ಪದೇಪದೇ ಕೈಕೊಡುವ ಕಂಪ್ಯೂಟರ್‌ ಆಸ್ತಿ ನೋಂದಣಿಗೆ ಅಡ್ಡಿ 

Team Udayavani, Nov 16, 2017, 12:35 PM IST

16-Nov-8.jpg

ಮೂಲ್ಕಿ: ದ.ಕ. ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಸುಮಾರು 52 ಗ್ರಾಮಗಳ ದಾಖಲೆ ಹಾಗೂ ಆಸ್ತಿ ಕ್ರಯ, ವಿಕ್ರಯಗಳ
ನೋಂದಣಿ ಕೆಲಸವನ್ನು ನಿರ್ವಹಿಸಬೇಕಾದ ಮೂಲ್ಕಿ ಉಪ ನೋಂದಣಾಧಿಕಾರಿ ಕಚೇರಿ ಸರಕಾರಕ್ಕೆ ಅತಿ ಹೆಚ್ಚು ಕಂದಾಯ ತಂದುಕೊಡುತ್ತಿದ್ದರೂ, ಕಂಪ್ಯೂಟರ್‌ ಹಾಗೂ ಇತರ ಸಮಸ್ಯೆಗಳಿಂದಾಗಿ ಹಲವು ಸಲ ಸೇವೆಯಲ್ಲಿ ವ್ಯತ್ಯಯವಾಗಿ ಜನರ ಪರದಾಟಕ್ಕೂ ಕಾರಣವಾಗುತ್ತಿದೆ.

ನೋಂದಣಿಯ ಎಲ್ಲ ಕೆಲಸಗಳನ್ನು ಕಂಪ್ಯೂಟರೀಕರಣ ಮಾಡಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ
ಸಿಬಂದಿ ಮೂಲಕ ಬಹುತೇಕವಾಗಿ ನಿರ್ವಹಿಸಲಾಗುತ್ತಿದೆ.

ಕೆಲವೊಂದು ಕೆಲಸಗಳನ್ನು ಮಾತ್ರ ಇಲಾಖೆ ಅಧಿಕಾರಿಗಳು ಮತ್ತು ಬೆರಳೆಣಿಕೆ ಸಿಬಂದಿ ಕೈಗೊಳ್ಳುತ್ತಾರೆ. ಪ್ರತಿದಿನವೂ ಇಲ್ಲಿ 25ರಿಂದ 45ರ ತನಕ ದಾಖಲೆಗಳ ನೋಂದಣಿ ಮಾಡಲಾಗುತ್ತದೆ. ಗೊಂದಲ ತಪ್ಪಿಸಲು ಟೋಕನ್‌ ನೀಡುವ ಮೂಲಕ ಪಾಳಿಯನ್ನು ನಿರ್ವಹಿಸಲಾಗುತ್ತದೆ. ನೋಂದಣಿ ವೇಳೆ ಆಗಾಗ ಕಂಪ್ಯೂಟರ್‌ ಸಮಸ್ಯೆಯಿಂದ ಒಂದೆರಡು ತಾಸು ವ್ಯತ್ಯಯ ಆಗುವುದುಂಟು. ಆದರೆ, ಸೋಮವಾರ ಕಂಪ್ಯೂಟರ್‌ ಕೆಟ್ಟಿದ್ದರಿಂದ ಮಂಗಳವಾರ ಮಧ್ಯಾಹ್ನದವರೆಗೆ ಯಾವುದೇ ನೋಂದಣಿ ಸಾಧ್ಯವಾಗಿಲ್ಲ. ತಜ್ಞರು ಬಂದು ಸರಿಪಡಿಸಿದ ಮೇಲೆ 25 ದಾಖಲೆಗಳ ನೋಂದಣಿಯಾಗಿದೆ.

ಹಳೆಯ ಕಟ್ಟಡ
ಅತ್ಯಂತ ಹಳೆಯದಾಗಿರುವ ಈ ಕಟ್ಟಡ ಬಗ್ಗೆ ಇಲಾಖೆ ಪೂರ್ಣ ನಿರ್ಲಕ್ಷ್ಯ ವಹಿಸಿರುವ ಪರಿಣಾಮ, ಈ ಕಚೇರಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಎರಡು ವರ್ಷಗಳಿಂದ ಇಲ್ಲಿ ತಾಂತ್ರಿಕ ತೊಂದರೆಗಳು ಆಗಾಗ ಎದುರಾಗುತ್ತಿದ್ದು, ಸಾರ್ವಜನಿಕರಿಗೆ ಸೇವೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದ ಸಾಬೀತಾಗಿದೆ.

ಸರಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಒದಗಿಸುವ ಕಚೇರಿಯನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಅಚ್ಚರಿ ತಂದಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ, ಕುಳಿತುಕೊಳ್ಳಲು ಆಸನಗಳೂ ಇಲ್ಲದೆ ಮೂಲಸೌಲಭ್ಯ ರಹಿತ ಸರಕಾರಿ ಕಚೇರಿ ಎಂಬ ಅಪಕೀರ್ತಿಗೂ ಇದು ಪಾತ್ರವಾಗಿದೆ.

ಸರದಿಯಲ್ಲಿ ನಿಲ್ಲಬೇಕು
ಸಿಬಂದಿ ಎಷ್ಟು ಕ್ರಿಯಾಶೀಲರಾದರೂ ಕಂಪ್ಯೂಟರ್‌ ಕೆಟ್ಟು ಹೋಯಿತೆಂದರೆ ಸರದಿಯಲ್ಲಿ ನಿಂತವರ ಕಥೆ ದೇವರಿಗೇ ಪ್ರೀತಿ ಎಂಬಂತಾಗುತ್ತದೆ. ನೋಂದಣಿ ಶುಲ್ಕದ ರೂಪದಲ್ಲಿ ಇಲಾಖೆಗೆ ನಿತ್ಯ ಲಕ್ಷಗಟ್ಟಲೆ ಆದಾಯ ಬರುತ್ತದೆ. ಅದರಲ್ಲಿ ಒಂದಂಶವನ್ನೂ ಕಚೇರಿಯ ಸೌಲಭ್ಯಗಳ ಹಾಗೂ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಬಳಸಲು ಹಿಂದೇಟು ಹಾಕುತ್ತಿರುವ ಕಾರಣ ಈ ಬಗೆಯ ಸಮಸ್ಯೆ ಆಗುತ್ತಿದೆ.

ಕೂಪನ್‌ ಪಡೆದು ಸರದಿಯಲ್ಲಿ ನಿಲ್ಲುವವರು ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿರುತ್ತಾರೆ. ಕೆಲವು ನಿರ್ಧಾರಗಳನ್ನು ರೂಪಿಸಿಕೊಂಡು, ಪೂರ್ವ ತಯಾರಿಯೊಂದಿಗೇ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಅಥವಾ ಸರದಿಯಲ್ಲಿ ಸಾಕಷ್ಟು ಹೊತ್ತು ನಿಂತ ಮೇಲೆ ಕಂಪ್ಯೂಟರ್‌ ತೊಂದರೆಯಿಂದ ನೋಂದಣಿ ಸ್ಥಗಿತಗೊಂಡರೆ, ಅವರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.

ನೇತಾಡುವ ವೈರಿಂಗ್‌
ಮಳೆ ಬಂದಾಗ ಕಟ್ಟಡ ಸೋರುತ್ತದೆ. ವೈರಿಂಗ್‌ ಕಿತ್ತು ನೇತಾಡುತ್ತಿದೆ. ಕಂಪ್ಯೂಟರ್‌ ಬಳಕೆಗೆ ಅರ್ಥಿಂಗ್‌ನಂತಹ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ, ಕಂಪ್ಯೂಟರ್‌ಗಳು ಆಗಾಗ ಕೆಡುತ್ತಿವೆ. ಎರಡು ವರ್ಷಗಳಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದ್ದರೂ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲ್ಲಿರುವ ಶೌಚಾಲಯ ದುರಸ್ತಿಗೊಳಿಸಿ, ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು. ಉತ್ತಮ ಗುಣಮಟ್ಟದ ಸರ್ವರ್‌ ಒದಗಿಸಿ, ಅದು ಕೈಕೊಟ್ಟಾಗ ಕಾರ್ಯ ನಿರ್ವಹಿಸಲು ಬದಲಿ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ತಾಂತ್ರಿಕ ತಜ್ಞರಿಲ್ಲ
ಕಚೇರಿಯ ಕಂಪ್ಯೂಟರ್‌ ವ್ಯವಸ್ಥೆಯನ್ನು ಹೊರಗುತ್ತಿಗೆ ವ್ಯವಸ್ಥೆಯ ಮೂಲಕ ಇಲಾಖೆ ನಿರ್ವಹಿಸುತ್ತಿದ್ದು, ಕೆಲವೊಮ್ಮೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಾಗ ಇಲ್ಲಿ ತಜ್ಞರು ಲಭ್ಯರಿಲ್ಲದೆ ದೊಡ್ಡ ಪ್ರಮಾಣದ ಸಮಸ್ಯೆಯಾಗುತ್ತಿದೆ. ತತ್‌ಕ್ಷಣ ಮೇಲಧಿಕಾರಿಗಳು ಹಾಗೂ ತಜ್ಞರನ್ನು ಸಂಪರ್ಕಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ವ್ಯವಸ್ಥೆಯೊಳಗೆ ಕೆಲಸ ನಿರ್ವಹಿಸುತ್ತೇವೆ. ಎಲ್ಲವೂ ಕಂಪ್ಯೂಟರೀಕರಣ ಆಗಿರುವ ಕಾರಣ, ಮ್ಯಾನ್ಯುವಲ್‌ ಕೆಲಸ ಮಾಡಲು ಅವಕಾಶ ಇಲ್ಲದೆ ಕೆಲವು ಬಾರಿ ಅಡಚಣೆ ಆಗುತ್ತಿದೆ.
ಗೋಪಾಲಕೃಷ್ಣ,
   ಪ್ರಭಾರ ನೋಂದಣಾಧಿಕಾರಿ

   ವಿಶೇಷ ವರದಿ

ಟಾಪ್ ನ್ಯೂಸ್

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.