ಜನಪ್ರತಿನಿಧಿಗಳಿಗೆ ಜವಾಬ್ದಾರಿಯ ಅರಿವಿಲ್ಲವೇ?: ಶಾಸಕರ ಗೈರು


Team Udayavani, Nov 15, 2017, 12:22 PM IST

15-19.jpg

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ಕಲಾಪಕ್ಕೆ ಹಾಜರಾಗಿರುವುದು ಬರೀ 80 ಶಾಸಕರು. ಅಧಿವೇಶನ ಪ್ರಾರಂಭವಾಗುವಾಗ ಇದ್ದದ್ದು ಬೆರಳೆಣಿಕೆಯಷ್ಟು ಶಾಸಕರು. ಅನಂತರ ಒಬ್ಬೊಬ್ಬರೇ ಬಂದು ಮಧ್ಯಾಹ್ನಕ್ಕಾಗುವಾಗ 80ಕ್ಕೇರಿತು. ಇದು ಜನಪ್ರತಿನಿಧಿಗಳು ಅಧಿವೇಶನಕ್ಕೆ ನೀಡುತ್ತಿರುವ ಬೆಲೆ. ಜನರ ಕೋಟ್ಯಂತರ ತೆರಿಗೆ ಹಣವನ್ನು ವ್ಯಯಿಸಿ, ಸಕಲ ಸೌಕರ್ಯಗಳನ್ನು ಒದಗಿಸಿ ನಡೆಸುವ ಅಧಿವೇಶನದಲ್ಲಿ ಭಾಗವಹಿಸುವ ಆಸಕ್ತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದನ್ನು ಕಳೆದ ಕೆಲ ವರ್ಷದ ಅಂಕಿಅಂಶಗಳೇ ತಿಳಿಸುತ್ತವೆ. ಕೋರಂ ಕೊರತೆಯಿಂದ ಪದೇ ಪದೇ ಕಲಾಪವನ್ನು ಮುಂದೂಡುವುದು ಈಗ ಮಾಮೂಲಾಗಿದೆ. ಅಧಿವೇಶನಕ್ಕೆ ಗೈರು ಹಾಜರಾಗುವುದು ನಿರಾಸಕ್ತಿ ಎನ್ನುವುದಕ್ಕಿಂತಲೂ ಅಸಡ್ಡೆ ಮತ್ತು ಭಂಡತನ ಎನ್ನುವುದೇ ಹೆಚ್ಚು ಸೂಕ್ತ. ಅಧಿವೇಶನಗಳಲ್ಲಿ ಭಾಗವಹಿಸಿ ಶಾಸನಗಳನ್ನು ರೂಪಿಸುವುದೇ ಜನಪ್ರತಿನಿಧಿಗಳಾದವರ ಮುಖ್ಯ ಕರ್ತವ್ಯ. ಆದರೆ ಶೇ.90ಕ್ಕಿಂತಲೂ ಹೆಚ್ಚಿನ ಜನಪ್ರತಿನಿಧಿಗಳು ಈ ಕರ್ತವ್ಯ ಲೋಪ ಎಸಗುವುದರಲ್ಲೇ ಖುಷಿ ಕಾಣುವುದು ಪ್ರಜಾತಂತ್ರದ ದುರಂತ. ಬೇರೆ ಯಾವುದೇ ಉದ್ಯೋಗದಲ್ಲಿ ಗೈರು ಹಾಜರಾಗಿಯೂ ಸಂಬಳ -ಭತ್ಯೆ ಪಡೆಯುವ ಅವಕಾಶ ಇಲ್ಲ. ಆದರೆ ರಾಜಕೀಯದಲ್ಲಿ ಎಷ್ಟೇ ಕರ್ತವ್ಯ ಲೋಪ ಮಾಡಿದರೂ ಸಂಬಳ ಮತ್ತು ಭತ್ಯೆಗಳು ಕರಾರುವಾಕ್ಕಾಗಿ ಪಾವತಿಯಾಗುತ್ತವೆ. ಅಧಿವೇಶನಕ್ಕೆ ಗೈರು ಹಾಜರಾದ ಶಾಸಕರನ್ನು ತಡೆದು ನಿಲ್ಲಿಸಿ ಏಕೆ ಅಧಿವೇಶನದಲ್ಲಿ ಭಾಗವಹಿಸಲಿಲ್ಲ ಎಂದು ಕೇಳುವ ಅವಕಾಶ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇಲ್ಲ. ಹೀಗಾಗಿ ಒಮ್ಮೆ ಗೆದ್ದು ಬಂದರೆ ಐದು ವರ್ಷ ಕಾಲ ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆಯನ್ನು ಜನಪ್ರತಿನಿಧಿಗಳು ಬೆಳೆಸಿಕೊಳ್ಳುತ್ತಾರೆ. ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಭಂಡತನವಲ್ಲದೆ ಇನ್ನೇನು?

ಬೆಳಗಾವಿ ಅಧಿವೇಶನನ್ನೇ ತೆಗೆದುಕೊಳ್ಳೋಣ. ಇಲ್ಲಿ ಮೌಡ್ಯ ನಿಷೇಧ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯಂತಹ ಹಲವು ಮಹತ್ವದ ಮಸೂದೆಗಳು ಚರ್ಚೆಗೆ ಬರಲಿವೆ. ಜತೆಗೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಾಗಿದೆ. ಬರ, ಅತಿವೃಷ್ಟಿಯಿಂದಾದ ತೊಂದರೆಗಳು, ಸಾಲಮನ್ನಾ ಸೇರಿದಂತೆ ರೈತರ ಹಲವಾರು ಸಮಸ್ಯೆಗಳು ಹೀಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಆದರೆ ಚರ್ಚಿಸಬೇಕಾದ ಜನಪ್ರತಿನಿಧಿಗಳೇ ಸದನಕ್ಕೆ ಬರುತ್ತಿಲ್ಲ. ಕೆಲವು ಮಂದಿ ಬಂದರೂ ಹಾಜರಿ ಹಾಕಿ ಹೊರಗೆಲ್ಲೋ ಇರುತ್ತಾರೆಯೇ ಹೊರತು ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಮೊದಲ ದಿನವೇ ಕೋರಂ ಕೊರತೆಯಿಂದ ಕಲಾಪ ಮುಂದೂಡವಂತಾದದ್ದು ಕೂಡ ಒಂದು ದಾಖಲೆಯಾಯಿತು. ಶಾಸಕರು ಮಾತ್ರವಲ್ಲದೆ ಸಚಿವರು ಕೂಡ ಕಲಾಪಗಳಿಗೆ ಗೈರು ಹಾಜರಾಗುತ್ತಿರುವುದು ಖಂಡನೀಯ. ಶಾಸಕರಿಗಿಂತಲೂ ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವವನ್ನು ಹೊಂದಿರುವ ಸಚಿವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸ್ಪೀಕರ್‌ ಕೋಳಿವಾಡ ಶಾಸಕರು ಸದನಕ್ಕೆ ಬರುವಾಗ ಮತ್ತು ಹೋಗುವಾಗ ಹಾಜರಾತಿಗೆ ಸಹಿ ಹಾಕುವ ನಿಯಮ ಜಾರಿಗೆ ತಂದಿದ್ದರೂ ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ.

ಅಧಿವೇಶನದ ನಡುವೆ ಏನಾದರೂ ಕಾರ್ಯಕ್ರಮ ಇದ್ದರೆ ಜನಪ್ರತಿನಿಧಿಗಳೆಲ್ಲ ಸಾಮೂಹಿಕವಾಗಿ ಗೈರು ಹಾಜರಾಗುವ ಚಾಳಿಯೂ ಹೊಸದಲ್ಲ. ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ ಕಾಂಗ್ರೆಸ್‌ ಶಾಸಕರೆಲ್ಲ ಅಧಿವೇಶನ ಬಿಟ್ಟು ಅಲ್ಲಿಗೆ ಹೋದ ಕಾರಣ ಒಂದು ದಿನದ ಅಧಿವೇಶನವೇ ರದ್ದಾಗಿತ್ತು. ಅಧಿವೇಶನ ನಡೆಯುವಾಗ ಪಕ್ಷದ ಕಾರ್ಯಕ್ರಮ ಇಟ್ಟುಕೊಳ್ಳಬಾರದು ಎಂಬ ಸಾಮಾನ್ಯ ಜ್ಞಾನವನ್ನು ಸರಕಾರ ತೋರಿಸಿದ್ದರೆ ಇದನ್ನು ತಪ್ಪಿಸಬಹುದಿತ್ತಲ್ಲವೆ? ಈ ಸಲವೂ ಚಳಿಗಾಲ ಅಧಿವೇಶ ನಡೆಯುತ್ತಿರುವಾಗಲೇ ಬಿಜೆಪಿ ಮತ್ತು ಜೆಡಿ(ಎಸ್‌) ಚುನಾವಣೆ ತಯಾರಿಯ ಅಂಗವಾಗಿ ರಥಯಾತ್ರೆಗಳನ್ನು ನಡೆಸುತ್ತಿರುವ ಪರಿಣಾಮವಾಗಿ ಆ ಪಕ್ಷಗಳ ಶಾಸಕರು ಈ ಯಾತ್ರೆಯ ಹಿಂದೆ ಹೋಗುತ್ತಿದ್ದಾರೆ. ಕಳೆದ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಚಿವರೊಬ್ಬರು ಅಲ್ಲಿ ತಮ್ಮ ಮಗನ ಮದುವೆ ಏರ್ಪಡಿಸಿದ್ದರು. ಎಲ್ಲರೂ ಮದುವೆಗೆ ಹೋದ ಕಾರಣ ಸದನದಲ್ಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು. ಅಧಿವೇಶನ ನಡೆಯುವಾಗಲೇ ಮದುವೆ ಕಾರ್ಯಕ್ರಮ ಏಕೆ ಇಟ್ಟುಕೊಳ್ಳಬೇಕಿತ್ತು? ಜನರು ಮತಕೊಟ್ಟು ಆರಿಸಿ ಕಳುಹಿಸಿರುವುದು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದೇ? ಶಾಸಕರ ಗೈರು ಹಾಜರಿ ಬಗ್ಗೆ ಹೆಚ್ಚಿನ ಪಕ್ಷಗಳು ಕಳವಳ ವ್ಯಕ್ತಪಡಿಸುತ್ತಿದ್ದರೂ ಯಾರ ಬಳಿಯೂ ಇದನ್ನು ಸರಿಪಡಿಸಲು ಸಲಹೆ ಸೂಚನೆಗಳಿಲ್ಲ. ಜನಪ್ರತಿನಿಧಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲದಿರುವುದರಿಂದ ಈ ಕುರಿತು ನಿಯ ಮ ರೂಪಿಸಲು ಸಾಧ್ಯವಾಗುತ್ತಿಲ್ಲ. ಆದರೆ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಅಧಿವೇಶನದಲ್ಲಿ ಭಾಗವಹಿಸಬೇಕು. ಪ್ರತಿಯೊಂದನ್ನು ನಿಯಮ ಮಾಡಿ ನಿರ್ದೇಶಿಸಲು ಅವರು ಪ್ರಾಥಮಿಕ ಶಾಲಾ ಮಕ್ಕಳಂತೂ ಅಲ್ಲವಲ್ಲ!

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.