ಪೊಳಲಿಯಲ್ಲಿ ಭರದಿಂದ ಸಾಗಿದೆ ಶಿಲಾಮಯ ದೇಗುಲ
Team Udayavani, Nov 14, 2017, 9:31 AM IST
ಮಂಗಳೂರು: ಅತ್ಯಂತ ಪುರಾತನ ಹಾಗೂ ಅತೀ ಅಪರೂಪದ, ಅತೀ ದೊಡ್ಡ ಮೃಣ್ಮಯ (ಮಣ್ಣಿನ) ಮೂರ್ತಿ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಪೂರ್ಣ ಶಿಲಾಮಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯ ಲಿದ್ದು, ಬ್ರಹ್ಮಕಲಶದ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ, ಫಲ್ಗುಣಿ ನದಿ ತಟದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿ ಸುಮಾರು 1700 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗಿದೆ. ರಾಜ್ಯ ಕಳೆದುಕೊಂಡ ಸುರತ ಮಹಾರಾಜನು ಸುಮೇಧ ಮುನಿಯ ಅನುಗ್ರಹದಿಂದ ತಪಸ್ಸಾನ್ನಾಚರಿಸಿ ದೇವಿಯ ದರುಶನ ಪಡೆದು ಈ ಕ್ಷೇತ್ರ ನಿರ್ಮಿಸಿದ ಎಂದು ಪುರಾಣ ಹೇಳುತ್ತದೆ.
9 ಅಡಿ ಎತ್ತರದ ಶ್ರೀ ರಾಜರಾಜೇಶ್ವರಿ ವಿಗ್ರಹ ದೇಗುಲದ ಪ್ರಮುಖ ಆಕರ್ಷಣೆ. ಅಕ್ಕಪಕ್ಕದಲ್ಲಿ ಮಹಾಗಣಪತಿ- ಬ್ರಹ್ಮಣ್ಯ, ಭದ್ರಕಾಳಿ ಮೊದಲಾದ ಮೂರ್ತಿಗಳಿವೆ. ಹೊರಾಂಗಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಗುಡಿ, ಈಶಾನ್ಯ ದಿಕ್ಕಿನಲ್ಲಿ ಕ್ಷೇತ್ರಪಾಲನ ಗುಡಿ, ಮತ್ತೂಂದೆಡೆ ಕೊಡಮಣಿತ್ತಾಯಿ ದೈವದ ಗುಡಿ ಇದೆ. ಇಷ್ಟಾರ್ಥ ಸಿದ್ಧಿದಾಯಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಪೊಳಲಿ ದೇವಾಲಯ ಶಿಥಿಲಗೊಂಡ ಹಿನ್ನೆಲೆಯಲ್ಲಿ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಪ್ರಸ್ತುತ ಜೀಣೊìàದ್ಧಾರ ಕಾರ್ಯಗಳು ಭರದಿಂದ ಸಾಗಿದೆ.
ಮಣ್ಣಿನಿಂದಲೇ ನಿರ್ಮಾಣವಾಗಿದ್ದ ದೇಗುಲ
ಪ್ರಾಚೀನ ಕಾಲದಲ್ಲಿ ದೇಗುಲದ ದೇವರ ಮೂರ್ತಿ ಸೇರಿದಂತೆ ಇಡೀ ದೇಗುಲ ನಿರ್ಮಾಣ ಮಣ್ಣಿನಿಂದಲೇ ನಡೆದಿರುವುದು ಇಲ್ಲಿನ ವಿಶೇಷ. ಜೀರ್ಣೋದ್ಧಾರಕ್ಕಾಗಿ ದೇಗುಲ ತೆರವು ಸಂದರ್ಭ ಒಂದೇ ಒಂದು ಕಲ್ಲು ಕೂಡ ಕಂಡುಬಂದಿರಲಿಲ್ಲ. ಮಣ್ಣಿನ
ಇಟ್ಟಿಗೆಗಳಿಂದಲೇ ನಿರ್ಮಿಸ ಲಾಗಿತ್ತು. ಅವುಗಳು ಎಷ್ಟು ಗಟ್ಟಿಯಾಗಿದ್ದವು ಎಂದರೆ, ಗೆùಂಡಿಗ್ ಮೆಷಿನ್‌ನ ಸಹಾಯದಿಂದಲೇ ಅವುಗಳನ್ನು ತೆಗೆಯಲಾಗಿತ್ತು. ಗರ್ಭಗುಡಿಯ ಗೋಡೆಗಳಲ್ಲೇ ಮೃಣ್ಮಯ ಮೂರ್ತಿಗಳಿರುವುದರಿಂದ ಅವುಗಳನ್ನು ಹಾಗೇ ಬಿಡಲಾಗಿದೆ. ಇದರ ಹೊರಗಿನಿಂದ ಶಿಲಾಮಯ ಗುಡಿ ನಿರ್ಮಿಸಲಾಗುತ್ತಿದೆ. ಜತೆಗೆ ತಾಮ್ರದ ಹೊದಿಕೆಯ ಮೇಲ್ಛಾವಣಿ ನಿರ್ಮಿಸಲಾಗುತ್ತದೆ.
ಶಿಲಾಶಾಸನ ಪತ್ತೆ.!
ಜೀಣೊìàದ್ಧಾರಕ್ಕಾಗಿ ತೆರವು ಮಾಡುವ ಸಂದರ್ಭ ಶಿಲಾಶಾಸನವೊಂದು ದೊರಕಿದ್ದು, ದೇವಸ್ಥಾನದ ಇತಿಹಾಸ ತಿಳಿಯಲು ಹೊಸ ಅವಕಾಶ ಸೃಷ್ಟಿಸಿದೆ. ಹಳೆಗನ್ನಡದಲ್ಲಿರುವ ಈ ಶಾಸನದ ಪ್ರಕಾರ ಕ್ಷೇತ್ರಕ್ಕೆ 1700 ವರ್ಷಗಳ ಇತಿಹಾಸವಿದೆ ಎಂದ ಇತಿಹಾಸ ತಜ್ಞರು ಅಭಿಪ್ರಾಯಿಸಿದ್ದಾರೆ. ಜತೆಗೆ ಕ್ಷೇತ್ರದ ಬಲಿಕಲ್ಲು ಕೂಡ ಅತ್ಯಂತ ಪುರಾತನವಾಗಿದ್ದು, ಇಲ್ಲಿನ ಇತಿಹಾಸವನ್ನು ಹೇಳುತ್ತದೆ ಎಂದು ಕ್ಷೇತ್ರದ ಪ್ರಮುಖರು ಅಭಿಪ್ರಾಯಿಸುತ್ತಾರೆ.
20 ಕೋ.ರೂ.ಗಳ ಕಾರ್ಯ
ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಸುಮಾರು 20 ಕೋ.ರೂ.ಗಳ ಯೋಜನೆ ಹಾಕಿಕೊಳ್ಳಲಾಗಿದೆ. ಗರ್ಭಗುಡಿಗೆ ಅಂದಾಜು 4.5 ಕೋ.ರೂ. ವೆಚ್ಚವಾಗಲಿದೆ. ಒಳಾಂಗಣ ಸುತ್ತುಪೌಳಿಗೆ 5.5 ಕೋ.ರೂ., ದುರ್ಗಾಪರಮೇಶ್ವರಿ ಗುಡಿಗೆ ಒಂದು ಕೋಟಿ ರೂಪಾಯಿಯ ನೂತನ ಧ್ವಜಸ್ತಂಭಕ್ಕೆ 70 ಲಕ್ಷ ರೂ. ಸೇರಿದಂತೆ ಕ್ಷೇತ್ರಪಾಲ ಸನ್ನಿಧಿ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಅನುವಂಶಿಕ ಮೊಕ್ತೇಸರರು
ಸಾವಿರ ಸೀಮೆಯ ಪೊಳಲಿ ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇಗುಲ ಇಲ್ಲ. 4 ಮನೆಗಳ ಪ್ರಮುಖರು ಅನುವಂಶಿಕ ಮೊಕ್ತೇಸರರಾಗಿ ಆಡಳಿತದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಜೀಣೊìàದ್ಧಾರ ಕಾರ್ಯಗಳಿಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷರಾಗಿ ಹಾಗೂ ಅನುವಂಶಿಕ ಮೊಕ್ತೇಸರರಲ್ಲೋರ್ವರಾದ ಉಳಿಪ್ಪಾಡಿಗುತ್ತು ತಾರಾನಾಥ ಆಳ್ವ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದರ ಜತೆಗೆ ವಿವಿಧ ಉಪಸಮಿತಿಗಳು ಕೂಡ ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ. ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕಾಮಗಾರಿ ಭರದಿಂದ ಸಾಗಿದೆ
ದೇವಸ್ಥಾನದ ಬ್ರಹ್ಮಕಲಶ ಹಾಗೂ ಜಾತ್ರೆಯ ಕುರಿತು ಜನವರಿಯಲ್ಲಿ ಪರಿಶೀಲನೆ ನಡೆಸಿ ಚಿಂತನೆ ನಡೆಸಲು ತಿಳಿದುಬಂದಿದೆ. ಶ್ರೀ ದುರ್ಗಾಪರಮೇಶ್ವರಿ ಗುಡಿಯ ಮೇಲ್ಛಾವಣಿಗೆ ತಾಮ್ರ ಮುಚ್ಚುವ ಕಾರ್ಯ ಮುಗಿದಿದೆ. ಶ್ರೀ ರಾಜರಾಜೇಶ್ವರಿ ಗುಡಿಯ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.
ಉಳಿಪ್ಪಾಡಿಗುತ್ತು ತಾರಾನಾಥ ಆಳ್ವ ಪ್ರಧಾನ ಕಾರ್ಯದರ್ಶಿ, ಜೀರ್ಣೋದ್ಧಾರ ಸಮಿತಿ.
ಪ್ರತಿ 15 ದಿನಗಳಿಗೊಮ್ಮೆ ಸಭೆ
ನಿಗದಿತ ಸಮಯಗಳಲ್ಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಶೀಘ್ರ ಬ್ರಹ್ಮಕಲಶ ನಡೆಸಲು ಪ್ರಯತ್ನಿಸುವುದು. ನ. 8ರಂದು ನಡೆದ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ.
ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ ಅನುವಂಶಿಕ ಮೊಕ್ತೇಸರರು.
ಕಿರಣ್ ಸರಪಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!
Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.