ಶ್ರೀ ಶ್ರೀ ನಿರ್ಧಾರಕ್ಕೆ ಹಲವರಿಂದ ಅಪಸ್ವರ
Team Udayavani, Nov 16, 2017, 11:45 AM IST
ಲಕ್ನೋ: ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಮುಂದಾಗಿರುವ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ನಿರ್ಧಾರಕ್ಕೆ ಹಲವರು ಅಪಸ್ವರ ಎತ್ತಿದ್ದಾರೆ.
ರಾಮಮಂದಿರ ವಿಚಾರ ಸುಪ್ರೀಂಕೋರ್ಟ್ನಲ್ಲಿರುವಾಗ, ತೀರ್ಪು ಬರುವವರೆಗೆ ಸಂಧಾನ ಮಾತುಕತೆಯ ಅಗತ್ಯವಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ಮಾಧವ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ವಿಶ್ವ ಹಿಂದೂ ಪರಿಷತ್ ಕೂಡ ಸಂಧಾನಕ್ಕೆ ಆಕ್ಷೇಪ ಎತ್ತಿದ್ದು, ಪುರಾತತ್ವ ಸಾಕ್ಷ್ಯಗಳೆಲ್ಲ ಹಿಂದೂಗಳ ಪರ ಇರುವಾಗ ಸಂಧಾನದ ಅಗತ್ಯವೇ ಇಲ್ಲ ಎಂದಿದೆ.
ಮತ್ತೂಂದೆಡೆ, ರವಿಶಂಕರ್ ಗುರೂಜಿ ಅವರು ಮಾತುಕತೆ ನಡೆಸುವ ಮೊದಲು ಅವರ ಯೋಜನೆ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮುಸ್ಲಿಂ ನಾಯಕರು ಆಗ್ರಹಿಸಿದ್ದಾರೆ. ಅಲ್ಲದೆ, ಗುರೂಜಿ ಎಲ್ಲರ ಜೊತೆ ಮಾತಾನಾಡುತ್ತಾರೆ ಎಂದು ಹೇಳಿದ್ದರೂ ಈವರೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಯಾರನ್ನೂ ಸಂಪರ್ಕಿಸಿಲ್ಲ ಎಂದು ಮಂಡಳಿ ಕಾರ್ಯದರ್ಶಿ ಮೌಲಾನಾ ವಾಲಿ ರೆಹಮಾನ್ ಹೇಳಿದ್ದಾರೆ. ಬುಧವಾರ ಉ.ಪ್ರ. ಸಿಎಂ ಯೋಗಿ ಅವರನ್ನು ಗುರೂಜಿ ಭೇಟಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.