ಚೀನಾ ಓಪನ್ ಬ್ಯಾಡ್ಮಿಂಟನ್: ಸೈನಾ ಎರಡನೇ ಸುತ್ತಿಗೆ
Team Udayavani, Nov 16, 2017, 7:10 AM IST
ಶಾಂಘೈ(ಚೀನಾ): ಕಳೆದ ವಾರವಷ್ಟೇ ಪಿ.ವಿ.ಸಿಂಧು ಅವರನ್ನು ಸೋಲಿಸಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಸೈನಾ ನೆಹ್ವಾಲ್ ಚೀನಾ ಓಪನ್‌ನಲ್ಲಿ 2ನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ 21-12, 21-13 ರಿಂದ ಅಮೆರಿಕದ ಬೈವೆನ್ ಜಾಂಗ್ ವಿರುದ್ಧ ಗೆಲುವು ಪಡೆದರು. ಎರಡೂ ಗೇಮ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಎದುರಾಳಿಗೆ ಭರ್ಜರಿ ಏಟು ನೀಡಿದರು. ಯಾವ ಹಂತದಲ್ಲಿಯೂ ಅಮೆರಿಕ ಆಟಗಾರ್ತಿಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಸೈನಾ 2ನೇ ಸುತ್ತಿನಲ್ಲಿ ವಿಶ್ವ ನಂ.5ನೇ ಶ್ರೇಯಾಂಕಿತೆ ಜಪಾನ್‌ನ ಆಕನೆ ಯಮಗುಚಿ ಸವಾಲನ್ನು ಎದುರಿಸಲಿದ್ದಾರೆ.
ಸೌರಭ್ ವರ್ಮಾಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯ ಪ್ರತಿಭೆ ಸೌರಭ್ ವರ್ಮಾ 14-21, 21-15, 11-21 ರಿಂದ ಫ್ರಾನ್ಸ್‌ನ ಬ್ರೈಸ್ ಲಿವರ್ಡೆಜ್ ವಿರುದ್ಧ ಸೋಲುಂಡರು. 55 ನಿಮಿಷಗಳ ಕಾಲ ನಡೆದ ಗೇಮ್‌ನಲ್ಲಿ ಭಾರತೀಯ ಆಟಗಾರ ಹೋರಾಟದ ಸೋಲುಕಂಡರು.
ಉಳಿದಂತೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಗೆಲುವು ಸಾಧಿಸಿದೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೋನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಸೋಲುಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BGT 2024-25: ಅಡಿಲೇಡ್ ಟೆಸ್ಟ್ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ
Bengaluru: ಮರಕ್ಕೆ ಬೈಕ್ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು
Bengaluru Crime: ಅತಿಯಾಗಿ ಮೊಬೈಲ್ ಬಳಸಿದಕ್ಕೆ ಪ್ರೇಯಸಿ ಹತ್ಯೆ?
Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!
Maharashtra; ಗೊಂಡಿಯಾ ಬಸ್ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.