ಯೋಗಕ್ಕೆ ಬಾಗಿದ ಸೌದಿ ಅರೇಬಿಯಾ !;ಕ್ರೀಡಾ ಮಾನ್ಯತೆ
Team Udayavani, Nov 14, 2017, 3:44 PM IST
ರಿಯಾದ್: ಸೌದಿ ಅರೇಬಿಯಾ ಯೋಗಕ್ಕೆ ಸಂಪೂರ್ಣ ಮಾನ್ಯತೆ ನೀಡಿದ್ದು ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ.
ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಖ್ಯಾತಿಗೆ ಸೌದಿ ಅರೇಬಿಯಾ ಪಾತ್ರವಾಗಿದೆ.
ಈ ಹಿಂದೆ ಜೂನ್ 21 ರಂದು ನಡೆಸಲಾಗುವ ವಿಶ್ವ ಯೋಗದಿನದ ಸಹಭಾಗಿತ್ವವನ್ನು ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ ಈಗ ಕೈಗೊಂಡಿರುವ ನಿರ್ಧಾರ ಐತಿಹಾಸಿಕವಾಗಿದ್ದು , ಬದಲಾವಣೆಯ ಸೂಚನೆ ಎನ್ನಲಾಗಿದೆ.
ಇತ್ತೀಚೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ನಾಝ್ ವಿರುದ್ದ ಫತ್ವಾ ಹೊರಡಿಸಿ ಆಕೆಯ ನಿವಾಸದ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ನಾಝ್ ಬೆಂಬಲಕ್ಕೆ ಬಂದಿದ್ದ ಬಾಬಾ ರಾಮ್‌ದೇವ್ ಅವರು ಯೋಗವನ್ನು ಧರ್ಮದ ಹೆಸರಿನಲ್ಲಿ ನೋಡಬೇಡಿ , ಸೌದಿ ಅರೇಬಿಯಾದಲ್ಲೂ ಯೋಗಕ್ಕೆ ಮಾನ್ಯತೆ ಇದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.