ನಾನು ಕುಂದಾಪುರದಿಂದ ಸ್ಪರ್ಧಿಸುವುದಿಲ್ಲ: ಉಪೇಂದ್ರ
Team Udayavani, Nov 11, 2017, 4:07 PM IST
ಬೆಂಗಳೂರು: ನಾನು ಕುಂದಾಪುರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎನ್ನುವುದು ಸುಳ್ಳುಸುದ್ದಿ ಎಂದು ನಟ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ಶನಿವಾರ ಸ್ಪಷ್ಪಪಡಿಸಿದ್ದಾರೆ.
ಪಕ್ಷದ ಆ್ಯಪ್,ವೆಬ್‌ಸೈಟ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರಅವರು ‘ನಮ್ಮ ಪಕ್ಷಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಯಾರೂ ಬೇಕಾದರೂ ಸಂಪರ್ಕಿಸಿ. ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ನಡೆಸುತ್ತೇವೆ’ಎಂದರು.
‘ಪಕ್ಷದ ಅಭ್ಯರ್ಥಿಯಾಗಲು ಆಯಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರಿವಿರಬೇಕು. ವಿದ್ಯಾರ್ಹತೆಯನ್ನು ನಾವು ಪರಿಗಣಿಸುವುದಿಲ್ಲ. ಅಭ್ಯರ್ಥಿಗಳಾಗುವವರು 1ತಿಂಗಳ ವರೆಗೆ ಅರ್ಜಿ ತುಂಬಿಸಿ ಕಳುಹಿಸಿ’ಎಂದರು.
‘ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥಿರಗಳು ಕಣಕ್ಕಿಳಿಯುತ್ತಾರೆ. ನಾನು ಎಲ್ಲಿಂದ ಸ್ಪರ್ಧಿಸುತ್ತೇನೆ ಎಂದು ಸದ್ಯದಲ್ಲೇ ತಿಳಿಸುತ್ತೇನೆ’ ಎಂದರು.
‘ಸಂವಿಧಾನಕ್ಕನುಗುಣವಾಗಿ ಅರ್ಜಿಯಲ್ಲಿ ಜಾತಿ ಕಾಲಂ ಇಟ್ಟಿದ್ದೇವೆ ಆದರೆ ನಮ್ಮ ಪಕ್ಷದಲ್ಲಿ ಜಾತಿ ವರ್ಗಕ್ಕೆ ಯಾವುದೇ ಸ್ಥಾನ ಇಲ್ಲ. ಎಲ್ಲರೂ ಯಾವುದೇ ಸ್ಥಾನಮಾನದ ಆಸೆ ಇಲ್ಲದೆ ನಾಡಿನ ಏಳಿಗೆಗಾಗಿ ಕೆಲಸಮಾಡುವುದು ಗುರಿ’ ಎಂದರು.
‘ಮೈಕೋ ನವೀನ್ ಮತ್ತು ಸ್ನೇಹಿತರು ಡಿಸೈನ್ ಮಾಡಿದ ಪಕ್ಷದ https://www.kpjpuppi.org ವೆಬಸೈಟನ್ನೂ ಬಿಡುಗಡೆ ಮಾಡಿದರು. ಇದರಲ್ಲಿ ಎಲ್ಲಾ ಮಾಹಿತಿ ಲಭ್ಯವಿದ್ದು, ಅಭ್ಯರ್ಥಿಗಳಾಗಬಯಸುವವರು ಅರ್ಜಿ ಯನ್ನು ಇಲ್ಲೆ ಸಲ್ಲಿಸಬೇಕು’.
ವೇದಿಕೆಯಲ್ಲಿ ಕುರ್ಚಿಗಳನ್ನು ಖಾಲಿ ಬಿಡಲಾಗಿದ್ದು ಇದು ಅಭ್ಯರ್ಥಿಗಳಿಗಾಗಿ ಖಾಲಿ ಬಿಡಲಾಗಿದೆ ಎಂದರು.
ಬಿಜೆಪಿಗರ ಆಕ್ರೋಶಕ್ಕೆ ಕಾರವಾದ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿಗರು ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದರು. ‘ಯಾರೋ ಮಾಡಿದ ವಿಡಿಯೋಗೆ ನನ್ನನ್ನು ಟೀಕಿಸಿದರು. ಅವರಿಗೆ ವಾಸ್ತವ ತಿಳಿಸಿದ್ದು, ಈಗ ಎಲ್ಲವೂ ಸರಿ ಹೋಗಿದೆ. ನಾನು ಯಾರನ್ನೂ ದೂಷಿಸುವುದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.