿ ರಣಾಂಗಣದಲ್ಲಿ ವೀರಮರಣ ಹೊಂದಿದ್ದಾರೆ. ಅಂಥವರ ವ್ಯಕ್ತಿತ್ವದ ಬಗ್ಗೆ ಕೀಳಾಗಿ ಮಾತನಾಡುವ ಕೆಲವರಿಗೆ ಯಾರೂ ಉತ್ತರಿಸಬೇಕಾಗಿಲ್ಲ. ಸತ್ಯ ಯಾವಾಗಲೂ ಸತ್ಯವಾಗಿ ಇರುತ್ತದೆ ಎಂದರು.
ಟಿಪ್ಪು ವಂಶಸ್ಥರು ಇಂದು ಕಲ್ಕತ್ತಾದಲ್ಲಿ ಆಟೋ ಚಾಲನೆ ಮಾಡುತ್ತ ಜೀವನ ನಡೆಸುತ್ತಿದ್ದಾರೆಂದು ಕೇಳಿ ಬಹಳ
ನೋವಾಗಿದೆ. ಅವರು ಕರ್ನಾಟಕಕ್ಕೆ ಬರಲು ಒಪ್ಪಿದರೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕರೆ ತರುವ ಕೆಲಸ
ಮಾಡುತ್ತೇನೆ ಎಂದರು.
ಸಾನ್ನಿಧ್ಯ ವಹಿಸಿದ್ದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಟಿಪ್ಪು ಸುಲ್ತಾನ್ ಮಾಡಿದ ಸಾಧನೆಗಳು
ಇತಿಹಾಸದಿಂದ ತಿಳಿದುಬರುತ್ತವೆ. ಆದರೆ ಆಚರಣೆ ಹೆಸರಿನಲ್ಲಿ ಕೋಮು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಬೇಡ ಎಂದು ಹೇಳಿದರು.
ತಹಶೀಲ್ದಾರ ಇಸ್ಮಾಯಿಲ್ ಮುಲ್ಕಿ ಟಿಪ್ಪು ಜಯಂತಿಯ ಶುಭಾಷಯ ಕೋರಿದರು. ಬಂಡಾಯ ಸಾಹಿತಿಗಳಾದ
ಸುಭಾಷ ನಾಯ್ಕೋಡಿ, ಮುನೀರ್ ಪಟೇಲ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡಡಗಿ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಸಲಾವುದ್ದಿನ್ ಪಾಶಾ, ಪಪ್ಪು ಪಟೇಲ್, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಸೋಹೇಲ್ ಪಟೇಲ್, ಬಿ.ವೈ. ಪಾಟೀಲ, ವಿಶ್ವನಾಥ ರೇವೂರ, ಶಿವಪುತ್ರಪ್ಪ ಕರೂರ, ರಾಜಶೇಖರ ಹಿರೇಮಠ, ಅಂಜು ಕುಲಕರ್ಣಿ, ಶಂಕರಲಿಂಗ ಮೇತ್ರಿ, ಮಲ್ಲಿನಾಥ ಪಾಟೀಲ, ಶಿವುಕುಮಾರ ನಾಟೀಕಾರ, ಮಳೇಪ್ಪ ಡಾಂಗೆ, ಎಂಐಎಂ ಅಧ್ಯಕ್ಷ ಮಂಜೂರ ಪಟೇಲ್ ಹಾಗೂ ಇತರರು ಇದ್ದರು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.