ಮೌಡ್ಯ ನಿಷೇಧ ವಿಧೇಯಕ ಮಂಡನೆ


Team Udayavani, Nov 15, 2017, 7:17 AM IST

15-1.jpg

ಸುವರ್ಣಸೌಧ (ಬೆಳಗಾವಿ): ಮಡೆಸ್ನಾನ, ಭಾನಾಮತಿ, ಮಾಟ-ಮಂತ್ರಕ್ಕೆ ನಿಷೇಧ ಹೇರುವ, ಜ್ಯೋತಿಷ್ಯಕ್ಕೆ ಯಾವುದೇ ಅಡ್ಡಿ ಇಲ್ಲದ ವಿವಾದಿತ ಮೌಡ್ಯ ನಿಷೇಧ (ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ) ವಿಧೇಯಕ-2017 ವಿಧಾನಸಭೆಯಲ್ಲಿ ಮಂಡನೆಯಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ವಿಧೇಯಕ ಮಂಡಿಸಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನಕ್ಕೆ ವಿಧೇಯಕದಲ್ಲಿ ನಿಷೇಧ ಹೇರಲಾಗಿದ್ದು, ಜ್ಯೋತಿಷ್ಯ, ಭಜನೆ, ಜಾತ್ರೆಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಅಲ್ಲದೆ, ದುಷ್ಟ ಮತ್ತು ಅಮಾನವೀಯ ಎನ್ನುವ ವಿಚಾರಗಳನ್ನು ಯಾರೇ ಆಗಲಿ ಆಚರಿಸುವುದು ಅಥವಾ ಮತ್ತೂಬ್ಬ ವ್ಯಕ್ತಿ ಆಚರಿಸಲು ಪ್ರೋತ್ಸಾಹಿಸುವುದು, ಪ್ರಚಾರ ಮಾಡುವುದು ಅಥವಾ ಮೌಢಾಚರಣೆ ಮಾಡುವಂತೆ ಒತ್ತಾಯ ಹೇರುವುದನ್ನೂ ನಿಷೇಧಿಸಲಾಗಿದೆ. ಜತೆಗೆ ವಾಮಾಚಾರಕ್ಕೆ ಬೆಂಬಲ, ಪ್ರೋತ್ಸಾಹ ಆಥವಾ ಪ್ರಚಾರ ನೀಡಿದರೆ ಅಂಥವರಿಗೆ ಒಂದರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಜಾಗೃತ ಅಧಿಕಾರಿ ನೇಮಕ: ಮೌಡ್ಯ ಆಚರಣೆಗಳ ಪತ್ತೆ ಮತ್ತು ತನಿಖೆಗಾಗಿ ಇನ್ಸ್‌ಪೆಕ್ಟರ್‌ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಜಾಗೃತ ಆಧಿಕಾರಿಯನ್ನಾಗಿ ನೇಮಿಸಲು ಆವಕಾಶ ನೀಡಲಾಗಿದ್ದು, ಮೌಡ್ಯ ಆಥವಾ ಯಾವುದೇ ಆಮಾನವೀಯ ಕೃತ್ಯ ನಡೆಯುತ್ತಿದೆ ಎಂಬ ಸಂಶಯ ಬಂದರೆ ಸ್ಥಳ ಪರಿಶೀಲನೆ ಮಾಡಲು ಜಾಗೃತ ಅಧಿಕಾರಿಗೆ ಮುಕ್ತ ಆವಕಾಶವಿರುತ್ತದೆ. ವಾಮಾಚಾರ ಆಥವಾ ಮೌಡ್ಯ ಆಚರಣೆಯಿಂದ ವ್ಯಕ್ತಿಯ ಜೀವಕ್ಕೆ ಹಾನಿ ಆಥವಾ ಆಂಗ ವೈಕಲ್ಯ ಉಂಟಾದರೆ ಅದಕ್ಕೆ ಕಾರಣರಾದವರ ವಿರುದ್ಧ ಕೊಲೆ, ಕೊಲೆಗೆ ಪ್ರೇರಣೆ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಶಾಸಕರಿಗೆ ತಟ್ಟಿದ ಭದ್ರತೆ ಬಿಸಿ 
ಸುವರ್ಣಸೌಧ:
ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ತಡೆಯೊಡ್ಡಿದ ಭದ್ರತಾ ಸಿಬ್ಬಂದಿ, ಶಾಸಕರ ಪಾಸ್‌ ತೋರಿಸುವಂತೆ ಕೇಳಿದ ಪ್ರಸಂಗ ನಡೆಯಿತು. ಭದ್ರತಾ ಸಿಬ್ಬಂದಿ ವರ್ತನೆಯಿಂದ ಒಂದು ಕ್ಷಣ ತಬ್ಬಿಬ್ಟಾದ ಶಾಸಕರು, ತಾವು ಶಾಸಕರ ಕಾರಿನಲ್ಲಿ ಬಂದಿದ್ದೇನೆ ಎಂದು ಹೇಳಿದರಾದರೂ ಅದನ್ನು ಸಿಬ್ಬಂದಿ ಒಪ್ಪಲಿಲ್ಲ. ನಿಮ್ಮ ಗುರುತಿನ ಚೀಟಿ ತೋರಿಸಿದರೆ ಮಾತ್ರ ಒಳ ಬಿಡುವುದಾಗಿ ಹೇಳಿದರು. ಅದರಂತೆ ಅಶ್ವತ್ಥನಾರಾಯಣ ಅವರು ಗುರುತಿನ ಚೀಟಿ ತೋರಿಸಿದ ಬಳಿಕ ಅವರನ್ನು ಸುವರ್ಣಸೌಧದೊಳಗೆ ಬಿಡಲಾಯಿತು. ನಂತರ, ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮೌಖೀಕ ದೂರು ನೀಡಿದ ಅವರು, ಶಾಸಕರ ಮಾಹಿತಿ ಗೊತ್ತಿರುವ ಸಿಬ್ಬಂದಿಯನ್ನು ಪ್ರವೇಶ ದ್ವಾರದಲ್ಲಿ  ನಿಯೋಜಿಸಿ ಎಂದು ಸಲಹೆ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಿಸಿದೆ. ತಪಾಸಣೆ ಹೆಸರಿನಲ್ಲಿ ಎಲ್ಲರಿಗೂ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಸರ್ಕಾರದ ಈ ವರ್ತನೆ ಸರಿಯಲ್ಲ ಎಂದು ಹೇಳಿದರು. 

ಯಾವುದು ನಿಷೇಧ? 
ಭಾನಾಮತಿ, ಮಾಟ-ಮಂತ್ರ, ನಿಧಿ ಹುಡುಕುವುದು. ಆದಕ್ಕಾಗಿ ವಾಮಾಚಾರ, ವ್ಯಕ್ತಿಯ ಮೇಲೆ ಹಲ್ಲೆ, ಬೆತ್ತಲೆ ಮೆರವಣಿಗೆ

ಇಂದ್ರಿಯಗಳಲ್ಲಿ ಅನಿರೀಕ್ಷಿತ ಶಕ್ತಿ ಆಹ್ವಾನವಾಗಿದೆ ಆಥವಾ ಒಬ್ಬ ವ್ಯಕ್ತಿಯಲ್ಲಿ ಅತೀಂದ್ರಿಯ ಶಕ್ತಿ ಇದೆ ಎಂದು ಪ್ರಭಾವ ಬೀರುವುದು. ಆಂತಹ ವ್ಯಕ್ತಿಯ ಮಾತು ಕೇಳದಿದ್ದರೆ ತೊಂದರೆಯಾಗುತ್ತದೆ ಎಂದು ಹೆದರಿಸುವುದು. ಭಯ ಹುಟ್ಟಿಸಿ ವಂಚನೆ ಮಾಡುವುದು.

ದೆವ್ವ ಬಿಡಿಸುವ ನೆಪದಲ್ಲಿ ವ್ಯಕ್ತಿಗೆ ಪಾದರಕ್ಷೆ ಆದ್ದಿದ ನೀರು ಕುಡಿಯುವಂತೆ ಒತ್ತಾಯಿಸುವುದು. ಹಗ್ಗ, ಸರಪಳಿಯಿಂದ ಕಟ್ಟುವುದು, ಕೋಲು, ಚಾಟಿಯಿಂದ ಹೊಡೆಯುವುದು, ಮೆಣಸಿನಕಾಯಿ ಹೊಗೆ ಹಾಕುವುದು, ವ್ಯಕ್ತಿಯನ್ನು ಚಾವಣಿಗೆ ನೇತು ಹಾಕುವುದು, ಕೂದಲು ಕೀಳುವುದು, ವ್ಯಕ್ತಿಯ ಆಂಗಗಳಿಗೆ ಬಿಸಿ ವಸ್ತುವಿನಿಂದ ಸುಡುವುದು,  ಸಾರ್ವಜನಿಕವಾಗಿ ಲೈಂಗಿಕ ಕೃತ್ಯಕ್ಕೆ ಒತ್ತಾಯ ಮಾಡುವುದು, ಅಮಾನವೀಯ ಕೃತ್ಯದ ಮೂಲಕ ಬಾಯಲ್ಲಿ ಮೂತ್ರ ಅಥವಾ ಮಾನವ ಮಲ ಹಾಕುವುದು.

ಭಾನಾಮತಿ, ಮಾಟ-ಮಂತ್ರದ ಮೂಲಕ ಜಾನುವಾರುಗಳ ಹಾಲು ಕೊಡುವ ಸಾಮರ್ಥ್ಯ ತಗ್ಗಿಸುವುದು, ಒಬ್ಬ ವ್ಯಕ್ತಿಯನ್ನು ಸೈತಾನನ ಅವತಾರ ಎಂದು ಘೋಷಿಸುವುದು.

ದೆವ್ವ ಮತ್ತು ಮಂತ್ರಗಳನ್ನು ಆಹ್ವಾನಿಸಿ ಭಯ ಹುಟ್ಟಿಸುವುದು, ಆಘೋರಿ ಕೃತ್ಯ ಆಚರಣೆ ಮಾಡುವುದು.

ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದು, ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳಿಕೊಳ್ಳುವುದು.

ಆಲೌಕಿಕ ಶಕ್ತಿ ಇದೆ ಎಂದು ಹೇಳುವುದು, ಪವಿತ್ರಾತ್ಮದ ಆವತಾರ ಎಂದು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು.

ಕೊಕ್ಕೆಯಿಂದ ನೇತು ಹಾಕಿದ ಸಿಡಿ ಆಚರಣೆ ಮಾಡುವಂತೆ ಮನವೊಲಿಸುವುದು. 

ಮಕ್ಕಳನ್ನು ಎತ್ತರದಿಂದ ಎಸೆಯುವುದು, ಮುಳ್ಳುಗಳ ಮೇಲೆ ಎಸೆಯುವುದು.

ಋತುಮತಿಯಾದ ಹೆಣ್ಣು ಆಥವಾ ಗರ್ಭಿಣಿಯನ್ನು ಒಂಟಿಯಾಗಿಡುವುದು, ಬೆತ್ತಲೆ ಸೇವೆ ಮಾಡುವುದು.

ಪ್ರಾಣಿಯ ಕುತ್ತಿಗೆ ಕಚ್ಚಿ ಕೊಲ್ಲುವುದು.

ಎಂಜಲು ಎಲೆಗಳ ಮೇಲೆ ಹೊರಳಾಡುವುದು (ಮಡೆಸ್ನಾನ)

ಬಾಯಿ ಬೀಗ ಪದ್ದತಿ ಆಚರಣೆ (ಬಾಯಲ್ಲಿ ಕಬ್ಬಿಣದ ಸಲಾಕೆ ತುರುಕುವುದು)

ಭಾನಾಮತಿ ಹೆಸರಿನಲ್ಲಿ ಮನೆಗಳ ಮೇಲೆ ಕಲ್ಲು ಎಸೆಯುವುದು.

ನಾಯಿ, ಹಾವು, ಚೇಳು ಕಚ್ಚಿದಾಗ ವೈದ್ಯಕೀಯ ಚಿಕಿತ್ಸೆ ಬದಲು ಮಂತ್ರ-ತಂತ್ರ ಮಾಡುವುದು.

ಯಾವುದಕ್ಕೆ ನಿರ್ಬಂಧ ಇಲ್ಲ?
ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪೂಜೆ ಮಾಡುವುದು.

ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು ಹಾಗೂ ಕಲೆಗಳ ಪದ್ಧತಿ, ಅದರ ಪ್ರಸಾರ

ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಸಾರ ಮತ್ತು ಪ್ರಚಾರ ಮಾಡುವುದು.

ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್‌ ಮತ್ತು ಧಾರ್ಮಿಕ ಸ್ಥಳಗಳಲ್ಲಿ ದೈಹಿಕ ಹಾನಿಯುಂಟು ಮಾಡದಿರುವ ಪ್ರಾರ್ಥನೆ, ಉಪಾಸನೆ ಮತ್ತು ಧಾರ್ಮಿಕ ಆಚರಣೆ.

ಎಲ್ಲ ಧರ್ಮಗಳ ಸಂಭ್ರಮಾಚರಣೆಗಳು, ಹಬ್ಬಗಳು, ಪ್ರಾರ್ಥನೆಗಳು, ಮೆರವಣಿಗೆ.

ಧರ್ಮಾಚರಣೆ ಅನುಸಾರವಾಗಿ ಮಕ್ಕಳ ಕಿವಿ, ಮೂಗು ಚುಚ್ಚುವುದು ಹಾಗೂ ಜೈನ ಸಂಪ್ರದಾಯದ ಕೇಶಲೋಚನ ಆಚರಣೆ.

ವಾಸ್ತು ಶಾಸ್ತ್ರದ ಕುರಿತು ಜ್ಯೋತಿಷ್ಯರ ಸಲಹೆ ಪಡೆಯುವುದು.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.