ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಮಂದಿರ: ಕಾರ್ತಿಕ ಹುಣ್ಣಿಮೆ

Team Udayavani, Nov 15, 2017, 12:33 PM IST

13-Mum03a.jpg

ಮುಂಬಯಿ: ವಸಾಯಿ ರೋಡ್‌ ಪಶ್ಚಿಮದ ಗೌಡರ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನ ಮಂಡಳಿಯವರ ಬಾಲಾಜಿ ಮಂದಿರದಲ್ಲಿ ಕಾರ್ತಿಕ ಹುಣ್ಣಿಮೆ ಮಹೋತ್ಸವವು ನ. 4ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.

ಧಾರ್ಮಿಕ  ಕಾರ್ಯಕ್ರಮವಾಗಿ ವೇದಮೂರ್ತಿ ಗಿರಿಧರ ಭಟ್‌ ಅವರ ಮಾರ್ಗದರ್ಶನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭದಲ್ಲಿ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಡಳಿಯವರು ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು.

ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡ್ಡೋಡಿ ಪ್ರಕಾಶ್‌ ಪ್ರಭು, ತಬಲಾದಲ್ಲಿ ಮನೋಜ್‌ ಆಚಾರ್ಯ, ಪಖ್ವಾಜ್‌ನಲ್ಲಿ ರಾಜೇಶ್‌ ಪೈ ಮತ್ತು ಪ್ರಸಾದ್‌ ಪ್ರಭು ಸಹಕರಿಸಿದರು. ಮಂದಿರದ ಮತ್ತು ಪರಿಸರವನ್ನು ರಂಗೋಲಿ ಮತ್ತು ದೀಪ ಬೆಳಗಿಸಿ ಮಹಾಮಂಗಳಾರತಿ ನಡೆಯಿತು. ಭಕ್ತಾದಿಗಳು ವಿಶ್ವರೂಪ ದರ್ಶನದಲ್ಲಿ ಪಾಲ್ಗೊಂಡಿದ್ದರು. ಪಾಲ^ರ್‌ ಜಿಲ್ಲೆಯ ವಸಾಯಿ ಮಾಣಿಕ್‌ಪುರ ಪೊಲೀಸ್‌ ಠಾಣೆಯ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಅನಿಲ್‌ ಪಾಟೀಲ್‌ ಮತ್ತು  ಥಾಣೆಯ ಭ್ರಷ್ಟಾಚಾರ ನಿಗ್ರಹ ದಳದ ಅಸಿಸ್ಟೆಂಟ್‌ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಸಂತೋಷ್‌ ಮದನೆ ಪರಿವಾರದವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ವಾಲ್ಕೇಶ್ವರ ಮಠದ ಉಪೇಂದ್ರ ಆಚಾರ್ಯ, ನಲಸೋಪರ ಜಿಎಸ್‌ಬಿ ಸೇವಾ ಮಂಡಳಿ ಸಯಾನ್‌ ಇದರ ಸಂತೋಷ್‌ ಕುಡ್ವ, ಜಿಎಸ್‌ಬಿ ಮಂಡಳಿ ವಿರಾರ್‌ ರಾಮದಾಸ್‌ ಶ್ಯಾನ್‌ಭಾಗ್‌, ವಿಷ್ಣು ಶ್ಯಾನ್‌ಭಾಗ್‌, ಮೀರಾ-ಭಾಯಂದರ್‌ ಜಿಎಸ್‌ಬಿಯ ಕಿರಣ್‌ ಶಿರಾಳಿ, ಕರ್ನಾಟಕ ಸಂಘ ವಸಾಯಿ ಅಧ್ಯಕ್ಷ ಓ. ಪಿ. ಪೂಜಾರಿ, ಶಾಂತಿಧಾಮ ಸೇವಾ ಸಮಿತಿಯ ವಿಶ್ವಸ್ತ ಅಭಿಜಿತ್‌ ನರಸಿಂಹ ಪ್ರಭು, ಇತರ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತೀ ಶನಿವಾರ ಜರಗರುವ ಭಜನೆಯ ಶಾಶ್ವತ ಸೇವಾ ದಾರರಿಗೆ, ವಿಶೇಷ ಸೇವಾದಾರರಿಗೆ ಮತ್ತು ಗಣ್ಯರಿಗೆ ಪ್ರಸಾದ ವಿತರಿಸಲಾಯಿತು. ಈ ಉತ್ಸವದ ಶಾಶ್ವತ ಸೇವಾದಾರರಾದ ಸಮಿತಿಯ ಉಪಾಧ್ಯಕ್ಷ ಹೊಸಮಠ ಮನೋಹರ ಶೆಣೈ ಮತ್ತು ಸಮಿತಿಯ ಜತೆ ಕಾರ್ಯದರ್ಶಿ ಮಂಜೇಶ್ವರ ವಿವೇಕಾನಂದ ಭಕ್ತ ಪರಿವಾರದಿಂದ ಅನ್ನಸಂತರ್ಪಣೆ ಜರಗಿತು.

ದೇವರ ಮಂಟಪಕ್ಕೆ ಅಲಂಕರಿಸಲು ಹೂವಿನ ಸೇವೆ ಉದ್ಯಮಿ ನಿಟ್ಟೆ ಜಯಾನಂದ ಶೆಣೈ ಮತ್ತು ಬಾಲಾಜಿ ಟೂರ್‌ ಮತ್ತು ಟ್ರಾವೆಲ್ಸ್‌ನ ಮಾಲಕ ರಮೇಶ್‌ ಪೈ ಪ್ರಾಯೋಜಿಸಿದ್ದರು. ಸಮಿತಿಯ ಅಧ್ಯಕ್ಷ ತಾರಾನಾಥ ಪೈ, ಗೌರವಾಧ್ಯಕ್ಷ ವಸಂತ್‌ ನಾಯಕ್‌, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿ ಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಮಿತಿಯ ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.ಮಹಿಳಾ ವಿಭಾಗದವರಿಂದ ಸಲ್ಲಿಸಿದ ಹೂವಿನ ರಂಗೋಲಿ, ಎಚ್‌. ವಿನಾಯಕ ಪೈ ನೇತೃತ್ವದಲ್ಲಿ ಅಲಂಕರಿಸಿದ ದೇವರ ಮಂಟಪ ನೆರೆದ ಭಕ್ತರನ್ನು ರಂಜಿಸಿತು. ಮಂದಿರದ ಮತ್ತು ಜೈ ಅಮ್ಮ ಅನ್ನಪೂರ್ಣೇಶ್ವರಿ ಸಭಾಗೃಹದ ಆವರಣದಲ್ಲಿ 3 ಅಗ್ನಿಶಾಮಕ ಯಂತ್ರ ಗಳನ್ನು  ಮಹಿಳಾ ವಿಭಾಗದ ಉಪಾಧ್ಯಕ್ಷೆ ಸ್ಮಿತಾ ಶ್ರೀನಿವಾಸ ಪಡಿಯಾರ್‌ ಪರಿವಾರದವರು ಪ್ರಾಯೋಜಿಸಿದ್ದರು.

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.