ಧೈರ್ಯ, ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ


Team Udayavani, Nov 15, 2017, 11:36 AM IST

dhairya-sahasa.jpg

ಬೆಂಗಳೂರು: ತಂಗಿಗೆ ವಿಷದ ಹಾವು ಕಚ್ಚಿರುವ ಸುದ್ದಿ ತಿಳಿಯುತ್ತಿದ್ದಂತೆ ಬಾಯಿಂದ ವಿಷ ಹೀರಿ ತೆಗೆದು ಜೀವ ಉಳಿಸಿದ ಅಣ್ಣ. ಕಾಲುವೆಯಲ್ಲಿ ಈಜಾಡುವಾಗ ಅಪಾಯಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿದ 14 ವರ್ಷದ ಬಾಲಕ. ಹೆಬ್ಟಾವಿನ ಬಾಯಿಯಿಂದ ಜೀವ ರಕ್ಷಿಸಿಕೊಂಡ ಬಂಟ್ವಾಳದ ಹುಡುಗ, ಮಾವನ ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಹುಡುಗಿ …

ಹೀಗೆ ಶೌರ್ಯ ಪ್ರಶಸ್ತಿ ಪಡೆದ ಪ್ರತಿಯೊಬ್ಬರ ಕಥೆಯೂ ರೋಮಾಂಚನವಾಗಿದೆ. ಪ್ರಸಕ್ತ ಸಾಲಿನಲ್ಲಿ ಧೈರ್ಯ, ಸಾಹಸ ಮೆರೆದು ಇನ್ನೊಬ್ಬರ ಜೀವ ರಕ್ಷಿಸಿದ 7 ವಿದ್ಯಾರ್ಥಿಗಳಿಗೆ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯಪಾಲ ವಜೂಭಾಯಿ ರೂಢಭಾಯಿ ವಾಲಾ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಅಜ್ಜಿ, ಅಜ್ಜ ಪ್ರೇರಣೆ: ವಿಷದ ಹಾವು ಕಚ್ಚಿರುವುದರಿಂದ ತಂಗಿ ಬೊಬ್ಬೆ ಹಾಕುತ್ತಿದ್ದಳು. ತಕ್ಷಣ ಹಾವು ಕಚ್ಚಿದ ಗಾಯಕ್ಕೆ ಬಾಯಿ ಹಾಕಿ ವಿಷ ಹೀರಿ ತೆಗೆದೆ. ಜೀವಕ್ಕೆ ಅಪಾಯ ಇಲ್ಲದೇ ತಂಗಿ ಈಗ ಆರಾಮಾಗಿದ್ದಾಳೆ. ಇದು ಅ.8ರಂದು ನಮ್ಮ ತೋಟದಲ್ಲಿ ನಡೆದ ಘಟನೆ.

ವಿಷವನ್ನು ಬಾಯಿಂದಲೇ ಹೀರಿ ತೆಗೆಯಲು ಅಜ್ಜ, ಅಜ್ಜಿಯೇ ಪ್ರೇರಣೆ. ಕಾರಣ, ವಿಷದ ಹಾವು ಕಚ್ಚಿದವರಿಗೆ ನಮ್ಮ ಮನೆಯಲ್ಲಿ ಮದ್ದು ನೀಡುತ್ತಿದ್ದರು. ಆಗಾಗ ಇದನ್ನು ನೋಡಿದ್ದರಿಂದ ಧೈರ್ಯ ಬಂದಿದೆ ಎಂದು ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ 16 ವರ್ಷದ ಕೆ.ಆರ್‌. ನೀತಿನ್‌ ಅನುಭವ ಹೇಳಿಕೊಂಡರು.

ಆ ಕ್ಷಣದಲ್ಲಿ ಭಯ ಇರಲಿಲ್ಲ: ಅ.4ರ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಒಮ್ಮೆಗೆ ಹೆಬ್ಟಾವು ನನ್ನ ಕೈಕಾಲಿಗೆ ಬಾಯಿ ಹಾಕಿ ನುಂಗಲು ಬಂದಿತ್ತು. ತಕ್ಷಣವೇ ಪಕ್ಷದಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಹಾವಿನ ಮುಖ ಜಜ್ಜಿದೆ. ನಾನು ಬೊಬ್ಬೆ ಹಾಕುತ್ತಿದ್ದನ್ನು ಗಮನಿಸಿ ಪಕ್ಷದ ಮನೆಯ ಹುಡುಗಿ ಓಡಿ ಬಂದಿದ್ದಳು. ಹಾವು ಅಪಾಯಕಾರಿ,ಎಂದು ಅವಳನ್ನು ತಡೆದೆ. ಹೇಗೋ ಹಾವಿನ ಬಾಯಿಂದ ತಪ್ಪಿಕೊಂಡು ಬಂದೆ ಎಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ವೈಶಾಖ್‌ ರೋಚಕ ಕ್ಷಣವನ್ನು ಬಿಚ್ಚಿಟ್ಟರು.

ಒಂದು ಜೀವ ಕಾಪಾಡಿದೆ: ಸೆ.24ರಂದು ಶಿವಮೊಗ್ಗದ ತುಂಗಾ ಕಾಲುವೆಯಲ್ಲಿ ನವುಲೆಯ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈಜಾಡಿಕೊಂಡು ಆಳಕ್ಕೆ ಹೋಗುತ್ತಿದ್ದರು. ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತು ತಕ್ಷಣವೇ ನೀರಿಗೆ ಹಾರಿದೆ. ಒಬ್ಬನನ್ನು ಮಾತ್ರ ರಕ್ಷಿಸಲು ಸಾಧ್ಯವಾಯ್ತು. ಇನ್ನೊಬ್ಬನ್ನು ಜೀವ ಉಳಿಸಲಾಗಲಿಲ್ಲ. ಎಂದು ಶಿವಮೊಗ್ಗ ತ್ರಿಮೂರ್ತಿ ನಗರದ 14 ವರ್ಷದ ಕೃಷ್ಣ ನಾಯ್ಕ ಹೇಳಿದರು.

ಜೀವ ಕಳೆದು ಕೊಂಡ ಬಾಲಕಿ: ಮೇ 13ರಂದು ಹುನಗುಂದದ ಬಲಕುಂದಿಯ ಕ್ವಾರಿಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಅಲ್ಲೇ ಪಕ್ಷದಲ್ಲಿ ಈಜಾಡುತ್ತಿದ್ದ ಮಾವನ ಮಕ್ಕಳು ಅಪಾಯದಲ್ಲಿದ್ದನ್ನು ಗಮನಿಸಿ ಕ್ವಾರಿಗೆ ಇಳಿದ ನೇತ್ರಾವತಿ ಚವ್ಹಾನ್‌, ಒಬ್ಬನನ್ನು ರಕ್ಷಿಸಿ, ಇನ್ನೊಬ್ಬನ್ನು ರಕ್ಷಿಸಲು ಹೋದಾಗ ಆತ ಪ್ರಾಣಭಯದಿಂದ ಅವಳ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಜೀವ ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದು ಕೊಂಡ 15 ವರ್ಷದ ನೇತ್ರಾವತಿ ಚವ್ಹಾನ್‌, ನೀರಿನ ಡ್ರಂಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಚಾಮರಾಜ ಜಿಲ್ಲೆಯ ಜುನೇರಾ ಹರಂ, ಗೋಬರ್‌ ಗ್ಯಾಸ್‌ ಗುಂಡಿಗೆ ಬಿದ್ದ ಬಾಲಕನ್ನು ರಕ್ಷಿಸಿದ ಶಿಡ್ಲಘಟ್ಟದ ದೀಕ್ಷಿತಾ ಮತ್ತು ಅಂಬಿಕಾಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮತ್ತಿಕೆರೆಯ ಸ್ವರ್ಶ ಟ್ರಸ್ಟ್‌, ಚಾಮರಾಜನಗರದ ದೀನಬಂಧು ಸಂಸ್ಥೆ, ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ.  ಬೀದರ್‌ನ ಅರಳು ಸಂಸ್ಥೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಮಕ್ಕಳ ಕಲ್ಯಾಣ  ಪ್ರಶಸ್ತಿ ನೀಡಲಾಯಿತು. ಕ್ರೀಡೆ, ಕಲೆ, ಸಂಗೀತ, ಸಮಾಜ ಸೇವೆಯಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದ 35 ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಉಮಾಶ್ರೀ, ಸಂಸದ ಪಿ.ಸಿ.ಮೋಹನ್‌, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್‌ ಆಳ್ವ, ಬಾಲ ಭವನ ಸೊಸೈಟಿ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್‌ ಮೊದಲಾದವರು ಹಾಜರಿದ್ದರು.

ಟಾಪ್ ನ್ಯೂಸ್

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.