ಮಕ್ಕಳ ದಿನದಲ್ಲಿ ಶಿಕ್ಷಕರ ನೃತ್ಯದ ಝಲಕ್…
Team Udayavani, Nov 15, 2017, 12:17 PM IST
ಹುಣಸೂರು: ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದೆಡೆ ಶಿಕ್ಷಕಿಯರ ನತ್ಯದ ಝಲಕ್ ನಡೆದಿದ್ದರೆ, ಮತ್ತೂಂದೆಡೆ ಬಹುಮಾನ ಪಡೆಯುವ ಸಂಭ್ರಮದಲ್ಲಿ ಮಕ್ಕಳು ಮಿಂದೆದ್ದರು.
ಪೋಷಕರು ಮಕ್ಕಳು ಬಹುಮಾನ ಗಿಟ್ಟಿಸಿದ್ದನ್ನು ಕಂಡು ಸಖತ್ ಖುಷಿಯಾಗಿ ಮಕ್ಕಳೊಂದಿಗೆ ತಾವೂ ಭಾಗಿಯಾಗಿ ಸಿಹಿಯೂಟ ಸವಿದರು. ಹುಣಸೂರು ನಗರದ ಸಂತಜೋಸಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ವಿಶೇಷವಾಗಿತ್ತು.
ಮಿಂಚಿದ ಮಕ್ಕಳು: ಶಾಲೆಯ ಸಾವಿರಕ್ಕೂ ಹೆಚ್ಚು ಮಕ್ಕಳು ಬಗೆಬಗೆಯ ಬಟ್ಟೆತೊಟ್ಟು ಆಗಮಿಸಿ. ವಿಶಾಲ ವೇದಿಕೆಯಲ್ಲಿ ಪಾಠ ಹೇಳುವ ಶಿಕ್ಷಕಿಯರು ನೀಡಿದ ಅಮೋಘ ನತ್ಯ ಪ್ರದರ್ಶನ-ಹಾಡನ್ನು ಮಕ್ಕಳು-ಪೋಷಕರು ಕಣ್ತುಂಬಿಕೊಂಡರು.
ಶಿಕ್ಷಕಿಯರ ನತ್ಯದ ರಂಗು: ನಿತ್ಯ ಪಾಠ-ಆಟ ಹೇಳುವ 40 ಹೆಚ್ಚು ಶಿಕ್ಷಕರು ತಮ್ಮ ಮಕ್ಕಳಿಗಾಗಿ ಹತ್ತಕ್ಕೂ ಹೆಚ್ಚು ಕನ್ನಡ, ಹಿಂದಿ,ತೆಲಗು,ತಮಿಳು ಸಾಂಗಿಗೆ ಬಿಂಕವಿಲ್ಲದೆ ಸಖತ್ತಾಗೆ ನೃತ್ಯ ಪ್ರದರ್ಶಿಸಿದರು. ಪ್ರತಿ ನತ್ಯಕ್ಕೂ ಮಕ್ಕಳು ತಮ್ಮ ಪ್ರೀತಿಯ ಶಿಕ್ಷಕಿಯರ ನರ್ತನ ಕಂಡು ಕುಳಿತಲ್ಲೇ ನಲಿದಾಡಿದರು. ನವಿರಾಗಿ ನಕ್ಕು ಸಂತಸಪಟ್ಟರು. ಪರಿಸರ ಕುರಿತ ಮೆಮ್ ಪ್ರದರ್ಶನ, ಕನ್ನಡದ ಪ್ರೇಮ ಸಾರುವ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಬಹುಮಾನ ವಿತರಣೆ: ದಿನಾಚರಣೆ ಅಂಗವಾಗಿ ಪ್ರತಿ ತರಗತಿವಾರು ನಡೆಸಿದ ವಿವಿಧ ಆಟೋಟ-ವೇಷಭೂಷಣ ಸ್ಪರ್ಧೆಗಳ ವಿಜೇತ 250ಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡಾಪಟುಗಳಿಗೂ ಗೌರವ: ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಸುತ್ತಿರುವ ತಂಡದ ನಾಯಕಿ ದೀಪ್ತಿ ನಾಯರ್, ವರ್ಣಿಕಾ, ಪ್ರೇûಾ, ಐಶ್ವರ್ಯ, ಚಲನಾರನ್ನು ಹಾಗೂ ರಾಜ್ಯಮಟ್ಟದಲ್ಲೂ ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಸನ್ಮಾನಿಸಿದರಲ್ಲದೆ, ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಪ್ರಮೋದ್ ಹಾಗೂ ಗಣ್ಯರು ಸನ್ಮಾನಿಸಿ, ಟ್ರ್ಯಾಕ್ ಶೂಟ್ ವಿತರಿಸಿದರು.
ಅತಿಥಿಯಾಗಿದ್ದ ಶಿಕ್ಷಕ ಸೋಮಶೇಖರ್, ಶಾಲಾ ನಾಯಕಿ ಅಂತೋಣಿ ಜಾಯ್ಸಿ, ಶಿಕ್ಷಣ ಮಂತ್ರಿ ಚಿರಾಗ್, ದಂತ ವೈದ್ಯ ಡಾ.ರಘು, ಮುಖ್ಯ ಶಿಕ್ಷಕಿ ಫಿಲೋಮಿನಾ ನರೋನ್ಹಾ, ದೈಹಿಕ ಶಿಕ್ಷಕ ವಾಸುದೇವ್, ಪೋಷಕರ ಸಂಘದ ಸದಸ್ಯರಾದ ಸಂಪತ್‌ಕುಮಾರ್, ಮಾಲತಿ, ಸಹಾಯಕ ಮುಖ್ಯ ಶಿಕ್ಷಕ ವಿಕ್ಟರ್ ಫೆರ್ನಾಡಿಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.