ಇನ್ನೊಂದು ತಿಂಗಳಲ್ಲಿ ಸಿಗಲಿದೆ ನ್ಯಾಯ: ಚಿಂಚನಸೂರ
Team Udayavani, Nov 13, 2017, 11:14 AM IST
ಚಿಂಚೋಳಿ: ಕೋಲಿ ಸಮಾಜದ ಕಬ್ಬಲಿಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕಾಗಿ ಹಂಪಿ ವಿಶ್ವವಿದ್ಯಾಲಯದಿಂದ ಒಂದು ವರದಿ ಸಿದ್ದ ಮಾಡಿಕೊಂಡು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ ಅವರಿಗೆ ಸಲ್ಲಿಸಲಾಗಿದೆ. ಅಲ್ಲದೇ ದೆಹಲಿಗೂ ಕಳುಹಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ನಮಗೆ ನ್ಯಾಯ ಸಿಗಲಿದೆ ಎಂದು ಮಾಜಿ ಸಚಿವ ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.
ತಾಲೂಕಿನ ರಾಣಾಪುರದಲ್ಲಿ ರವಿವಾರ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗುವ ಕಾಲ ಅತಿ ಸನ್ನಿತವಾಗಿದೆ ಎಂದು ಹೇಳಿದರು.
ಹಿಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ನಾನು ಮುಜರಾಯಿ ಖಾತೆ ಸಚಿವನಾಗಿದ್ದಾಗ ಕೋಲಿ ಸಮಾಜದ ದೇವಾಲಯಗಳ ಉದ್ಧಾರಕ್ಕಾಗಿ 33 ಕೋಟಿ ರೂ. ನೀಡಿ ಅಭಿವೃದ್ಧಿ ಮಾಡಿದ್ದೇನೆ. ನಾನು ಜನಿಸಿದ್ದು
ಸಮಾಜ ಉದ್ಧಾರಕ್ಕಾಗಿ. ನಾನು ಸಾಯುವುದು ಸಮಾಜಕ್ಕಾಗಿ. ನನಗೆ ಯಾರು ತಂದೆ- ತಾಯಿಗಳಿಲ್ಲ. ಸಮಾಜವೇ ನನಗೆ ಸಹೋದರರು, ಸಮಾಜವೇ ನನಗೆ ಬಂಧುಗಳು ಎಂದು ಹೇಳಿದರು.
ದೀಪವು ತನ್ನನ್ನು ತಾನು ಸುಟ್ಟುಕೊಂಡು ಸುತ್ತಮುತ್ತಲಿನ ಜನರಿಗೆ ಬೆಳಕು ಕೊಡುತ್ತದೆಯೋ ಹಾಗೇ ನಾನು, ನನ್ನ
ಧರ್ಮಪತ್ನಿ ಇತರರಿಗೆ ಬೆಳಕು ನೀಡಿ ಒಂದು ಇತಿಹಾಸ ನಿರ್ಮಿಸುತ್ತೇವೆ ಎಂದು ಹೇಳಿದರು.
ನನ್ನನ್ನು ಸೋಲಿಸುವವರು ಯಾರು ಇಲ್ಲ. ನನ್ನನ್ನು ಸಚಿವ ಸ್ಥಾನದಿಂದ ತೆಗೆದರೂ ಎದೆಗುಂದಲಿಲ್ಲ. ನಮ್ಮವರೇ ಮಂತ್ರಿ ಸ್ಥಾನದಿಂದ ತೆಗೆಯುವಂತೆ ಮಾಡಿದರು. ನನ್ನ ಆಸೆ 50 ಲಕ್ಷ ಜನಸಂಖ್ಯೆ ಹೊಂದಿದ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿದೆ. ಕೋಲಿ ಸಮಾಜ ಗಂಗೆಯ ಮಕ್ಕಳು. ಗಂಗೆ ಪವಿತ್ರಳು, ಗಂಗೆ ಎಲ್ಲರಿಗೂ ಬೇಕಾದವಳು. ಅಂಬಿಗರು ನಂಬಿಗಸ್ಥರು. ಹೊಳೆ ದಾಟಿಸುವವರು. ಯಾರನ್ನು ಮುಳುಗಿಸುವವರಲ್ಲ ಎಂದು ಹೇಳಿದರು.
ರಾಣಾಪುರದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣಕ್ಕಾಗಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ದಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ, ರಾಜಗೋಪಾಲರೆಡ್ಡಿ ಜಗನ್ನಾಥ ಜಮಾದಾರ, ಜಿಲ್ಲಾ ಕೋಲಿ
ಸಮಾಜದ ಅಧ್ಯಕ್ಷ ರವಿರಾಜ ಕೊರವಿ ಮಾತನಾಡಿದರು. ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ವಾಲ್ಮೀಕಿ ಮಹಾರಾಜ,
ದತ್ತಾತ್ರೇಯ ಶರಣರು, ಬಾಲತಪಸ್ವಿ ಶಂಕರಲಿಂಗ ಮಹಾರಾಜರು, ಸಿದ್ದ ಶಿವಯೋಗಿ ಶರಣರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅನೀಲ ಜಮಾದಾರ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ,
ಸುರೇಶ ಬಂಟಾ, ಈಶ್ವರ ಬ್ಯಾಕೆ, ದಿವಾಕರ ಜಾಹಗೀರದಾರ, ಅಮೃತರಾವ ರಾಣಾಪುರ ಇದ್ದರು. ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಆವಂಟಿ ಸ್ವಾಗತಿಸಿದರು. ನಾಗೇಂದ್ರ ತಳವಾರ ನಿರೂಪಿಸಿದರು. ರಾಮರಾವ ರಾಠೊಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.