ಹಿಂದೋನ್ ವಾಯು ನೆಲೆ ಪ್ರವೇಶ ಯತ್ನ: ವ್ಯಕ್ತಿಗೆ ಗುಂಡು
Team Udayavani, Nov 15, 2017, 11:16 AM IST
ಗಾಜಿಯಾಬಾದ್ : ಇಲ್ಲಿನ ಹಿಂದೋನ್ ವಾಯು ನೆಲೆಯ ಆವರಣ ಗೋಡೆಯನ್ನು ಏರಿ ಒಳಪ್ರವೇಶಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಯೋರ್ವನನ್ನು ಭದ್ರತಾ ಪಡೆಗಳು ಗುಂಡಿಕ್ಕಿರುವುದಾಗಿ ಓರ್ವ ಹಿರಿಯ ಐಎಎಫ್ ಅಧಿಕಾರಿ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
ಗುಂಡೇಟಿಗೆ ಗಾಯಗೊಂಡ ವ್ಯಕ್ತಿಯನ್ನು ಒಡನೆಯೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯಲಾಯಿತು. ಈತನ ಹೆಸರು ಸುಜೀತ್ ಎಂದು ಅನಂತರ ಗೊತ್ತಾಯಿತು. ಈತ ಉತ್ತರ ಪ್ರದೇಶದ ಪ್ರತಾಪ್‌ಗ್ಢದ ನಿವಾಸಿಯಾಗಿದ್ದಾನೆ. ಕಳೆದ ಮೂರು ವರ್ಷಗಳಿಂದ ಈತ ಆನಂದ ವಿಹಾರ್ ಪ್ರದೇಶದಲ್ಲಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ.
ತಾನು ಗೋಡೆ ಏರಿ ಹಿಂದೋನ್ ವಾಯು ನೆಲೆ ಪ್ರವೇಶಿಸಲು ಯತ್ನಿಸಿದ್ದು ಹೌದೆಂದು ಗಾಯಾಳು ಆರೋಪಿ ಹೇಳಿದ್ದಾನೆ; ಆದರೆ ಇನ್ನು ಮುಂದೆಂದೂ ಅಂತಹ ಕೆಲಸವನ್ನು ತಾನು ಮಾಡುವುದಿಲ್ಲ ಎಂದಾತ ಹೇಳಿದ್ದಾನೆ.
ನನ್ನ ಬಳಿ ತಿನ್ನಲು ಏನೂ ಆಹಾರವಿರಲಿಲ್ಲ; ಸುಮ್ಮನೆ ಕುಳಿತಿರಲು ಆವರಣ ಗೋಡೆಯನ್ನು ಏರಲು ಬಯಸಿದ್ದೆ; ಮುಂದೆಂದೂ ಹಾಗೆ ಮಾಡುವುದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುಜೀತ್ ಉತ್ತರಿಸಿದ್ದಾನೆ.
ವಾಯುಪಡೆ ಅಧಿಕಾರಿಗಳು ಅನಂತರ ಈ ಇಡಿಯ ಪ್ರಸಂಗವನ್ನು ಉತ್ತರ ಪ್ರದೇಶ ಪೊಲೀಸರಿಗೆ ವಿವರಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಈಗ ಹೈ ಅಲರ್ಟ್ ವಹಿಸಿದ್ದಾರೆ.
ಹಿಂದೋನ್ ವಾಯು ನೆಲೆ, ಪ್ರವೇಶಿಸಲು ಯತ್ನ, ಭದ್ರತಾ ಪಡೆಗಳಿಂದ ಗುಂಡು,ಪ್ರವೇಶ ಯತ್ನ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.