ಕೆಲಸದ ನಡುವೆ ಕಂದ ಬಂದಾಗ…
Team Udayavani, Nov 15, 2017, 6:15 AM IST
ದುಡಿವ ಜಗತ್ತಿನಲ್ಲಿ ಹೆಣ್ಣು ಬಲು ಎತ್ತರದಲ್ಲಿ ನಿಲ್ಲುತ್ತಿದ್ದಾಳೆ. ಪುರುಷನಿಗೆ ಪ್ರತಿ ಹೆಜ್ಜೆಯಲ್ಲೂ ಅವಳು ಪೈಪೋಟಿ ಒಡ್ಡುತ್ತಿದ್ದಾಳೆ. ಹಲವು ಸಲ ಆತನನ್ನೇ ಮೀರಿಸುತ್ತಾಳೆ. ಅತ್ಯುನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾಳೆ. ಆದರೆ, ಆಕೆಯ ಈ ವೇಗದ ಕೆರಿಯರ್ ಬದುಕು ಕೊಂಚ ಬ್ರೇಕ್ ಹಾಕಿ ನಿಲ್ಲೋದು, ತುಸು ನಿಧಾನವಾಗಿ ಸಾಗುವುದು ಪ್ರಗ್ನೆನ್ಸಿ ಅವಧಿಯಲ್ಲಿ. ಉದ್ಯೋಗಿ ಮಹಿಳೆ ಗರ್ಭ ಧರಿಸಿದಾಗ, ಕೆಲಸದೊತ್ತಡವನ್ನು ನಿಭಾಯಿಸುವುದೂ ಒಂದು ಕಲೆ.
ಮೊದಲಿನಷ್ಟು ವೇಗದಲ್ಲಿ, ಏಕಾಗ್ರತೆ ವಹಿಸಿ, ಕೆಲಸ ಮಾಡುವುದು ಆ ವೇಳೆ ಕೊಂಚ ಕಷ್ಟವಾಗಬಹುದು. ಶರೀರ ಮತ್ತು ಮನಸ್ಸು ಮೊದಲಿನಂತೆ ಸ್ಪಂದಿಸದೇ ಹೋಗಬಹುದು. ಇವೆಲ್ಲ ಸವಾಲುಗಳನ್ನು ಮೆಟ್ಟುತ್ತಲೇ, ಕಚೇರಿಯಲ್ಲೂ ಆಕೆ ಸೈ ಎನಿಸಿಕೊಳ್ಳಲು ಹತ್ತಾರು ದಾರಿಗಳಿವೆ. ಗರ್ಭದಲ್ಲಿನ ಕಂದನ ಆರೋಗ್ಯದ ಕಡೆಯೂ ಗಮನ ಕೊಡುತ್ತಾ, ಆಕೆ ಉಭಯಸಾಹಸ ಮೆರೆಯುವುದು ಬಲು ಸುಲಭ.
– ಆದಷ್ಟು ಪೌಷ್ಟಿಕ ಆಹಾರಗಳನ್ನೇ ಸೇವಿಸಿ. ಧಾನ್ಯ, ಸೊಪ್ಪುಗಳಲ್ಲದೇ ಮೀನು, ಮೊಟ್ಟೆ, ಹಾಲು- ತುಪ್ಪದಂಥ ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸಿದರೆ, ಕಚೇರಿ ಅವಧಿಯ ದಣಿವನ್ನು ದೂರ ಮಾಡಬಹುದು. ಅಲ್ಲದೇ, ಕಚೇರಿಗೆ ನಾಲ್ಕೈದು ಪುಟ್ಟ ಪುಟ್ಟ ಬಾಕ್ಸ್‌ಗಳನ್ನು, ಅದರಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಕೊಂಡೊಯ್ಯಿರಿ. ಎರಡೆರಡು ಗಂಟೆ ಅವಧಿಯಲ್ಲಿ ಅದನ್ನು ಲಘುವಾಗಿ ಸೇವಿಸುತ್ತಿರಿ. ಆದಷ್ಟು ನೀರು ಕುಡಿಯುತ್ತಿರಿ.
– ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಆ ಬಗ್ಗೆ ಕೊರಗು ಬೇಡ. ಒಮ್ಮೆ ಬಾಸ್ ಅನ್ನು ಸಂಪರ್ಕಿಸಿ, ಈ ಬಗ್ಗೆ ಹೇಳಿಕೊಳ್ಳಿ. ಮಾನವೀಯತೆ ಅನ್ನೋ ಅಂಶ ಈ ವೇಳೆ ವಕೌìಟ್ ಆಗಿಯೇ ಆಗುತ್ತೆ. ಆಗ ತೀರಾ ಒತ್ತಡ ಎನಿಸುವ, ಕಠಿಣ ಎನಿಸುವ ಕೆಲಸಗಳಿಂದ ಕೊಂಚ ರಿಯಾಯಿತಿ ಸಿಗುತ್ತದೆ.
– ಡೆಸ್ಕ್ ಕೆಲಸ ಇದ್ದವರು ಸದಾ ಕುಳಿತೇ ಇದ್ದರೆ, ರಕ್ತ ಸಂಚಾರಕ್ಕೆ ಕಷ್ಟವಾಗುತ್ತದೆ. ಕಾಲು ಊದಿಕೊಳ್ಳುತ್ತದೆ. ಕೆಲವರಿಗೆ ಮುಖ ದಪ್ಪಗಾಗುತ್ತದೆ. ಹಾಗಾಗಿ, ಪ್ರತಿ ಅರ್ಧ ತಾಸಿಗೊಮ್ಮೆ ಪುಟ್ಟ ವಾಕಿಂಗ್ ಮಾಡಿ.
– ಕಂಪ್ಯೂಟರಿನಲ್ಲಿಯೇ ಮುಳುಗಿ ಹೋಗೋದು ಬೇಡ. ಪ್ರತಿ ಹತ್ತು ನಿಮಿಷಕ್ಕೆ ಅತ್ತಿತ್ತ ನೋಡುತ್ತಾ, ಕಣ್ಣಿಗೆ ಆರಾಮದ ಅನುಭವ ನೀಡಿ. ಕಣ್ಣು ದಣಿದಷ್ಟು ಮೆದುಳು ಕೂಡ ಆಯಾಸಗೊಳ್ಳುತ್ತದೆಂಬ ಸಂಗತಿ ಗೊತ್ತಿರಲಿ.
– ಕಚೇರಿ ಅಂದಮೇಲೆ ಗಾಸಿಪ್ ಇಲ್ಲದೇ ಇರುತ್ತದೆಯೇ? ಇಂಥ ಮಾತುಕತೆ ಏರ್ಪಟ್ಟಾಗಲೆಲ್ಲ, ಮೌನ ವಹಿಸಿ. ಅದನ್ನು ಕೇಳುತ್ತಾ ಸುಮ್ಮನೆ ಎಂಜಾಯ್ ಮಾಡಿ ಅಷ್ಟೇ. ಪ್ರತಿಕ್ರಿಯಿಸಲು ಹೋಗಬೇಡಿ. ಗಾಸಿಪ್‌ಗ್ಳು ನಿಮ್ಮ ಮನಸ್ಸಿನಲ್ಲಿ ಯಾವುದೇ ಕಂಪನ ಸೃಷ್ಟಿಸದಂತೆ ನೋಡಿಕೊಳ್ಳಿ.
– ಕಚೇರಿಯಲ್ಲಿ ಇದ್ದಷ್ಟು ಹೊತ್ತು ನಗುತ್ತಾ ಇರಿ. ಕೆಲಸದ ಒತ್ತಡದ ಅನುಭವ ಮುಖದಲ್ಲಿ, ನಿಮ್ಮ ವರ್ತನೆಗಳಲ್ಲಿ ಪ್ರಕಟಗೊಳ್ಳದಂತೆ ನೋಡಿಕೊಳ್ಳಿ.
– ಗರ್ಭಿಣಿ ಅಂದಾಕ್ಷಣ ಮನೆಯ ಸದಸ್ಯರೆಲ್ಲ ಪ್ರೀತಿಯಿಂದ ಕಾಣುತ್ತಾರೆ. ಅಂಥದ್ದೇ ವಾತಾವರಣ ಕಚೇರಿಯಲ್ಲೂ ಸಿಗುತ್ತದೆ. ಹಾಗಾಗಿ, ಯಾರ ಮೇಲೂ ಮುನಿದು, ಸಂಬಂಧ ಹಾಳು ಮಾಡಿಕೊಳ್ಳದಿರಿ.
– ಸರಳ ಯೋಗ, ಪ್ರಾಣಾಯಮಗಳನ್ನು ಅನುಸರಿಸುತ್ತಾ, ದೇಹಕ್ಕೆ- ಮನಸ್ಸಿಗೆ ರಿಲ್ಯಾಕ್ಸ್ ನೀಡಿ.
– ಆಫೀಸಿಗೆ ಹೋಗುವಾಗ ಬಿಗಿ ಉಡುಪುಗಳನ್ನು ಧರಿಸದೆ ಇರುವುದೇ ಉತ್ತಮ. ಬಿಗಿ ಉಡುಪು ಧರಿಸಿದಾಗ, ಉಸಿರಾಟಕ್ಕೆ ಕಷ್ಟವಾಗುತ್ತದೆ. ರಕ್ತಸಂಚಾರಕ್ಕೂ ಅಡೆತಡೆಯಾಗುತ್ತದೆ. 7-8 ತಾಸು ಹೀಗೆ ಶರೀರವನ್ನು ಹಿಂಸೆಗೆ ದೂಡುವುದು ಕಂದನ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಕಾರಣ, ಸಡಿಲ ಉಡುಪುಗಳಿಗೆ ಹೆಚ್ಚು ಆದ್ಯತೆ ಕೊಡಿ.
– ಪ್ರಗ್ನೆನ್ಸಿ ಅಂದರೆ, ಅದು ಕೆರಿಯರ್‌ಗೆ “ಬ್ರೇಕ್’ ಅಲ್ಲ. ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಯಿದೆ, ನಾನು ಹಿಂದುಳಿದಿದ್ದೇನೆ ಎಂಬುದನ್ನೇ ತಲೆಯಿಂದ ತೆಗೆದುಹಾಕಿ. ಅವರೆಷ್ಟೇ ಮುಂದಕ್ಕೆ ಹೋದರೂ, ಮುಂದೊಂದು ದಿನ ಒಂದಾದರೂ ಸಿಗ್ನಲ್‌ನಲ್ಲಿ ನಿಲ್ಲಲೇಬೇಕಲ್ಲವೇ? ಆಗ ನೀವು ವೇಗವಾಗಿ ಹೋದರೆ ಆಯಿತಷ್ಟೇ.
– ಶಾರ್ವರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.