ಪೇಸ್-ರಾಜ ಜೋಡಿಗೆ ಮೊದಲ ಪ್ರಶಸ್ತಿ
Team Udayavani, Nov 14, 2017, 6:40 AM IST
ಹೊಸದಿಲ್ಲಿ: ಭಾರತದ ಲಿಯಾಂಡರ್ ಪೇಸ್-ಪುರವ್ ರಾಜ ಜತೆಗೂಡಿ ಮೊದಲ ಟೆನಿಸ್ ಪ್ರಶಸ್ತಿ ಜಯಿಸಿದ್ದಾರೆ. 75,000 ಡಾಲರ್ ಮೊತ್ತದ ನೋಕ್ಸ್‌ವಿಲ್ಲೆ ಹಾರ್ಡ್‌ಕೋರ್ಟ್ ಟೆನಿಸ್ ಟೂರ್ನಿಯಲ್ಲಿ ಇವರು ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಅಗ್ರ ಶ್ರೇಯಾಂಕದ ಭಾರತೀಯ ಟೆನಿಸಿಗರು ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ನಲ್ಲಿ ಜೇಮ್ಸ್ ಸೆರಾಟನಿ (ಅಮೆರಿಕ)-ಜಾನ್ ಪ್ಯಾಟ್ರಿಕ್ ಸ್ಮಿತ್ (ಆಸ್ಟ್ರೇಲಿಯ) ವಿರುದ್ಧ 7-6 (4), 7-6 (4) ಅಂತರದ ಗೆಲುವು ದಾಖಲಿಸಿದರು.
ಪೇಸ್-ರಾಜ ಕಳೆದ ಆಗಸ್ಟ್‌ನಲ್ಲಿ ನಡೆದ ಎಟಿಪಿ 250 ವಿನ್‌ಸ್ಟನ್-ಸಲೇಮ್ ಓಪನ್ ಪಂದ್ಯಾವಳಿ ಮೂಲಕ ಜತೆಗೂಡಿ ಆಡಲಾರಂಭಿಸಿದ್ದರು. ಇವರಿಬ್ಬರು ಸೇರಿ ಆಡಿದ ಮೊದಲ ಫೈನಲ್ ಇದೆಂಬುದು ವಿಶೇಷ. ಈ ಗೆಲುವಿನ ಮೂಲಕ ಲಿಯಾಂಡರ್ ಪೇಸ್ ಪ್ರಸಕ್ತ ಋತುವಿನ 4ನೇ ಚಾಲೆಂಜರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪೇಸ್ ಜತೆಗೂಡಿ ಆಡುವ ಮುನ್ನ ಪುರವ್ ರಾಜ ಬೋಡೋì ಚಾಲೆಂಜರ್ ಪ್ರಶಸ್ತಿಯನ್ನು ದಿವಿಜ್ ಶರಣ್ ಜತೆಗೂಡಿ ಜಯಿಸಿದ್ದರು.
ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಸೇರಿದಂತೆ ಈ ಮೂರೂವರೆ ತಿಂಗಳ ಅವಧಿಯಲ್ಲಿ ಪೇಸ್-ರಾಜ ಜತೆಗೂಡಿ ಆಡಿದ 8ನೇ ಪಂದ್ಯಾವಳಿ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.