3ನೇ ದಿನವೂ ಮುಂಬಯಿ ಶೇರು ಕುಸಿತ; ವಾಣಿಜ್ಯ ಕೊರತೆ ಗಂಭೀರ
Team Udayavani, Nov 15, 2017, 4:43 PM IST
ಮುಂಬಯಿ : ನಿರಂತರ ಮೂರನೇ ದಿನವಾಗಿ ಇಂದು ಬುಧವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 181 ಅಂಕಗಳ ಕುಸಿತವನ್ನು ಕಂಡಿದೆ; ದಿನಾಂತ್ಯದ ವಹಿವಾಟನ್ನು ಮೂರು ವಾರಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಳಿಸಿದೆ; ದೇಶದ ವಾಣಿಜ್ಯ ಕೊರತೆ ಬಹುತೇಕ ಮೂರು ವರ್ಷಗಳ ಎತ್ತರಕ್ಕೆ ತಲುಪಿರುವುದು ಶೇರು ಪೇಟೆಯ ಗಂಭೀರ ಚಿಂತೆಗೆ ಕಾರಣವಾಗಿದೆ.
ಸೆನ್ಸೆಕ್ಸ್ ಇಂದಿನ ವಹಿವಾಟನ್ನು 181.43 ಅಂಕಗಳ ನಷ್ಟದೊಂದಿಗೆ 32,944.94 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು. ಕಳೆದೆರಡು ದಿನಗಳಲ್ಲಿ ಸೆನ್ಸೆಕ್ಸ್ ಕಂಡ ಒಟ್ಟು ನಷ್ಟ 372.79 ಅಂಕ.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 68.55 ಅಂಕಗಳ ನಷ್ಟದೊಂದಿಗೆ 10,188.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಏಶ್ಯನ್ ಶೇರು ಪೇಟೆಗಳಲ್ಲೂ ಇದೇ ರೀತಿಯ ನೇತ್ಯಾತ್ಮಕ ಸ್ಥಿತಿ ನೆಲೆಸಿದ್ದು ಕಚ್ಚಾ ತೈಲ ಬೆಲೆ ಏರುತ್ತಿರುವುದು ಶೇರು ಪೇಟೆಗೆ ಮಾರಕವೆಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.