ಸಮಾಪ್ತಿಗೊಂಡ ಶ್ರೀನಿವಾಸ ಮಂಗಳೋತ್ಸವ


Team Udayavani, Nov 13, 2017, 5:03 PM IST

12-Mum03b.jpg

ಮುಂಬಯಿ: ಶ್ರೀ  ಸಾಯಿಧಾಮ ಮಂದಿರ ಟ್ರಸ್ಟ್‌ ವಿರಾರ್‌ ಇವರು ಆಯೋಜಿಸಿದ ಐದನೇ ವಾರ್ಷಿಕ ಶ್ರೀನಿವಾಸ ಮಂಗಳೋತ್ಸವ ನ. 11ರಂದು ನಲಸೋಪರ ಪಶ್ಚಿಮದ ಶ್ರೀಪ್ರಸ್ಥ ಮೈದಾನದಲ್ಲಿ ವೈಭವೋಪೇತವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಲಕ್ಷಾಂತರ ಭಕ್ತರ ಜಯಘೋಷ ದೊಂದಿಗೆ ತಿರುಮಲ ತಿರುಪತಿ ದೇವಸ್ಥಾನ ಇದರ ಪೌರೋಹಿತ್ಯದಲ್ಲಿ ಸಮಾಜ ಸೇವಕ ವಿರಾರ್‌ ಶಂಕರ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿ ಜರಗಿದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಅದ್ದೂರಿಯಿಂದ ಜರಗಿದವು. ಶ್ರೀನಿವಾಸ ಮಂಗಳ್ಳೋತ್ಸವ ಕಾರ್ಯಕ್ರಮಕ್ಕೆ ಮೊದಲು ತಿರುಪತಿ ಯಿಂದ ತಂದ ಶ್ರೀನಿವಾಸ ಮತ್ತು ಶ್ರೀ ದೇವಿ-ಭೂದೇವಿಯ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಿದರು. ತಿರುಪತಿ ದೇವಸ್ಥಾನದ ವಿಶ್ವಸ್ತರಾದ ಐಎಎಸ್‌ ಅಧಿಕಾರಿ ಶ್ರೀನಿವಾಸ ರಾಜ್‌ ಹಾಗೂ ತಿರುಪತಿಯ ಪುರೋಹಿತ ವೃಂದದವರು  ವೇದ ಘೋಷ ಮೆರವಣಿಗೆಯೊಂದಿಗೆ ಮಂಗಳ್ಳೋತ್ಸವ ನೆರವೇರಿಸಿದರು.

ವಿದ್ವಾನ್‌ ಆನಂದತೀರ್ಥರ ನೇತೃತ್ವದಲ್ಲಿ ವಿದ್ವಾನ್‌ ಪ್ರಹ್ಲಾದ ಆಚಾರ್ಯ ನಾಗರಹಳ್ಳಿ, ವಿದ್ವಾನ್‌ ಗೋಪಾಲ್‌ ಆಚಾರ್ಯ ಉಪಸ್ಥಿತಿಯಲ್ಲಿ ವಿವಿಧ ಪೂಜೆ ಗಳು ನಡೆದವು. ಪುರೋಹಿತ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಸ್ವಸ್ತಿ ಪುಣ್ಯಾಹವಾಚನ, ವಾಸ್ತುರಕ್ಷ, ಮಹಾಗಣಪತಿ ಹೋಮವು ನೆರವೇರಿತು.
ಮಂಗಳ್ಳೋತ್ಸವ ನೇತೃತ್ವದ ವಹಿಸಿದ ಭಾಯಿ ಠಾಕೂರ್‌ ಅವರು ಆಗಮಿಸಿ ಶ್ರೀದೇವರ ದರ್ಶದ ಪಡೆದರು. ಅಲ್ಲದೆ ರಾಜಕೀಯ ನೇತಾರರಾದ ಸಂಜಯ್‌ ರಾವುತ್‌, ಸಂಸದ ಗೋಪಾಲ್‌ ಶೆಟ್ಟಿ, ರಾಜನ್‌ ವಿಚಾರೆ, ಮನೀಷಾ ತಾಯಿ, ನರೇಂದ್ರ ಮೆಹ್ತಾ, ಪ್ರಕಾಶ್‌ ಸುರ್ವೇ, ಅರವಿಂದ ಎ. ಶೆಟ್ಟಿ, ಉಮೇಶ್‌ ನಾೖಕ್‌, ಬಿಎಸ್‌ಕೆಬಿ ಅಸೋಸಿಯೇಶನ್‌ ಅಧ್ಯಕ್ಷ ಡಾ| ಸುರೇಶ್‌ ರಾವ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸಾಯಿಧಾಮ ಟ್ರಸ್ಟ್‌ ವತಿಯಿಂದ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.

ಮಂಗಳ್ಳೋತ್ಸವದ ಪ್ರಾರಂಭದಲ್ಲಿ ಶ್ರೀ ದೇವರ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ಶ್ರೀಪ್ರಸ್ಥ ಮೈದಾನದ ಭವ್ಯ ವೇದಿಕೆಗೆ ತರಲಾಯಿತು. ಮಹಿಳೆಯರು ಕಲಶ ದೊಂದಿಗೆ,  ಮಹಾರಾಷ್ಟ್ರ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿ ಸುವ ಅನೇಕ ಸ್ತಬ§ಚಿತ್ರಗಳು ಹಾಗೂ ಮಹಾರಾಷ್ಟ್ರದ ಡೋಲು, ಕೇರಳದ ಚೆಂಡೆ, ತುಳುನಾಡಿನ ಹುಲಿವೇಷ, ಭಜನೆ ಹಾಗೂ ಸಾಂಸ್ಕೃತಿಕ ಉಡುಗೆ ತೊಡುಗೆಯ ಮೂಲಕ ವಿವಿಧ ಪ್ರದೇಶಗಳ ಭಕ್ತಾದಿಗಳು  ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದರು.
ಮೀರಾರೋಡ್‌ನಿಂದ ಡಹಾಣೂ ವಿನವರೆಗಿನ ವಿವಿಧ ಸಂಘ-ಸಂಸ್ಥೆಗಳು, ಪದಾಧಿಕಾರಿಗಳು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬೇತಾಳ ನೃತ್ಯ, ನಾದಸ್ವರ ವಾದನ, ಜಂಬೋ ಸವಾರಿ, ಡೋಲು ಕುಣಿತ, ಯಕ್ಷಗಾನ ಪ್ರಾತ್ಯಕ್ಷಿಕೆ ವಿವಿಧ ಜಾನಪದ ನೃತ್ಯಗಳು ಶೋಭಾಯಾತ್ರೆಯಲ್ಲಿ ಭಕ್ತಾದಿಗಳನ್ನು ರಂಜಿಸಿತು. ರಸ್ತೆಯ ಎರಡೂ ಬದಿಯಲ್ಲೂ ಭಕ್ತಾದಿಗಳು ಹಾಗೂ ಮಹಿಳೆಯರು ನಿಂತು ಪುಷ್ಪವೃಷ್ಟಿಗೈದು ಶೋಭಾಯಾತ್ರೆಯನ್ನು ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ತಂದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಮಂಗಳ್ಳೋತ್ಸವ ಕಾರ್ಯಗಳು ಆರಂಭಗೊಂಡಿತು. ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ಶ್ರೀನಿವಾಸ ಮಂಗಲೋತ್ಸವವನ್ನು ಕಣ್ತುಂಬಿಕೊಂಡರು. ಕೊನೆಯಲ್ಲಿ ಲಡ್ಡು ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. 

ಚಿತ್ರ-ವರದಿ: ಸುಭಾಷ್‌ ಶಿರಿಯಾ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.