ಕನಕನಿಗೆ ಅಪಚಾರ:ಹೋರಾಡುವವರ ಜತೆ ನಾನೂ ಭಾಗಿ


Team Udayavani, Nov 13, 2017, 11:37 AM IST

121117Astro08.jpg

ಉಡುಪಿ: ಪೂರ್ವಾಭಿಮುಖನಾಗಿದ್ದ ಶ್ರೀಕೃಷ್ಣ ಕನಕನ ಭಕ್ತಿ ನೋಡಿ ಪಶ್ಚಿಮಾಭಿಮುಖನಾಗಿರುವುದು ಸತ್ಯ. ಆದರೆ ಆ ಬಗ್ಗೆ ಕೆಲವರು ಅಪ ಚಾರ ಎಸಗು ತ್ತಾರೆ. ಅವರ ವಿರುದ್ಧ ಹೋರಾಟ ನಡೆಸು ವವರ ಜತೆಗೆ ನಾನು ಭಾಗಿ ಯಾಗಲು ಸಿದ್ಧನಿದ್ದೇನೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಹಾಲುಮತ ಮಹಾಸಭಾದ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಕೃಷ್ಣ ಮಠದ ಹೊರಗಿರುವ ಕಿಂಡಿಯ ಮೂಲಕ ಕನಕ ಶ್ರೀಕೃಷ್ಣನನ್ನು ನೋಡಿದರೆ, ಒಳ ಗಿರೋದು ಕೃಷ್ಣ ಕನಕನನ್ನು ನೋಡಿ ದರ್ಶನ ಮಾಡಿದ ಕಿಂಡಿ. ಕೃಷ್ಣ ಪಶ್ಚಿಮಕ್ಕೆ ತಿರುಗಿ ದ್ದಾನೆ ಎನ್ನುವುದಕ್ಕೆ ವಾದಿರಾಜರು ಮತ್ತು ವ್ಯಾಸರಾಜರು ಸಾಕ್ಷಿ. ಅವರ ಸ್ತೋತ್ರದಲ್ಲಿಯೂ ಇದರ ಉಲ್ಲೇಖವಿದೆ. ಮಠದ ಒಳಗಿರುವ ಕನಕ ಮೂರ್ತಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಶ್ರೀಕೃಷ್ಣ ಯಾವತ್ತಿಗೂ ಹಿಂದುಳಿದ ಭಕ್ತರ ಪರ ವಿರು ತ್ತಾನೆ ಎಂದರು.

ಏಕತೆ ಸಂದೇಶ ನೀಡಿದ ಕನಕದಾಸರು
ಕನಕರು ಬಸವಣ್ಣನಂತೆ ಕ್ರಾಂತಿಕಾರಿಯಾಗಿದ್ದರು. ಹಿಂದುಳಿದ ವರ್ಗದಲ್ಲಿ  ಅವತರಿಸಿದ ಕನಕ ದಾಸರು ಇಡೀ ರಾಜ್ಯಕ್ಕೆ ಏಕತಾ ಸಂದೇಶ ನೀಡಿ ದವರು. ಶ್ರೀಕೃಷ್ಣನನ್ನು ತಿರುಗಿಸುವ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಶ್ರೀಕೃಷ್ಣ ಪೂರ್ವ ದಿಂದ ಪಶ್ಚಿಮಕ್ಕೆ ತಿರುಗಿದ್ದಾನೆ. ಯುವಜನತೆ ಪಾಶ್ಚಾತ್ಯದಿಂದ ನಮ್ಮ ಸಂಸ್ಕೃತಿಯತ್ತ  ತಿರುಗಬೇಕು ಎಂದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತ ನಾಡಿ, ಯಾವ ಸಮುದಾಯ ತಿರಸ್ಕಾರಕ್ಕೆ ಒಳ ಗಾಗಿ ದೆಯೋ ಇಂದು ಜಾಗೃತವಾಗುತ್ತಿದೆ. ತುಳಿತ ಕ್ಕೊಳಗಾದವರು ದೂರವಾಗುತ್ತಾರೆ ಎಂಬುದನ್ನು ಎಲ್ಲರು ತಿಳಿಯಬೇಕು. ಹಾಲುಮತ ಬಹುದೊಡ್ಡ ಪರಂಪರೆ, ಇತಿಹಾಸ ಹೊಂದಿದೆ. ಆದರೆ ಅದು ಕೈಚೆಲ್ಲಿ ಹೋಗಿದೆ. ಸಮುದಾಯ ರಾಜಕೀಯ, ಸಾಮಾಜಿಕವಾಗಿ ಪ್ರಗತಿ ಕಾಣಬೇಕು. ಆಗ ಮಾತ್ರ ಜಾಗೃತಿಯಾಗಲು ಸಾಧ್ಯ ಎಂದು ಹೇಳಿದರು.

ಹಾಲುಮತ ಮಹಾಸಭಾ ನನ್ನನ್ನು ಉಡುಪಿಗೆ ಬರುವಂತೆ ಮಾಡಿದ್ದು, ಉಡುಪಿ-ಕಾಗಿನೆಲೆಗೆ ಸೇತುವೆಯಾಗಿದೆ. ಪೇಜಾವರ ಶ್ರೀಗಳು ಕನಕನ ವಿಚಾರದ ಕುರಿತಂತೆ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಾರೆ ಎಂದರು.

ಬುದ್ಧಿಜೀವಿಗಳಿಂದ ಅಪಚಾರ
ಕೆಲವು ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಕನಕನಭಕ್ತಿಗೆ ಕೃಷ್ಣ ತಿರುಗಿ ನಿಂತಿಲ್ಲ ಎನ್ನುತ್ತಾರೆ. ಆದರೆ ಕನಕನ ಕಿಂಡಿ ಕನಕನ ಪವಾಡ ಇದೆಲ್ಲ ಇತಿಹಾಸ. ಯಾರೂ ಇದನ್ನು ಬದಲಿಸಲು ಸಾಧ್ಯವಿಲ್ಲ. ಕನಕನ ಕಿಂಡಿಯಿಂದ ಉಡುಪಿಗೂ ಕೀರ್ತಿ ಬಂದಿದೆ ಎಂದು ಕಾಗಿನೆಲೆ ಸ್ವಾಮೀಜಿ ಹೇಳಿದರು.

ಶ್ರೀ ಪೇಜಾವರ ಮಠದ ಕಿರಿಯ ಯತಿ, ಸುವರ್ಣಮುಖೀ ಸಂಸ್ಕೃತಧಾಮದ ಸಂಸ್ಥಾಪಕ ಆಚಾರ್ಯ ಡಾ| ಅಮೆರಿಕ ನಾಗರಾಜ್‌, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮೈಸೂರು ಶಾಸಕ ಎಂ.ಕೆ.  ಸೋಮಶೇಖರ, ವಿಶ್ವನಾಥ್‌, ರಾಜಶೇಖರ ಇಟ್ನಾಳ, ಗಾಜಿಗೌಡ್ರು, ಡಾ| ನಾಗಾಲಕ್ಷ್ಮೀ, ಪಳನಿಸ್ವಾಮಿ, ಪುಷೋತ್ತಮ ಮರಿಗೌಡ, ರಾಮಪ್ಪ, ಆರ್‌. ಶಂಕರ್‌ ಉಪಸ್ಥಿತರಿದ್ದರು. ಮಾಲೇಗೌಡ ಪ್ರಸ್ತಾವನೆಗೈದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು.

ಕನಕ-ಉಡುಪಿಗೆ ಅವಿನಾಭಾವ ಸಂಬಂಧವಿದೆ. ಕಾಗಿನೆಲೆ ಮಠದ ಶಾಖೆಯನ್ನು ಉಡುಪಿಯಲ್ಲಿ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈ ವಿಚಾರದ ಕುರಿತಾಗಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸುತ್ತೇನೆ. 50 ವರ್ಷದ ಹಿಂದಿನ ಕನಕ ಗುಡಿಯ ಪುನರ್‌ ನಿರ್ಮಾಣಕ್ಕೂ ಅನುದಾನ ತರಲು ಪ್ರಯತ್ನಿಸುತ್ತೇನೆ.
– ಪ್ರಮೋದ್‌ ಮಧ್ವರಾಜ್‌
ಜಿಲ್ಲಾ  ಉಸ್ತುವಾರಿ ಸಚಿವ

ನಿಮ್ಮದು ಗಂಗಾಮತ-ನಮ್ಮದು ಹಾಲುಮತ
ಹಾಲುಮತ ಸಮುದಾಯದ ವತಿಯಿಂದ ಕಾಗಿನೆಲೆ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಸಮ್ಮಾನಿಸಿ, ನಿಮ್ಮದು ಗಂಗಾಮತ ನಮ್ಮದು ಹಾಲುಮತ. ಯಾವುದೇ ಪ್ರಾಣಿಯೂ ಜನ್ಮತಾಳಿದ ಕೂಡಲೇ ಬೇಕಾ ಗಿರುವುದು ಹಾಲು. ಅದು ಬೆಳೆಯುವಾಗ ಬೇಕಾಗಿರುವುದು ನೀರು. ಹೀಗಾಗಿ ಹಾಲುಮತ-ಗಂಗಾಮತ ಕೂಡಿ ಜಗತ್ತು ಆಳಬಹುದು ಎಂದರು.

 ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನ ಪಡೆದರು. ಆದರೆ ಶ್ರೀಕೃಷ್ಣ ಮಠದೊಳಗೆ ಪ್ರವೇಶಿಸಲಿಲ್ಲ. ಸಾವಿರಾರು ಪೂರ್ಣಕುಂಭ, ಚೆಂಡೆ, ಸ್ತಬ್ಧಚಿತ್ರಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ನಗರದ ಜೋಡುಕಟ್ಟೆಯಿಂದ ಸರ್ವಿಸ್‌ ಬಸ್‌ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಮೂಲಕ ರಥಬೀದಿಗೆ ಆಗಮಿಸಿ ದರು. ಮಠದ ದಿವಾನ ರಘುರಾಮಾಚಾರ್ಯ ಹೂ ಮಾಲೆ ಹಾಕಿ ಸ್ವಾಗತಿಸಿದರು. 

 ಪೇಜಾವರ ಶ್ರೀಗಳಿಗೆ ಆಹ್ವಾನ
ಪರ್ಯಾಯ ಪೇಜಾವರ ಶ್ರೀಗಳಿಗೆ ಕಾಗಿನೆಲೆ ಶ್ರೀಗಳು ಕರಿಯ ಕಂಬಳಿಯನ್ನು ಹಾಕಿ ಗೌರವಿಸಿ, ಆರೋಗ್ಯಯುತವಾಗಿರುವಂತೆ ಹಾರೈಸಿದರು. 2018 ಫೆಬ್ರವರಿಯಲ್ಲಿ ನಡೆಯುವ ಕಾಗಿನೆಲೆ ಗುರುಪೀಠದ ರಜತಮಹೋತ್ಸವಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನ ನೀಡಿದರು. ಕರಿಯ ಕಂಬಳಿ ನಮ್ಮ ಸಂಸ್ಕೃತಿಯ ಪ್ರತೀಕ. ಕನಕದಾಸರು ಕರಿಯ ಕಂಬಳಿ ಹೊದ್ದು  ಭಕ್ತಿ ಸಾಗರವನ್ನೇ ಹರಿಸಿದ್ದಾರೆ ಎಂದರು.

ಟಾಪ್ ನ್ಯೂಸ್

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.