ಹಾರರ್, ಥ್ರಿಲ್ಲರ್‌ನತ್ತ ಮಾಲಾಶ್ರೀ!
Team Udayavani, Nov 14, 2017, 6:44 PM IST
ಮಾಲಾಶ್ರೀ ನಟಿಸಿರುವ “ಉಪ್ಪು ಹುಳಿ ಖಾರ’ ಚಿತ್ರ ನವೆಂಬರ್ 24 ರಂದು ಬಿಡುಗಡೆಯಾಗುತ್ತಿದೆ. ಈ ನಡುವೆಯೇ ಮಾಲಾಶ್ರೀಯವರು ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ಆ್ಯಕ್ಷನ್ ಬದಲು ಹೊಸ ಜಾನರ್‌ನಲ್ಲಿ ಮಾಲಾಶ್ರೀಯವರು ಕಾಣಿಸಿಕೊಳ್ಳುತ್ತಿದ್ದು, ಥ್ರಿಲ್ಲರ್ ಹಾಗೂ ಹಾರರ್ ಜಾನರ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ಗೆಟಪ್‌ನಲ್ಲಿ ದರ್ಶನ ಕೊಡಲಿದ್ದಾರೆ. ಈ ಎರಡು ಚಿತ್ರಗಳು ಹೊಸ ವರ್ಷಕ್ಕೆ ಅಂದರೆ ಜನವರಿಯಲ್ಲಿ ಆರಂಭವಾಗಲಿವೆ.
ಅಂದಹಾಗೆ, ಈ ಚಿತ್ರಗಳಿಗಾಗಿ ಮಾಲಾಶ್ರೀ ತಮ್ಮ ಲುಕ್, ಗೆಟಪ್ ಎಲ್ಲವನ್ನು ಬದಲಿಸಿಕೊಳ್ಳಲಿದ್ದಾರೆ. ಏಕೆಂದರೆ, ಚಿತ್ರದ ಪಾತ್ರ ತುಂಬಾ ವಿಶೇಷವಾಗಿದ್ದು, ಅದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದಾರಂತೆ. ಮತ್ತೂಂದೆಡೆ ಮಾಲಾಶ್ರೀಯವರು ಈಗ ಸಖತ್ ಸ್ಲಿಮ್ ಆಗಿದ್ದಾರೆ. 9 ಕೆಜಿಯಷ್ಟು ತೂಕ ಇಳಿಸಿಕೊಂಡಿರುವ ಅವರು ಸತತವಾಗಿ ವರ್ಕೌಟ್‌ನಲ್ಲಿ ತೊಡಗಿದ್ದಾರೆ. ದಿನಕ್ಕೆ ಮೂರು ಗಂಟೆಗಳ ಕಾಲ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿರುವ ಮಾಲಾಶ್ರೀಯವರಿಗೆ ಮತ್ತಷ್ಟು ಕೆಜಿ ಇಳಿಸಿಕೊಳ್ಳುವ ಇರಾದೆ ಇದೆ. ಆ ನಿಟ್ಟಿನಲ್ಲಿ ಅವರ ವರ್ಕೌಟ್ ಸಾಗುತ್ತಿದೆ.
“ನಾನು “ಉಪ್ಪು ಹುಳಿ ಖಾರ’ ಚಿತ್ರದ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಬಹಳಷ್ಟು ಜನ ಚಿತ್ರ ಮಾಡೋಕೆ ಬಂದಿದ್ದರು. ಈ ಬಾರಿ ವಿಭಿನ್ನ ಚಿತ್ರವಷ್ಟೇ ಅಲ್ಲ, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂತಾಸೆ. “ದುರ್ಗಿ’ ಚಿತ್ರದಲ್ಲಿ ಮೊದಲ ಬಾರಿಗೆ ಬಾಯ್‌ಕಟ್‌ನಲ್ಲಿ ಕಾಣಿಸಿಕೊಂಡೆ. ಅಲ್ಲಿಂದ, ಇಲ್ಲಿಯವರೆಗೂ ಒಂದೇ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾಗಾಗಿ ಈ ಬಾರಿ ಗೆಟಪ್ ಸಹ ಬದಲಾಗಿದೆ. ಇನ್ನು ಈಗಾಗಲೇ 9 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದೇನೆ. ಹಾಗಂತ ಡಯಟಿಂಗ್ ಮಾಡಿಲ್ಲ.
ಜನವರಿಯಲ್ಲಿ ಚಿತ್ರ ಪ್ರಾರಂಭವಾಗುವಷ್ಟರಲ್ಲಿ ಇನ್ನೊಂದಿಷ್ಟು ತೂಕ ಕಳೆದುಕೊಂಡಿರುತ್ತೇನೆ’ ಎನ್ನುತ್ತಾರೆ ಮಾಲಾಶ್ರೀ. ಈ ಎರಡು ಚಿತ್ರಗಳ ಪೈಕಿ ಒಂದನ್ನು ರಾಮು ನಿರ್ಮಿಸಿದರೆ, ಇನ್ನೊಂದು ಚಿತ್ರವನ್ನು ಬೇರೆ ನಿರ್ಮಾಪಕರು ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರೇನು, ನಿರ್ದೇಶಕರು ಯಾರು ಎಂಬ ವಿಷಯ ಕೇಳಿದರೆ, ಅವೆಲ್ಲಾ ರಾಮು ಅವರ ಬಾಯಿಂದಲೇ ಬರಲಿ ಎಂದು ತಪ್ಪಿಸಿಕೊಳ್ಳುತ್ತಾರೆ ಮಾಲಾಶ್ರೀ. ಅಂದ ಹಾಗೆ, ಈ ಚಿತ್ರ 2018ರ ಜನವರಿಯಲ್ಲಿ ಪ್ರಾರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.