ಅಮೆರಿಕದಲ್ಲಿ ಗುಂಡಿಟ್ಟು ಭಾರತೀಯ ಉದ್ಯಮಿ ಹತ್ಯೆ
Team Udayavani, Nov 13, 2017, 7:00 AM IST
ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಉತ್ತರ ಕ್ಯಾರೊಲಿನಾದಲ್ಲಿ ಈ ಘಟನೆ ನಡೆದಿದ್ದು, ಅಸುನೀಗಿದವರನ್ನು ಆಕಾಶ್ ಆರ್.ತಲಾಟಿ (40) ಎಂದು ಗುರುತಿಸಲಾಗಿದೆ. ಗುಂಡು ಹಾರಾಟದ ವೇಳೆ, ಇತರ ನಾಲ್ವರು ಗಾಯಗೊಂಡಿದ್ದಾರೆ. ಅವರು ಎರಡು ಕ್ಲಬ್‌ಗಳ ಮಾಲೀಕರಾಗಿದ್ದರು. ಏಕಾಏಕಿ ನುಗ್ಗಿದ ಅಪರಿಚಿತರು ಈ ಕೃತ್ಯವೆಸಗಿದ್ದಾರೆ. ಅಸುನೀಗಿದ ಉದ್ಯಮಿ ಗುಜರಾತ್‌ನ ಆನಂದ್‌ನವರಾಗಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಆಂಧ್ರಪ್ರದೇಶದ ಶ್ರೀನಿವಾಸ ಕುಚಿಭೋಟ್ಲ ಮತ್ತು ವೈದ್ಯ ಅಚ್ಯುತ ರೆಡ್ಡಿ ಅವರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು.