ಮನೆಗಳಲ್ಲಿ ಮದುಮಗಳು, ಅವನಿಗೆ ಅಡುಗೆ ಬರುತ್ತಾ ಕೇಳೇ…

Team Udayavani, Nov 15, 2017, 6:45 AM IST

maduve.jpg

ನನಗಿನ್ನೂ ಸೀರೆ ಉಡುವ ಅ ಆ ಇ ಈ ಗೊತ್ತಿಲ್ಲ. ಇನ್ನು ಬಂಗಾರ, ಕ್ರೀಮು, ಪೌಡರ್‌… ಇವ್ಯಾವುದನ್ನೂ ಹೆಚ್ಚು ನಂಬಿ, ಕನ್ನಡಿ ಮುಂದೆ ಹೆಚ್ಚು ಹೊತ್ತು ನಿಂತವಳಲ್ಲ. ಈ ನಿನ್ನ ನಿರಾಭರಣ ವ್ಯಕ್ತಿತ್ವಕ್ಕೆ ಇನ್ನು ಹದಿನೈದೇ ದಿನದಲ್ಲಿ ಮದುವೆ. ನಾನೀಗ ಅವಸರದ ಗೊಂಬೆ. “ನಮ್ಮನೆಗೆ ಹಾಲು ಕುಡಿಯಲು ಬಾರೇ’ ಎಂದು ಆಹ್ವಾನಿಸುವವರು ಹೆಚ್ಚಾಗಿದ್ದಾರೆ… 

ಪಾರ್ಲರಿಗೆ ಹೋಗಿ ಫೇಶಿಯಲ್, ವ್ಯಾಕ್ಸಿಂಗ್‌… ಇತ್ಯಾದಿ ಮುಗಿಸಿಕೊಂಡು ಬಂದು, ಹಳದಿ ಶಾಸ್ತ್ರ ಇತ್ಯಾದಿ ನಡೆದು, ಎರಡು ಕೈಗಳಿಗೂ ಮೆಹಂದಿ, ಹಸಿರು ಗಾಜಿನ ಬಳೆತೊಟ್ಟು ನಾಳಿನ ಮದುವೆಯ ಕನಸಿನಲ್ಲಿ ಮುಳುಗಿರುವ ಮದುವಣಗಿತ್ತಿ ನಾನು.

ಮೊಬೈಲ್ ರಿಂಗಣಿಸುತ್ತಲೇ ಅವನ ಕರೆಯೆಂದು ಕಾಡಿಸುವ ಗೆಳತಿಯರು, ಅವನ ಮೆಸೇಜು ನೋಡಿ ನನ್ನ ಮುಖದಲ್ಲಿ ಮೂಡಿದ ಮುಗುಳ್ನಗೆಯನ್ನು ಗಮನಿಸಿ, “ಆಹಾ, ನಾಚಿಕೆ ನೋಡು’ ಎಂದು ಇಷ್ಟು ದಿನ ಕಾಡುತ್ತಿದ್ದ ಗೆಳತಿಯರಿಂದ ದೂರ ಹೋಗಬೇಕೆನ್ನುವ ಅಳುಕು. ಅವನು ನನ್ನ ಹುಟ್ಟುಹಬ್ಬದ ದಿನ ನನಗಾಗಿ, ಸರ್‌ಪ್ರೈಸ್‌ ಆಗಿ ಹೂವಿನ ಬೊಕ್ಕೆ, ಡ್ರೆಸ್‌ ಅನ್ನು ಕಳುಹಿಸಿದಾಗ “ತುಂಬಾ ಲಕ್ಕಿ ಕಣೇ ನೀನು. ಮುಂದಿನ ಹುಟ್ಟುಹಬ್ಬಕ್ಕೆ ಏನೇನ್‌ ಗಿಫ್ಟ್ ಕೊಡ್ತಾನೋ ನಿನ್ನ ಹುಡುಗ’ ಎಂದು ಆಕಾಶಕ್ಕೆ ಏರಿಸಿದ್ದಳು ಪ್ರಾಣ ಸ್ನೇಹಿತೆ.

ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿ ವರುಷ ಕಳೆದಿಲ್ಲ, ಮದುವೆ ನಿಶ್ಚಯವಾಗಿ ಹೋಗಿದೆ. ಶಾಲೆ, ಕಾಲೇಜು, ಕೆಲಸ ಎಂದೆÇÉಾ ಅಲೆದು, ಮನೆಯಲ್ಲಿ ಅಡುಗೆ ಕಲಿಯಲು ಸಮಯವೇ ಆಗಲಿಲ್ಲ. ಮದುವೆ ನಿಶ್ಚಯವಾದೊಡನೆ ಕಲಿಯೋಣವೆಂದರೆ, ಜಾಸ್ತಿ ಸಮಯವೇ ಇರಲಿಲ್ಲ. ಗೆಳತಿಯರೆಲ್ಲ “ಹೆದರಬೇಡ್ವೇ, ಯೂಟ್ಯೂಬ್‌ನಲ್ಲಿ ಬೇಕಾದಷ್ಟು ರೆಸಿಪಿ ಸಿಗುತ್ತೆ’ ಎಂದು ಧೈರ್ಯ ತುಂಬಿದರು. ಮತ್ತೂಬ್ಬಳು, “ಅವನಿಗೆ ಅಡುಗೆ ಬರುತ್ತಾ ಕೇಳೇ…’ ಎಂದಳು. ಇನ್ನೊಬ್ಬಳಂತೂ “ಮ್ಯಾಗಿ ಮಾಡಿದರಾಯ್ತು ಬಿಡೆ…’ ಎಂದಳು!

ಕೆಲಸಕ್ಕೆ ರಾಜೀನಾಮೆ ಕೊಟ್ಟಾಗ ಪರಿಚಿತರೆಲ್ಲ “ಯಾಕೆ ಹೀಗೆ ಮಾಡಿದೆ?’ ಅಂತ ಕೇಳತೊಡಗಿದರು. “ನನ್ನ ಕಂಪನಿ, ಅವರ ಊರಿನಲ್ಲಿ ಇಲ್ಲ’ ಎಂದರೂ ಕೇಳದೇ, “ಅಲ್ಲಿ ಹೋಗಿ ಕೆಲಸ ಹುಡುಕ್ತೀಯಾ? ಈಗಲೇ ಹುಡುಕಲು ಶುರುಮಾಡಿದ್ದೀಯಾ?’ ಎಂದೆÇÉಾ ಕೇಳಲು ಶುರುಮಾಡಿದರು. ಅದಕ್ಕೆ ಈಗ ಯಾರು ಕೇಳಿದರೂ, “ಈಗಾಗಲೇ ಹುಡುಕಿದ್ದೇನೆ’ ಎಂದು ಹೇಳಲು ಶುರುಮಾಡಿದ್ದೇನೆ.

ಸೀರೆ ಉಡುವ ಅ ಆ ಇ ಈ ಕೂಡ ಗೊತ್ತಿಲ್ಲ. ಇನ್ನು ಬಂಗಾರ, ಕ್ರೀಮು, ಪೌಡರ್‌… ಇವ್ಯಾವುದನ್ನೂ ಹೆಚ್ಚು ನಂಬಿ, ಕನ್ನಡಿ ಮುಂದೆ ಹೆಚ್ಚು ಹೊತ್ತು ನಿಂತವಳಲ್ಲ. ಮದುವೆಯಾದವರು ಹೀಗಿರಬೇಕು ಎಂದೆÇÉಾ ಜನರು ಹೇಳುವಾಗ, ನಾನು ಹೇಗೆ ಸಂಸಾರ ನಿಭಾಯಿಸಬಲ್ಲೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು.

ಕಚೇರಿಯ ನೋಟಿಸ್‌ ಪಿರಿಯಡ್‌ ಮುಗಿದು ನನಗಾಗಿ ಉಳಿದದ್ದು ಹದಿನೈದೇ ದಿನ. ಅಷ್ಟರೊಳಗೆ, ಅಮ್ಮನೊಂದಿಗೆ ಸೀರೆ, ಬಂಗಾರ ಇತ್ಯಾದಿ ಶಾಪಿಂಗ್‌ ಮುಗಿಸಿ, ಸೀರೆಗೆ ಫಾಲು, ಗೊಂಡೆ, ರವಿಕೆ ಹೊಲಿಸಲು ಓಡಾಡುವುದರಲ್ಲಿ, ದರ್ಜಿಯ “ಯಾವ ನೆಕ್‌, ಯಾವುದಕ್ಕೆ ಲೇಸ್‌’… ಎಂಬೆÇÉಾ ಪ್ರಶ್ನೆಗಳಿಗೆ ಉತ್ತರ ಹುಡುಕಿ ಸುಸ್ತಾಗಿ ಹೋದೆ. “ನಮ್ಮನೆಗೆ ಹಾಲು ಕುಡಿಯಲು ಬಾರೆ’ ಎಂದು ಪಕ್ಕದ ಮನೆಯ ಲೀಲಾ ಆಂಟಿ ಕರೆದದ್ದೇ ತಡ, ನೆರೆಯವರೆಲ್ಲ ನಮ್ಮನೆಗೆ ಊಟಕ್ಕೆ, ಚಹಾಕ್ಕೆ ಬಾರೆ ಎಂದು ಕರೆದು, ಅಪಾಯಿಂಟ್‌ಮೆಂಟ… ಕೊಡಲು ನನ್ನ ತಂಗಿಯನ್ನು ಪಿ.ಎ. ಮಾಡಿಕೊಂಡೆ!

ಹೈದರಾಬಾದಿನಲ್ಲಿರುವ ಅಣ್ಣನ ಮನೆಗೆ ಎರಡು ದಿನದ ಮಟ್ಟಿಗೆ ಹೋಗುತ್ತೇನೆಂದರೆ, ಅಪ್ಪ “ಮದುವೆಯಾದ ಮೇಲೆ ಹೇಗೂ ಅÇÉೇ ಇರುತ್ತೀ. ಬೇಕಾದಾಗ ಹೋಗಿ ಬಾ. ಬೇಕಾದರೆ, ಆಗಲೇ ಅತ್ತಿಗೆ ಬಳಿ ಅಡುಗೆ ಕಲಿತುಕೋ’ ಎಂದರು.
ಇಷ್ಟು ದಿನ ನಮ್ಮ ವಾಟ್ಸಾéಪ್‌ ಗ್ರೂಪ್‌ನಲ್ಲಿ ಮದುವೆಯಾದ ಒಬ್ಬಳೇ ಸದಸ್ಯೆ ಸುಜಾತಾಳನ್ನು “ಆಂಟಿ’ ಎಂದು ಕಾಡಿಸಿದವರಲ್ಲಿ ನಾನೂ ಒಬ್ಬಳು. ಮದುವೆಯ ನಂತರ ನನ್ನನ್ನೂ ಹಾಗೆ ಕರೆಯುತ್ತಾರೆಂಬ ಯೋಚನೆಯೂ ಆ ದಿನಗಳಲ್ಲಿ ಇರಲಿಲ್ಲ. ಮದುವೆಯಾದ ಮೇಲೆ ಅಮ್ಮ, ಅತ್ತೆಯೊಂದಿಗೆ ಫೋನ್‌ನಲ್ಲಿ ಕೇಳಿ ಅಡುಗೆ, ಮನೆಕೆಲಸ ಮಾಡುವ ಪ್ಲಾನ್‌ಗೆ ಸಜ್ಜಾಗಿದ್ದೇನೆ. ನನ್ನ ಮದುವೆಗೆ ಮರೆಯದೇ ಬನ್ನಿ. ಇದು ನನ್ನ ಆತ್ಮೀಯ ಕರೆಯೋಲೆ.

– ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.