ಈಗ ಮಾಲಿನ್ಯ ರಾಜಕೀಯ
Team Udayavani, Nov 15, 2017, 6:05 AM IST
ಹೊಸದಿಲ್ಲಿ/ಚಂಡೀಗಡ: ರಾಜಧಾನಿ ದಿಲ್ಲಿಯಲ್ಲಿ ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆ ಇದೀಗ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಕೇಜ್ರಿವಾಲ್ ನೀಡಿದ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಇದೆಲ್ಲವೂ ವ್ಯರ್ಥಾಲಾಪಗಳು ಎಂದು ಜರಿದಿದ್ದಾರೆ.
ದಿಲ್ಲಿಯಲ್ಲಿನ ಮಾಲಿನ್ಯಕ್ಕೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರೈತರೂ ಕಾರಣ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಎರಡೂ ರಾಜ್ಯಗಳ ಜತೆ ಮಾತುಕತೆ ನಡೆಸಲು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ. ಈ ಬಗ್ಗೆ ಸೋಮವಾರವೇ ಕೇಜ್ರಿವಾಲ್ ಟ್ವೀಟ್ ಮೂಲಕ ಪ್ರಸ್ತಾಪಿಸಿದ್ದು, ಇದಕ್ಕೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಒಪ್ಪಿಗೆ ನೀಡಿದ್ದರು. ಆದರೆ, ಬುಧವಾರ ಚಂಡೀಗಡಕ್ಕೆ ಬರುವುದಾಗಿ ಹೇಳಿದ್ದ ಕೇಜ್ರಿವಾಲ್, ಈ ಮಾತುಕತೆಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರನ್ನೂ ಆಹ್ವಾನಿಸಿದ್ದಾರೆ.
ಕೇಜ್ರಿವಾಲ್ ಅವರ ಮಾತುಕತೆ ಆಹ್ವಾನವನ್ನು ತಳ್ಳಿಹಾಕಿರುವ ಅಮರೀಂದರ್ ಸಿಂಗ್, ದಿಲ್ಲಿ ಮಾಲಿನ್ಯಕ್ಕೂ ಪಂಜಾಬ್‌ಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಮಾಲಿನ್ಯಕ್ಕೆ ನಗರೀಕರಣವೇ ಕಾರಣ. ಅಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕೇಜ್ರಿವಾಲ್ ನೋಡು ತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಮಾತುಕತೆಗಳಲ್ಲಿ ಯಾವುದೇ ಅರ್ಥವಿಲ್ಲ. ಸಮಯ ನಷ್ಟವಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಈ ಮಧ್ಯೆ ಬುಧವಾರ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವ‡ರು ಚಂಡೀಗಡದಲ್ಲಿ ಮಾತುಕತೆ ನಡೆಸುವ ಸಂಭವವಿದೆ.
ವಿನಾಯಿತಿಗೆ ಒಪ್ಪದ ಎನ್‌ಜಿಟಿ: ರಾಷ್ಟ್ರೀಯ ಹಸಿರು ಪ್ರಾಧಿಕಾರದಲ್ಲೂ ಕೇಜ್ರಿವಾಲ್ ಸರಕಾರಕ್ಕೆ ಹಿನ್ನಡೆಯಾಗಿದೆ. ಮಹಿಳೆಯರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ವಿನಾಯಿತಿ ತೋರಿ ಸಮ-ಬೆಸ ಯೋಜನೆ ಯಾರಿಗೆ ತರುವ ಕೇಜ್ರಿವಾಲ್ ಸರಕಾರದ ಪ್ರಸ್ತಾವನೆಯನ್ನು ಮತ್ತೂಮ್ಮೆ ಎನ್‌ಜಿಟಿ ತಿರಸ್ಕರಿಸಿದೆ. ಇದಕ್ಕೆ ಬದಲಾಗಿ ಹೆಚ್ಚು ಮಾಲಿನ್ಯ ಕ್ಕೊಳಗಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನೀರು ಹಾರಿಸುವಂತೆ ಅದು ಸಲಹೆ ನೀಡಿದೆ. ಇದರ ಜತೆಗೆ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಈ ಮಧ್ಯೆ ದ್ವಿಚಕ್ರ ವಾಹನಗಳೇ ದಿಲ್ಲಿ ಮಾಲಿನ್ಯಕ್ಕೆ ಹೆಚ್ಚು ಕಾರಣ ಎಂಬುದು ಗೊತ್ತಾಗಿದೆ. ಇದನ್ನು ಕಂಡೂ ಮತ್ತೆ ಮತ್ತೆ ಅವುಗಳಿಗೇ ವಿನಾಯಿತಿ ಕೋರುವುದು ಎಷ್ಟು ಸರಿ ಎಂದು ಎನ್‌ಜಿಟಿ ತೀಕ್ಷ್ಣವಾಗಿ ಪ್ರಶ್ನಿಸಿತು.
ಬೆಳೆಗೆ ಬೆಂಕಿ ಹಾಕುವ ರೈತರ ವಿರುದ್ಧ ಕ್ರಮದ ಎಚ್ಚರಿಕೆ
ಈ ಮಧ್ಯೆ ಹೊಲಗಳಲ್ಲಿನ ಬೆಳೆ ಸುಡುತ್ತಿರುವ 300 ರೈತರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಹರ್ಯಾಣ ಸರಕಾರ ಹೇಳಿದೆ. ಅಲ್ಲದೆ ಹೊಲಗಳಲ್ಲಿ ಬೆಂಕಿ ಹಚ್ಚದಂತೆ ರೈತರಲ್ಲಿ ಅಲ್ಲಿನ ಸರಕಾರ ಮನವಿಯನ್ನೂ ಮಾಡಿದೆ. ಬೆಳೆಗೆ ಬೆಂಕಿ ಹಚ್ಚುವುದರಿಂದ ಮುಂದಿನ ಬಾರಿ ಇಳುವರಿಯೂ ಹೆಚ್ಚಾಗಿ ಬರುವುದಿಲ್ಲ ಎಂದು ಹರ್ಯಾಣ ಪರಿಸರ ಸಚಿವರು ಹೇಳಿದ್ದಾರೆ. ಅಲ್ಲದೆ 244 ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಹಾಗೂ ಅವರಿಂದ 18.65 ಲಕ್ಷ ದಂಡ ವಸೂಲಿ ಮಾಡಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಈ ವರ್ಷವೇ ಇಂಥ 1586 ರೈತರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.