ಉದ್ಯಮಿ ವಿಜಯ ಮಲ್ಯ ಜೀವಕ್ಕೆ ತೊಂದರೆಯಿಲ್ಲ
Team Udayavani, Nov 15, 2017, 6:40 AM IST
ಹೊಸದಿಲ್ಲಿ: ಸಾಲ ಮಾಡಿ ತೀರಿಸಲಾರದೆ ವಿದೇಶಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ ಮಲ್ಯ ಜೀವಕ್ಕೆ ಅಪಾಯ ಉಂಟಾಗದಂತೆ ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ, ಕಳುಹಿಸಿಕೊಡಿ ಎಂದು ಬ್ರಿಟನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಭಾರತ ಮುಂದಾಗಿದೆ.
ಈ ಸಂಬಂಧ ಸೋಮವಾರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಮಟ್ಟದ ಸಭೆ ನಡೆದಿದ್ದು ಮಲ್ಯ ಜೀವಕ್ಕೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಲು ನಿರ್ಧರಿಸಲಾಗಿದೆ.
ಈಗಾಗಲೇ ಅಲ್ಲಿನ ನ್ಯಾಯಾಲಯ ತಲೆಮರೆಸಿಕೊಂಡಿರುವ ಇಬ್ಬರು ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಲು ಒಪ್ಪಿಗೆ ನೀಡಿರಲಿಲ್ಲ. ಇದಕ್ಕೆ ತಿಹಾರ್ ಜೈಲಿನಲ್ಲಿರುವ ಅವ್ಯವಸ್ಥೆಯ ಕಾರಣವನ್ನೇ ಮುಂದಿಟ್ಟಿತ್ತು. ಹೀಗಾಗಿ ಮಲ್ಯ ವಿಚಾರದಲ್ಲಿ ಹಾಗಾಗ ಬಾರದು ಎಂಬ ಕಾರಣದಿಂದಾಗಿ ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಭರವಸೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಮುಂಬಯಿಯ ಅರ್ಥರ್ ಮತ್ತು ದಿಲ್ಲಿಯ ತಿಹಾರ್ ಜೈಲಿನ ಭದ್ರತೆ ಬಗ್ಗೆ ಭರವಸೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.