ಉ.ಪ್ರ. ವಾಯು ನೆಲೆಗಳ ಮೇಲೆ ಉಗ್ರ ದಾಳಿ ಸಂಭವ: ಕಟ್ಟೆಚ್ಚರ
Team Udayavani, Nov 15, 2017, 5:03 PM IST
ಲಕ್ನೋ : ಶಸ್ತ್ರ ಸಜ್ಜಿತರಾಗಿರುವ ಸುಮಾರು ಏಳು ಲಷ್ಕರ್ ಎ ತಯ್ಯಬ ಉಗ್ರರು ಉತ್ತರ ಪ್ರದೇಶದಲ್ಲಿನ ಭಾರತೀಯ ವಾಯು ಪಡೆಯ ವಾಯು ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಅನುಸರಿಸಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಸುಮಾರು ಆರರಿಂದ ಏಳು ಉಗ್ರರು ಗಾಜಿಯಾಬಾದ್ನ ಹಿಂದೋನ್ ಸಹಿತ ಉತ್ತರ ಪ್ರದೇಶದ ವಾಯು ಪಡೆಯ ಪ್ರಮುಖ ವಾಯು ನಲೆಗಳನ್ನು ಗುರಿ ಇರಿಸಿಕೊಂಡು ದಾಳಿಗೆ ಸಜ್ಜಾಗಿ ನಿಂತಿರುವುದಾಗಿ ಭಾರತೀಯ ಗುಪ್ತಚರ ದಳ “ರಾ’ ತಿಳಿಸಿದೆ.
ಲಷ್ಕರ್ ಉಗ್ರರ ಈ ತಂಡ ಪ್ರಕೃತ ಕಾಶ್ಮೀರದಲ್ಲಿ ಅಡಗಿಕೊಂಡಿರುವುದಾಗಿ ರಾ ತಿಳಿಸಿದೆ. ಅವರ ಬಳಿ ಎಕೆ 47 ರೈಫಲ್ಗಳು, ಗ್ರೆನೇಡ್ ಲಾಂಚರ್ಗಳು ಮತ್ತು ಹ್ಯಾಂಡ್ ಗ್ರೆನೇಡ್ಗಳೂ ಇವೆ ಎನ್ನಲಾಗಿದೆ.
ಈ ಮಾಹಿತಿಯ ಬೆನ್ನಲ್ಲೇ ಇಂದು ಗಾಜಿಯಾಬಾದ್ನ ಹಿಂದೋನ್ ವಾಯು ನೆಲೆಯ ಗೋಡೆ ಹಾರಿ ಒಳ ಪ್ರವೇಶಿಸಲು ಯತ್ನಿಸಿದ ಅಪರಿಚಿತ ತರುಣನನ್ನು ಭದ್ರತಾ ಪಡೆಗಳು ಗುಂಡೆಸೆದು ಕೆಳಗುರುಳಿಸಿ ಬಳಿಕ ಅತನನ್ನು ಆಸ್ಪತ್ರೆಗೆ ಒಯ್ದರು. ಅನಂತರದಲ್ಲಿ ಆತ ಉತ್ತರ ಪ್ರದೇಶದ ನಿವಾಸಿ, ನಿರ್ಗತಿಕ ತರುಣನೆಂದು ಗೊತ್ತಾಯಿತು.
ಭಾರತ -ನೇಪಾಲ ಗಡಿಯ 550 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.