ಎಂಟು ವಲಯಗಳಲ್ಲಿಹೆಲಿಪ್ಯಾಡ್ ನಿರ್ಮಾಣ
Team Udayavani, Nov 12, 2017, 9:45 AM IST
ಬೆಂಗಳೂರು: ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರ ಅನುಕೂಲಕ್ಕಾಗಿ ಬಿಬಿಎಂಪಿಯ ಎಂಟೂ ವಲಯಗಳ ಪ್ರಮುಖ ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಿ ಸಲು ಬಿಬಿಎಂಪಿ ನಿರ್ಧರಿಸಿದ್ದು, ಈ ಕುರಿತು ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
ಮೇಯರ್ ಆರ್.ಸಂಪತ್‌ರಾಜ್ ಅವರು ಶನಿವಾರ ಪಾಲಿಕೆಯ ಮಾಜಿ ಮೇಯರ್‌ಗಳೊಂದಿಗೆ ಸಭೆ ನಡೆಸಿ, ನಗರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಯೋಜನೆಗಳ ಕುರಿತು ಸಲಹೆ ಪಡೆದಿದ್ದಾರೆ. ಈ ವೇಳೆ
ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಹೆಲಿಪ್ಯಾಡ್ ನಿರ್ಮಿಸುವುದು ಹಾಗೂ ಅವುಗಳಿಗೆ ಮಾಜಿ ಮೇಯರ್‌ಗಳ
ಹೆಸರಿಡಲು ತೀರ್ಮಾನಿಸಲಾಗಿದೆ.
ಹೆಲಿಪ್ಯಾಡ್ ನಿರ್ಮಾಣ ದಿಂದ ನಾಗರಿಕ ತುರ್ತು ಆರೋಗ್ಯ ಸೇವೆಯ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಹಾಗೂ ನಗರಕ್ಕೆ ಬರುವ ಗಣ್ಯರಿಗೆ ಸೇವೆ ಒದಗಿಸುವುದು ಇದರ ಉದ್ದೇಶವಾಗಿದೆ. ಆಡಳಿತವನ್ನು ಚುರುಕುಗೊಳಿಸಿ ನಿಗದಿತ
ಯೋಜನೆಯನ್ನು ಅವಧಿಯೊಳಗೆ ಮುಗಿಸಲು ಮುಂದಾಗಬೇಕು ಮತ್ತು ಹೆಚ್ಚು ಕ್ರಿಯಾಶೀಲರಾಗಿ ನಗರದ
ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಮಾಜಿ ಮೇಯರ್‌ಗಳು ಸಲಹೆ ನೀಡಿದ್ದಾರೆ. ಸಭೆಯಲ್ಲಿ ಮಾಜಿ
ಮೇಯರ್‌ಗಳಾದ ನಾರಾಯಣ ಸ್ವಾಮಿ, ಲಕ್ಕಣ್ಣ, ಕೆ.ಎಚ್.ಎನ್.ಸಿಂಹ, ರಾಮಚಂದ್ರಪ್ಪ ಹಾಗೂ ನಟರಾಜ್
ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.